ETV Bharat / state

ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ಪೆಟ್ರೋಲ್ ಬಂಕ್​ಗೆ ₹ 58 ಲಕ್ಷ ವಂಚಿಸಿದ ಸಿಬ್ಬಂದಿ - QR CODE DEFRAUD

ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ಪೆಟ್ರೋಲ್ ಬಂಕ್​ಗೆ ಅಲ್ಲಿನ ಸಿಬ್ಬಂದಿಯೇ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

defraud case
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : 18 hours ago

ಮಂಗಳೂರು: ಜನರಿಗೆ ಮೋಸ ಮಾಡಲು ವಂಚಕರು ಹಲವಾರು ತಂತ್ರಗಳನ್ನು ಅನುಸರಿಸುತ್ತಾರೆ. ನಗರದ ಪೆಟ್ರೋಲ್ ಬಂಕ್​ನ ಸಿಬ್ಬಂದಿಯೊಬ್ಬ ಸಂಸ್ಥೆಯ ಕ್ಯೂಆರ್​ ಕೋಡ್ ಬದಲಿಗೆ ತನ್ನ ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಂಗಳೂರು ಬಂಗ್ರಕೂಳೂರು ನಲ್ಲಿರುವ ರಿಯಲನ್ಸ್ ಔಟ್ ಲೆಟ್​​ನ ಮ್ಯಾನೇಜರ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಗ್ರಕೂಳೂರು ನಲ್ಲಿರುವ ರಿಲಯನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್​ನಲ್ಲಿ ಸುಮಾರು 15 ವರ್ಷಗಳಿಂದ ಸೂಪರ್​​ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಮೋಹನದಾಸ್ ಎಂಬಾತ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಾಲ್ ಸೆಂಟರ್ ಸೋಗಿನಲ್ಲಿ ಷೇರು ಪೇಟೆಯಲ್ಲಿ ಹಣ ಹೂಡುವಂತೆ ಕರೆ ಮಾಡಿ ವಂಚನೆ; ಇಬ್ಬರ ಬಂಧನ, 15 ಮಂದಿ ಪೊಲೀಸ್ ವಶಕ್ಕೆ

ಮೋಹನದಾಸ್ ಬಂಕ್​ನ ಹಣಕಾಸು ವ್ಯವಹಾರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಂಡಿದ್ದನು. ಆರೋಪಿಯು ದಿನಾಂಕ 2023ರ ಮಾರ್ಚ್ 1ರಿಂದ 2023 ಜುಲೈ 31ರ ವರೆಗೆ ರಿಲಯನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್​ನಲ್ಲಿ ಕ್ಯೂಆರ್​ ಕೋಡ್ ತೆಗೆದು, ತನ್ನ ವೈಯಕ್ತಿಕ ಖಾತೆಯ ಕ್ಯೂಆರ್​ ಕೋಡ್ ಹಾಕಿದ್ದ. ಗ್ರಾಹಕರಿಗೆ ಬಂಕ್​ನದ್ದೇ ಎಂದು ನಂಬಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಟ್ಟಾರ ಶಾಖೆಯ ಖಾತೆಗೆ ಒಟ್ಟು 58,85,333 ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಈ ರೀತಿ ಲಕ್ಷಾಂತರ ರೂ. ಹಣ ಜಮೆ ಮಾಡಿಕೊಂಡು ದ್ರೋಹ ಎಸಗಿದ್ದಾನೆ ಎಂದು ರಿಲಯನ್ಸ್ ಔಟ್ ಲೆಟ್​​ನ ಮ್ಯಾನೇಜರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಇಎನ್​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ವೈದ್ಯೆಗೆ ವಂಚನೆ: ಐಶ್ವರ್ಯ ಗೌಡ ಸೇರಿ ನಾಲ್ವರ ವಿರುದ್ಧ ಮತ್ತೊಂದು ಎಫ್ಐಆರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.