ಕರ್ನಾಟಕ

karnataka

ETV Bharat / spiritual

ಬುಧವಾರದ ದಿನ ಭವಿಷ್ಯ: ಈ ರಾಶಿಯವರು ಇಂದು ಬೆಲೆ ಬಾಳುವ ಸ್ವತ್ತುಗಳ ಕುರಿತು ಜಾಗರೂಕರಾಗಿರಿ - wednesday horoscope

ಬುಧವಾರದ ರಾಶಿ ಭವಿಷ್ಯ ಹೀಗಿದೆ.

ಬುಧವಾರದ ದಿನ ಭವಿಷ್ಯ
ಬುಧವಾರದ ದಿನ ಭವಿಷ್ಯ

By ETV Bharat Karnataka Team

Published : Mar 13, 2024, 5:22 AM IST

ಇಂದಿನ ಪಂಚಾಂಗ

13-03-2024, ಬುಧವಾರ

ಸಂವತ್ಸರ:ಶುಭಕೃತ್

ಆಯನ:ಉತ್ತರಾಯಣ

ಮಾಸ:ಫಾಲ್ಗುಣ

ಪಕ್ಷ:ಶುಕ್ಲ

ತಿಥಿ:ಚತುರ್ಥಿ

ನಕ್ಷತ್ರ:ಅಶ್ವಿನಿ

ಸೂರ್ಯೋದಯ:ಮುಂಜಾನೆ06:26 ಗಂಟೆಗೆ

ಅಮೃತಕಾಲ:ಮಧ್ಯಾಹ್ನ 12:02 ರಿಂದ 12:50 ಗಂಟೆವರೆಗೆ

ರಾಹುಕಾಲ:ಮಧ್ಯಾಹ್ನ13:57 ರಿಂದ 15:27 ಗಂಟೆವರೆಗೆ

ದುರ್ಮುಹೂರ್ತಂ:ಮಧ್ಯಾಹ್ನ12:27 ರಿಂದ 13:57 ಗಂಟೆವರೆಗೆ

ಸೂರ್ಯಾಸ್ತ:ಸಂಜೆ06:28 ಗಂಟೆಗೆ

ವರ್ಜ್ಯಂ:ಸಂಜೆ 18:15 ರಿಂದ 19:50 ಗಂಟೆವರೆಗೆ

ಮೇಷ :ಇಂದು ನೀವು ನಿಮ್ಮ ಸ್ಮರಣೆಗಳಲ್ಲಿ ಮುಳುಗಿ ಹೋಗುತ್ತೀರಿ. ನಿಮ್ಮ ಮಧುರವಾದ ಭಾಗ ಎಲ್ಲ ಕಡೆ ಹರಡಿದ್ದು, ಕೆಲಸದಲ್ಲಿ ಅದು ಎಲ್ಲರಿಗೂ ಕಾಣುತ್ತದೆ. ನಿಮ್ಮ ವೆಚ್ಚಗಳ ಕುರಿತು ನೀವು ಕೊಂಚ ಎಚ್ಚರಿಕೆ ವಹಿಸಬೇಕು ಮತ್ತು ಭವಿಷ್ಯಕ್ಕೆ ಉಳಿತಾಯ ಮಾಡಲು ಹೆಚ್ಚು ಗಮನ ನೀಡಬೇಕು.

ವೃಷಭ : ನೀವು ಇಂದು ಕೊಂಚ ಆಕ್ರಮಣಶೀಲ ಮತ್ತು ಪ್ರಭಾವಿಯಾಗಿರುವ ಅಗತ್ಯವಿದೆ ಎಂದು ಕಾಣುತ್ತೀರಿ. ಆದರೆ ನಿಮ್ಮ ಆಕ್ರಮಣಶೀಲತೆಯನ್ನು ಸತತವಾಗಿ ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಭೇಟಿಯಾಗುವ ಜನರೊಂದಿಗೆ ಸೌಹಾರ್ದತೆಯಿಂದಿರಿ. ಇಂದು ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳದೇ ಇರಲು ಪ್ರಯತ್ನಿಸಿ. ಸಾಮಾನ್ಯ ದಿನದಂತೆ ಕಾಲ ಕಳೆಯಿರಿ.

ಮಿಥುನ : ನೀವು ಮಾಡುವ ಪ್ರತಿ ಕೆಲಸದಲ್ಲೂ ಪರಿಪೂರ್ಣತೆಯನ್ನು ನಿರೀಕ್ಷೆ ಮಾಡುತ್ತೀರಿ ಮತ್ತು ಈ ತತ್ವವನ್ನು ನೀವು ಅಳವಡಿಸಿಕೊಂಡಿದ್ದೀರಿ ಕೂಡಾ. ನೀವು ಮಾಡಬೇಕಾದುದು ಇಷ್ಟೇ. ನೀವು ವ್ಯಯಿಸುವ ಶಕ್ತಿ ಕುರಿತು ಧನಾತ್ಮಕವಾಗಿರುವುದು ಮತ್ತು ಸರಿಯಾದ ಜೀವನದ ಆಯ್ಕೆಗಳನ್ನು ಮಾಡುವಲ್ಲಿ ಸರಿಯಾಗಿ ಗಮನ ನೀಡುವುದು.

ಕರ್ಕಾಟಕ : ಇಂದು ಅದೃಷ್ಟದೇವತೆ ನಿಮ್ಮ ಕಡೆಗಿರುವಂತೆ ಕಾಣುತ್ತಿದೆ. ಸ್ಥಿರಾಸ್ತಿಗಳ ಮೇಲೆ ನಿಮ್ಮ ಹೂಡಿಕೆಗಳಿಗೆ ಅಪಾರ ಪ್ರತಿಫಲ ಪಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ನಿರೀಕ್ಷಿಸಬಹುದು. ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಪ್ರತಿಫಲ ಪಡೆಯುವ ದಿನವಾಗುವ ಸಾಧ್ಯತೆ ಇದೆ.

ಸಿಂಹ : ನೀವು ಏನೋ ಒಂದು ವಿಭಿನ್ನವಾದುದನ್ನು ಮಾಡುವ ಬಯಕೆ ಹೊಂದಿರುವಂತೆ ಭಾವಿಸುತ್ತೀರಿ. ಸಂತೋಷದ ಮನಸ್ಥಿತಿ ಇಡೀ ದಿನ ನಿಮ್ಮ ಜೊತೆಯಲ್ಲಿರುತ್ತದೆ. ತಾರೆಗಳು ನಿಮಗೆ ಪೂರಕವಾಗಿರುವುದರಿಂದ ನೀವು ಹಾಕುವ ಶಕ್ತಿಗೆ ಅನುಗುಣವಾಗಿ ನೀವು ಎಲ್ಲ ಸವಾಲುಗಳನ್ನೂ ಎದುರಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

ಕನ್ಯಾ : ಹಣಕಾಸಿನ ವಿಷಯದಲ್ಲಿ ನೀವು ಕೆಲ ಅಡೆತಡೆಗಳನ್ನು ಎದುರಿಸಬಹುದು. ನಿಮ್ಮ ಹೃದಯವನ್ನಲ್ಲ, ಮನಸ್ಸಿಗೆ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡಿ. ನಿಮ್ಮ ಬೆಲೆಬಾಳುವ ಸ್ವತ್ತುಗಳ ಕುರಿತು ಜಾಗರೂಕರಾಗಿರಿ. ಹೊಸ ಯೋಜನೆಗಳು ಮತ್ತು ಕಾನೂನು ಕರ್ತವ್ಯಗಳ ಕುರಿತು ಮಾತನಾಡುವಾಗ, ನೀವು ಏನು ಮಾಡಲು ನಿರ್ಧರಿಸಿದ್ದೀರಿ ಎಂದು ತಿಳಿದಿರಿ. ಏಕೆಂದರೆ ಅದು ನಿಮ್ಮ ಮೇಲೆ ಸುದೀರ್ಘ ಪರಿಣಾಮ ಬೀರಬಹುದು.

ತುಲಾ : ಇಂದು ನೀವು ಎಷ್ಟು ಪ್ರತಿಭಾವಂತರು ಎಂದು ಜಗತ್ತಿನ ಎದುರು ಪ್ರದರ್ಶಿಸಲು ಪರಿಪೂರ್ಣ ದಿನದಂತೆ ಕಾಣುತ್ತದೆ. ಬಟ್ಟೆಗಳನ್ನು ಕೊಳ್ಳುವಲ್ಲಿ ಸಂತೋಷ ಪಡುವವರು, ಇಂದು ಅವುಗಳನ್ನು ಕೊಳ್ಳಲು ಅವಕಾಶ ಪಡೆಯಬಹುದು. ನಿಮಗೆ ಸಂಬಂಧಿಸಿದ ವಿಷಯಕ್ಕೆ ಮಾಡಲು ಮತ್ತು ಹೇಳಲು ಲಕ್ಷ್ಯ ನೀಡುವುದು ಅಗತ್ಯ. ನೀವು ಇಂದಿನ ಬಹುತೇಕ ದಿನವನ್ನು ಹಗಲುಗನಸಿನಲ್ಲಿ ಕಳೆಯಬಹುದು. ಆದರೆ ಒಟ್ಟಾರೆ ಪ್ರತಿಯೊಂದು ಕೂಡಾ ನಿಮಗೆ ಸುಸೂತ್ರವಾಗಿರುತ್ತದೆ.

ವೃಶ್ಚಿಕ : ನೀವು ಹೊಸ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಹೆಚ್ಚಾಗಿದೆ. ಆದಾಗ್ಯೂ, ಈ ಕಾರ್ಯಕ್ರಮಗಳು ನಿಮ್ಮ ನಿರೀಕ್ಷೆಗಳನ್ನು ತಲುಪದೇ ಇರುವ ಸಾಧ್ಯತೆಗಳಿವೆ. ಆದರೆ, ಭರವಸೆ ಕಳೆದುಕೊಳ್ಳಬೇಡಿ ಮತ್ತು ನಿರುತ್ಸಾಹಗೊಳ್ಳಬೇಡಿ. ನಿಮ್ಮ ಸ್ಫೂರ್ತಿಯನ್ನು ಎತ್ತರದಲ್ಲಿರಿಸಿಕೊಳ್ಳಿರಿ. ಯಶಸ್ವಿಯಾಗುವವರೆಗೂ ಮತ್ತೆ ಮತ್ತೆ ಪ್ರಯತ್ನಿಸಿ ಎಂದು ಶಾಲೆಯಲ್ಲಿ ಕಲಿತ ಮೊದಲ ಪಾಠವನ್ನು ಅನುಷ್ಠಾನಗೊಳಿಸಿ.

ಧನು : ನಿಮ್ಮ ದಿನ ಸಂಪೂರ್ಣ ಭರವಸೆ ಮತ್ತು ಸಂತೋಷದಿಂದ ಕೂಡಿದೆ. ಹೆಚ್ಚು ಪರಿಶೀಲನೆ ಅಗತ್ಯವಾಗಿದ್ದ ಕೆಲಸವೂ ಬಹಳ ಬೇಗನೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ನೀವು ದೀರ್ಘಾವಧಿ ವಿವಾದಗಳನ್ನು ಕೂಡಾ ತಾರ್ಕಿಕ ವಿವರಣೆಯೊಂದಿಗೆ ಪರಿಹರಿಸಲು ನೆರವಾಗುತ್ತೀರಿ.

ಮಕರ :ನಿಮ್ಮ ವಿಶ್ವಾಸ ನಿಮ್ಮನ್ನು ಹಲವು ಸ್ಥಳಗಳಿಗೆ ಕೊಂಡೊಯ್ಯಲಿದೆ. ನಿಮ್ಮ ಧನಾತ್ಮಕ ಹೊರನೋಟ ನಿಮಗೆ ನಿಮ್ಮ ಗುರಿಗಳಿಗೆ ಹತ್ತಿರವಾಗಲು ನೆರವಾಗುತ್ತದೆ. ನೀವು ನಿರುದ್ವಿಗ್ನರಂತೆ ಕಾಣುವವರಲ್ಲ. ನಿಮ್ಮ ಲೆಕ್ಕಾಚಾರದ ನಿರ್ಧಾರಗಳು ಮತ್ತು ಸಾಧನೆಗಳು ನಿಮಗೆ ಯಶಸ್ವಿಯಾಗಲು ನೆರವಾಗುತ್ತವೆ ಎಂದು ನೀವು ತಿಳಿದಿದ್ದೀರಿ.

ಕುಂಭ : ಇಂದು ನಿಮಗೆ ಪಾರ್ಟಿ ಮಾಡಲು ಕಾರಣ ಬೇಕಿಲ್ಲ ಎಂದು ತಿಳಿಯುತ್ತೀರಿ. ಏಕೆಂದರೆ ಅದು ನಿಮಗೆ ತಾನಾಗಿಯೇ ಬರುತ್ತದೆ. ನಿಮ್ಮ ದಾರಿಯಲ್ಲಿ ಬರುವ ಯಾವುದೇ ಸುದ್ದಿಯಿಂದ, ಖಂಡಿತವಾಗಿಯೂ ನೀವು ಸಂಭ್ರಮಿಸಲು ಬಯಸುತ್ತೀರಿ. ನಿಮ್ಮ ದಿನ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ ನಿಮ್ಮ ಗುರಿಗಳನ್ನು ಪೂರೈಸುವಲ್ಲಿ ಒಂದು ಇಂಚು ಮುಂದಿದ್ದೀರಿ.

ಮೀನ :ಇಂದು ನಿಮ್ಮ ಗ್ರಹಗಳ ಸ್ಥಾನವನ್ನು ನೋಡಿದರೆ, ಹಣಕಾಸಿನ ಅದೃಷ್ಟ ತಿರುಗು ಮುರುಗಾಗುವ ಸಾಧ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದೀರಿ. ಹಣಕಾಸಿನ ವ್ಯವಹಾರಗಳ ವಿಷಯಕ್ಕೆ ಬಂದರೆ ಜಾಗರೂಕರಾಗಿರಿ.

ABOUT THE AUTHOR

...view details