ETV Bharat / technology

ಭಾರತಕ್ಕೆ ಬಂತು ಒನ್​ಪ್ಲಸ್ 13 ಸೀರಿಸ್‌​: ಏನಿದು 5ಜಿ ಅಡ್ವಾನ್ಸ್ಡ್​ ಟೆಕ್ನಾಲಜಿ? - WHAT IS 5G ADVANCED NETWORK

What is 5G Advanced Network: OnePlus 13. ಇದು ಸುಧಾರಿತ 5G ನೆಟ್‌ವರ್ಕ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಮೊದಲ ಫೋನ್.

ONEPLUS 13 LAUNCHED 5 5G NETWORK  ONEPLUS 13 SERIES  ONEPLUS 13 SERIES PRICE  ONEPLUS 13 SERIES FEATURES
5.5ಜಿ ನೆಟ್​ವರ್ಕ್​ ಜೊತೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಒನ್​ಪ್ಲಸ್ 13​ ಸೀರಿಸ್ (Photo Credit: OnePlus)
author img

By ETV Bharat Tech Team

Published : Jan 9, 2025, 9:00 AM IST

Oneplus 13 Launched with 5.5G Network: ಒನ್‌ಪ್ಲಸ್ ಕಂಪನಿ ಜನವರಿ 7ರಂದು ಹೊಸ ಸ್ಮಾರ್ಟ್‌ಫೋನ್ ಸೀರಿಸ್​ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸರಣಿಯಲ್ಲಿ OnePlus 13 ಮತ್ತು OnePlus 13R ಎಂಬೆರಡು ಸ್ಮಾರ್ಟ್‌ಫೋನ್‌ಗಳನ್ನು ಹೊರತಂದಿದೆ. ಇವೆರಡೂ AI, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೀಟ್ ಚಿಪ್‌ಸೆಟ್ ಮತ್ತು ಹೊಸ ಸಿಲಿಕಾನ್ ನ್ಯಾನೊಸ್ಟ್ಯಾಕ್ ಬ್ಯಾಟರಿಯಂತಹ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

OnePlus 13 ಸೀರಿಸ್​ನಲ್ಲಿ ಮತ್ತೊಂದು ವಿಶೇಷತೆಯಿದೆ. ಇದು ದೇಶಾದ್ಯಂತ ಚರ್ಚೆಯಲ್ಲಿದೆ. ಭಾರತದಲ್ಲಿ ಜಿಯೋ ಸಹಯೋಗದೊಂದಿಗೆ 5.5G (ಅಡ್ವಾನ್ಸ್ಡ್ 5G) ನೆಟ್‌ವರ್ಕ್ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಂಥದ್ದೊಂದು ನೆಟ್‌ವರ್ಕ್‌ನೊಂದಿಗೆ ಭಾರತದ ಬಂದ ಮೊದಲ ಸಾಧನ ಇದಾಗಿದೆ.

ಫೋನ್ ಬಿಡುಗಡೆ ಸಮಾರಂಭದಲ್ಲಿ ಒನ್‌ಪ್ಲಸ್‌ನ ಜಾಗತಿಕ ಪಿಆರ್ ವ್ಯವಸ್ಥಾಪಕ ಜೇಮ್ಸ್ ಪ್ಯಾಟರ್ಸನ್ ಮಾತನಾಡಿ, OnePlus 13 ಸೀರಿಸ್​ನ ಸಾಧನಗಳು ಮೂರು ವಿಭಿನ್ನ ನೆಟ್‌ವರ್ಕ್ ಸೆಲ್‌ಗಳಿಗೆ (ವಿಭಿನ್ನ ಟವರ್‌ಗಳಿಂದಲೂ ಸಹ) ಏಕಕಾಲದಲ್ಲಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತವೆ. ಇವುಗಳು ಸಂಪರ್ಕವನ್ನು ವೇಗಗೊಳಿಸುವುದಲ್ಲದೆ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುತ್ತವೆ ಎಂದು ಹೇಳಿದರು.

5.5G ನೆಟ್‌ವರ್ಕ್ ಎಂದರೇನು?: 5.5G ನೆಟ್‌ವರ್ಕ್ ಅನ್ನು 5G ಅಡ್ವಾನ್ಸ್ಡ್ ಎಂದೂ ಕರೆಯುತ್ತಾರೆ. 5G ತಂತ್ರಜ್ಞಾನದ ಮುಂದಿನ ಹೆಜ್ಜೆ. 5Gಗೆ ಹೋಲಿಸಿದರೆ ಉತ್ತಮ ವೇಗ, ಕಡಿಮೆ ಸುಪ್ತತೆ (ವಿಳಂಬ), ಬೆಟರ್​ ನೆಟ್​ವರ್ಕ್​ ರಿಲಯಬಿಲಿಟಿ (ನೆಟ್‌ವರ್ಕ್ ವಿಶ್ವಾಸಾರ್ಹತೆ), ವಿಸ್ತೃತ ಸಂಪರ್ಕ ಮತ್ತು ಇಂಟಿಗ್ರೆಟೆಡ್​ ಇಂಟಲಿಜೆನ್ಸ್​ (ಬುದ್ಧಿವಂತ ವ್ಯವಸ್ಥೆಗಳು)ನಂತಹ ಹೊಸ ಮತ್ತು ಸುಧಾರಿತ ಅನುಭವ ನೀಡುತ್ತದೆ.

5.5ಜಿ ನೆಟ್​ವರ್ಕ್​ ಬಗ್ಗೆ ಇನ್ನೂ ಸರಳವಾಗಿ ಹೇಳುವುದಾದರೆ, 5G ನೆಟ್‌ವರ್ಕ್‌ಗಿಂತ ಒಂದು ಹೆಜ್ಜೆ ಮುಂದಿದೆ. ಬಳಕೆದಾರರ ನೆಟ್‌ವರ್ಕ್ ಅನುಭವವನ್ನು ಸುಧಾರಿಸುತ್ತದೆ.

ಎರಿಕ್ಸನ್ ಒದಗಿಸಿದ ಮಾಹಿತಿ ಪ್ರಕಾರ, ಹಿಂದಿನ 15, 16 ಮತ್ತು 17 ಬಿಡುಗಡೆಗಳನ್ನು ಇದು ಆಧರಿಸಿದೆ. 5.5G ನೆಟ್‌ವರ್ಕ್ ಬಿಡುಗಡೆ 21ರೊಂದಿಗೆ ಇನ್ನಷ್ಟು ಉತ್ತಮಗೊಳ್ಳುತ್ತದೆ ಎಂದು ತೋರುತ್ತಿದೆ. 2028ರ ವೇಳೆಗೆ ಪರಿಚಯಿಸುವ ನಿರೀಕ್ಷೆಯಿದೆ.

5.5G ನೆಟ್‌ವರ್ಕ್/5G ಅಡ್ವಾನ್ಸ್​ ಪ್ರಯೋಜನಗಳು:

  • 5.5G ನೆಟ್‌ವರ್ಕ್ ಬಳಕೆದಾರರಿಗೆ 5Gಗಿಂತ ವೇಗವಾದ ಇಂಟರ್ನೆಟ್ ವೇಗ ಒದಗಿಸುತ್ತದೆ.
  • 5.5G ನೆಟ್‌ವರ್ಕ್ ಸಹಾಯದಿಂದ ಬಳಕೆದಾರರು ಕಡಿಮೆ ಸಮಯದಲ್ಲಿ ಡೇಟಾವನ್ನು ವರ್ಗಾಯಿಸಬಹುದು.
  • 5Gಗಿಂತ 5.5G ನೆಟ್‌ವರ್ಕ್ ಉತ್ತಮ ಸಂಪರ್ಕ ಮತ್ತು ನೆಟ್‌ವರ್ಕ್ ನೀಡುತ್ತದೆ.
  • 5.5G ನೆಟ್‌ವರ್ಕ್‌ನಲ್ಲಿಯೂ ಸ್ಮಾರ್ಟ್ ಸಾಫ್ಟ್‌ವೇರ್ ಬಳಸಲಾಗುವುದು ಎಂದು ತೋರುತ್ತಿದೆ. ಇದು ಈ ನೆಟ್‌ವರ್ಕ್ ಅನ್ನು ಮೊದಲಿಗಿಂತ ಚುರುಕಾಗಿಸುತ್ತದೆ.
  • 5.5G ನೆಟ್‌ವರ್ಕ್ ಸಹಾಯದಿಂದ ನೀವು ಎಲ್ಲೇ ಇದ್ದರೂ ನಿಮ್ಮ ಫೋನ್ ಸಿಗ್ನಲ್ ಬಲವಾಗಿರುತ್ತದೆ.

OnePlus 13, OnePlus 13R ಬೆಲೆ: OnePlus 13ನ 12GB RAM + 256GB ರೂಪಾಂತರದ ಬೆಲೆ 69,999 ರೂ. ಇದೆ. 16GB RAM + 512GB ಮತ್ತು 24GB RAM + 1TB ರೂಪಾಂತರಗಳ ಬೆಲೆ ಕ್ರಮವಾಗಿ ರೂ 76,999 ಮತ್ತು ರೂ 89,999 ಆಗಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಮೇಲೆ 5,000 ರೂ.ಗಳ ರಿಯಾಯಿತಿ ಲಭ್ಯ. ಇದಲ್ಲದೇ 5,000 ರೂ ಎಕ್ಸ್‌ಚೇಂಜ್ ಆಫರ್ ದೊರೆಯಲಿದೆ. OnePlus 13ರ ಮಾರಾಟವು ಜನವರಿ 10, 2025ರಂದು ಇ-ಕಾಮರ್ಸ್ ವೆಬ್‌ಸೈಟ್ Amazon ಮತ್ತು OnePlusನ ಅಧಿಕೃತ ರಿಟೈಲ್​ ಶಾಪ್​ಗಳಲ್ಲಿ ನಡೆಯಲಿದೆ.

OnePlus 13Rನ 12GB RAM + 256GB ರೂಪಾಂತರದ ಆರಂಭಿಕ ಬೆಲೆ 42,999 ರೂ. ಆಗಿದೆ. ಆದರೆ, ಅದರ ಟಾಪ್ 16GB RAM + 512GB ರೂಪಾಂತರದ ಬೆಲೆ 49,999 ರೂ. ಕಂಪನಿಯು ತನ್ನ ಖರೀದಿಯ ಮೇಲೆ 3,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿ ಮತ್ತು 4,000 ರೂಪಾಯಿಗಳ ವಿನಿಮಯ ಬೋನಸ್ ನೀಡುತ್ತಿದೆ. OnePlus 13Rನ ಮೊದಲ ಮಾರಾಟವು ಇ-ಕಾಮರ್ಸ್ ವೆಬ್‌ಸೈಟ್ Amazonನಲ್ಲಿ ಜನವರಿ 13, 2025ರಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಕೊನೆಗೂ ದೇಶಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಒನ್​ಪ್ಲಸ್​ 13​: ಸೂಪರ್​ ಫೀಚರ್ಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.