ಕರ್ನಾಟಕ

karnataka

ETV Bharat / photos

ಬಿಸಿಲೋ ಬಿಸಿಲು: ಮನೆಯಲ್ಲೇ ತಯಾರಿಸಿ ಈ ತಂಪು ಪಾನೀಯ ಕುಡಿಯಿರಿ; ಆರೋಗ್ಯ ಕಾಪಾಡಿಕೊಳ್ಳಿ - Summer Drinks

ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ಕೆಂಡದಂತಹ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಎಷ್ಟೇ ನೀರು ಕುಡಿದರೂ ದಾಹ ತೀರುತ್ತಿಲ್ಲ. ಬಿಸಿಲಿನಿಂದ ದಿಢೀರ್ ರಿಲೀಫ್​ ಕೊಡುವ ಮನೆಯ ಶರಬತ್​ಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇವುಗಳಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಸಹ ನಿಯಂತ್ರಣದಲ್ಲಿಡಬಹುದು. ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದರ ಜತೆಗೆ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಆರೋಗ್ಯಕ್ಕೆ ಪೂರಕವಾಗುವ ಬೇಸಿಗೆ ಪಾನೀಯಗಳನ್ನು ಮನೆಯಲ್ಲಿಯೇ ತಯಾರಿಸಿ ನೋಡಿ.

By ETV Bharat Karnataka Team

Published : Apr 7, 2024, 6:49 PM IST

ಕೆಂಡದಂತಹ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ.
ಬೇಸಿಗೆ ಕಾಲದಲ್ಲಿ ನೀವು ದೇಹಕ್ಕೆ ಸಮರ್ಪಕ ನೀರು ಪೂರೈಸಲೇಬೇಕು.
ಹೆಚ್ಚು ನೀರು ಕುಡಿಯಲು ಸಾಧ್ಯವಾಗದಿದ್ದಲ್ಲಿ ಮನೆಯಲ್ಲೇ ತರಕಾರಿ, ಹಣ್ಣುಗಳ ಜ್ಯೂಸ್ ತಯಾರಿಸಿ ಕುಡಿಯಿರಿ.​​
ತರಕಾರಿ, ಹಣ್ಣುಗಳ ಪಾನೀಯಗಳು ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದರ ಜತೆಗೆ ಸೌಂದರ್ಯ ವೃದ್ಧಿಗೂ ಸಹಕಾರಿ.
ನಮ್ಕೀನ್ ಲಸ್ಸಿ: ಮೊಸರು, ಜೀರಿಗೆ ಪುಡಿ, ಬ್ಲ್ಯಾಕ್​ ಸಾಲ್ಟ್, ಪುದೀನ ಎಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ನಮ್ಕೀನ್ ಲಸ್ಸಿ ತಯಾರಿಸಿ.
ಸೌತೆಕಾಯಿ-ಪುದೀನಾ ಜ್ಯೂಸ್: ನೀರಿನೊಂದಿಗೆ ನಿಂಬೆ ರಸ, ಕತ್ತರಿಸಿದ ಸೌತೆಕಾಯಿ, ಸಣ್ಣಗೆ ಕತ್ತರಿಸಿದ ಪುದೀನ ಎಲೆಗಳು ಮತ್ತು ತಾಜಾ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ.
ಗ್ರೀನ್ ಜ್ಯೂಸ್: ತರಕಾರಿ ಎಲೆಗಳ ರಸ ದೇಹಕ್ಕೆ ಸಾಕಷ್ಟು ಖನಿಜಾಂಶ, ಜೀವಸತ್ವಗಳು ಮತ್ತು ರೋಗ ನಿರೋಧಕ ಅಂಶಗಳನ್ನು ಒದಗಿಸುತ್ತವೆ.
ಪಾಲಕ್, ಹಸಿರು ಸೇಬು, ಶುಂಠಿ, ನಿಂಬೆ ರಸದಿಂದ ಜ್ಯೂಸ್ ಮಾಡಿ ಸವಿಯಬಹುದು. ನಿಮಗೆ ಬೇಕಾದ ಎಲೆಗಳನ್ನು ರುಬ್ಬಿ ರಸ ತೆಗೆದು ಜ್ಯೂಸ್​​ ತಯಾರಿಸುವ ರೆಸಿಪಿಯನ್ನು ಫಾಲೋ ಮಾಡಿ.
ಬಾದಾಮ್ ಹಾಲಿನೊಂದಿಗೆ ತಯಾರಾದ ಐಸ್ಡ್ ಕಾಫಿ ಕೂಡ ಉಪಯೋಗಕರ ಪಾನೀಯವಾಗಿದೆ.
ತುಳಸಿ, ಬ್ಲೂಬೆರಿ, ನಿಂಬೆ ರಸದಿಂದ ತಯಾರಿಸಿದ ಪಾನೀಯ ಕೂಡ ಆರೋಗ್ಯಕರ.
ಮತ್ತೊಂದು ರುಚಿಕರ ಪಾನೀಯವೆಂದರೆ ಬೆಲ್ ಶರಬತ್. ಇದು ಜೀವಸತ್ವಗಳು ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದು ತಕ್ಷಣವೇ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ಹಣ್ಣು ಅಥವಾ ಮನೆಯಲ್ಲಿಯೇ ತಯಾರಿಸಿದ ಜ್ಯೂಸ್​ಗಳ ಮೂಲಕ ನೀರಿನಾಂಶ ದೇಹ ಸೇರುವಂತೆ ನೋಡಿಕೊಳ್ಳಿ.

ABOUT THE AUTHOR

...view details