ETV Bharat / bharat

ಶಾಲಾ ಆಟೋ ಮೇಲೆ ಬಿದ್ದ ಆಲೂಗಡ್ಡೆ ಟ್ರಕ್ ​; ಮೂವರು ಮಕ್ಕಳು ಸೇರಿ ನಾಲ್ವರು ಸಾವು - ROAD ACCIDENT IN JHARKHAND

ಆಲೂಗಡ್ಡೆ ತುಂಬಿದ ಟ್ರಕ್​ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವಾಹನದ ಮೇಲೆ ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.

3 school children among 4 killed 8 injured in horrific road accident in Jharkhand
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : 18 hours ago

ರಾಮ್​ಗಢ (ಜಾರ್ಖಂಡ್​) : ಮೂವರು ಶಾಲಾ ಮಕ್ಕಳು ಸೇರಿದಂತೆ ನಾಲ್ವರು ಅಪಘಾತದಲ್ಲಿ ಸಾವನ್ನಪ್ಪಿರುವ ಭೀಕರ ಘಟನೆ ಜಾರ್ಖಂಡ್​ನ ರಾಮ್​​ಗಢ ಜಿಲ್ಲೆಯ ಗೋಲಾ ಪೊಲೀಸ್​​ ರಾಣಾ ವ್ಯಾಪ್ತಿಯ ತಿರ್ಲಾ ಚೌಕ್​ನಲ್ಲಿ ಇಂದು ನಡೆದಿದೆ.

ಆಲೂಗಡ್ಡೆ ತುಂಬಿದ ಟ್ರಕ್​ವೊಂದು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಮೇಲೆ ಪಲ್ಟಿಯಾದ ಪರಿಣಾಮ ಈ ಅನಾಹುತ ಸಂಭವಿಸಿದೆ.

ಐದರಿಂದ ಎಂಟು ವರ್ಷದ ಮಕ್ಕಳು ಟ್ರಕ್​ ಕೆಳಗೆ ಸಿಲುಕಿದ್ದು, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ತಕ್ಷಣಕ್ಕೆ ಅಲ್ಲಿದ್ದ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾದರು. ಘಟನೆಯಲ್ಲಿ ಆಟೋ ಚಾಲಕ ಕೂಡ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಉಳಿದಂತೆ ಜನರು ಗಾಯಗೊಂಡಿದ್ದಾರೆ.

ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಆಘಾತಕ್ಕೀಡಾದ ಮಕ್ಕಳ ಕುಟುಂಬಸ್ಥರು ಮತ್ತು ಸ್ಥಳೀಯರು ಘಟನಾ ಸ್ಥಳದಲ್ಲಿ ಸುತ್ತಿವರೆದಿದ್ದು, ಅಸುನೀಗಿದ ಕಂದಮ್ಮಗಳ ಸಂಬಂಧಿಕರ ಆಕ್ರಂದನ ಮುಗಿಲುಮಟ್ಟಿತ್ತು. ಘಟನೆ ಖಂಡಿಸಿ, ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಟ್ರಾಫಿಕ್​ ಜಾಮ್​ ಉಂಟಾಯಿತು.

ಘಟನಾಸ್ಥಳಕ್ಕೆ ರಾಮಗಢ ಶಾಸಕಿ ಮಮತಾ ದೇವಿ ಭೇಟಿ ನೀಡಿ, ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಭಾರೀ ಶೀತಗಾಳಿ ಹಿನ್ನೆಲೆ ರಾಜ್ಯ ಸರ್ಕಾರ ಜನವರಿ 13ರ ವರೆಗೆ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಆದರೆ ಗುಡ್​​ವಿಲ್​ ಮಿಷನ್​ ಸ್ಕೂಲ್​ ಮಾತ್ರ ಕಾರ್ಯಾಚರಣೆ ನಡೆಸಿತ್ತು. ಈ ಶಾಲೆಯ ಮಕ್ಕಳು ಅಪಘಾತಕ್ಕೆ ಒಳಗಾಗಿರುವ ಹಿನ್ನೆಲೆ ಈ ದುರಂತಕ್ಕೆ ಶಾಲೆಯ ಆಡಳಿತ ಮಂಡಳಿ ಕಾರಣವೆಂದು ಸ್ಥಳೀಯರು ಮತ್ತು ಪೋಷಕರು ದೂರಿದ್ದಾರೆ.

ಸರ್ಕಾರಿ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ಇದೀಗ ಆಡಳಿತಾಧಿಕಾರಿಗಳು ಶಾಲೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಘಟನೆ ಬೆನ್ನಲ್ಲೇ ಟ್ರಕ್​ ಚಾಲಕ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಅಸ್ಸಾಂ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ 9 ಜನರಲ್ಲಿ ಒಬ್ಬ ಕಾರ್ಮಿಕನ ಮೃತದೇಹ ಮೇಲಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.