'ಬಿಗ್ ಬಾಸ್ ಕನ್ನಡ ಸೀಸನ್ 11' ಫಿನಾಲೆಗೆ ದಿನಗಣನೆ ಆರಂಭವಾಗಿಡಿದ್ದು, ಆಟದ ಮಜಲುಗಳು ರೋಮಾಂಚಕ ತಿರುವುದು ಪಡೆದಿವೆ. ಕಳೆದ ವಾರ ಸ್ಪರ್ಧಿಗಳ ಮನೆಮಂದಿ ದೊಡ್ಮನೆಗೆ ಎಂಟ್ರಿ ಕೊಟ್ಟು ತಮ್ಮವರ ಮನೋಬಲ ಹೆಚ್ಚಿಸಿ ಹೋಗಿದ್ದರು. ಜೊತೆಗೆ ಗೆಲುವಿಗೆ ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂಬ ಸಲಹೆಗಳನ್ನು ಕೊಟ್ಟಿದ್ದರು. ಭಾವನಾತ್ಮಕ ವಾರದ ಬಳಿಕ ಆಟ ಮತ್ತಷ್ಟು ಚುರುಕುಗೊಂಡಿದೆ. ಫಿನಾಲೆಗೆ ಟಿಕೆಟ್ ಪಡೆಯೋ ಟಾಸ್ಕ್ಗಳು ಶುರುವಾಗಿವೆ. ಈ ವಾರವಿಡೀ ಟಾಸ್ಕ್ಗಳಿರಲಿವೆ ಎಂದು ಬಿಗ್ ಬಾಸ್ ಈಗಾಗಲೇ ಸೂಚಿಸಿದ್ದಾರೆ. ಅದರಂತೆ ಆಟಗಳು ಸಾಗಿವೆ.
ಅದರಂತೆ, ಇಂದಿನ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಅವರು ಕಣ್ಣೀರಿಟ್ಟಿದ್ದಾರೆ. ಇದರ ಒಂದು ಸುಳಿವು 'ಚೈತ್ರಾ ಕೈ ತಪ್ಪುತ್ತಾ ಫಿನಾಲೆ ಟಿಕೆಟ್?', ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಶೀರ್ಷಿಕೆಯಡಿ ಅನಾವರಣಗೊಂಡಿರುವ ಪ್ರೋಮೊದಲ್ಲಿ ಸಿಕ್ಕಿದೆ.
ನಿಮ್ಮೊಳಗೇ ಚರ್ಚಿಸಿ ಒಬ್ಬರನ್ನು ಟಿಕೆಟ್ ಟು ಫಿನಾಲೆ ಓಟದಿಂದ ಹೊರಗಿಡಬೇಕೆಂದು ಬಿಗ್ ಬಾಸ್ ಸೂಚಿಸಿದ್ದಾರೆ. ಆ ಪ್ರಕಾರ, ಉಗ್ರಂ ಮಂಜು, ಧನರಾಜ್ ಆಚಾರ್, ಗೌತಮಿ ಜಾಧವ್ ಅವರು ಚೈತ್ರಾ ಕುಂದಾಪುರ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಬರೀ, ವಾದ ವಾದ ವಾದ ಎಂದು ಉಗ್ರಂ ಮಂಜು ಕಾರಣ ಕೊಟ್ಟಿದ್ದಾರೆ. ಧನರಾಜ್ ಆಚಾರ್ ಮಾತನಾಡಿ, ತಪ್ಪನ್ನು ಸರಿಮಾಡಿಕೊಂಡು ಹೋಗುವ ಗುಣ ಅವರಲ್ಲಿ ಇಲ್ಲ ಎಂದು ತಿಳಿಸಿದ್ದಾರೆ. ಎಲ್ಲರೂ ಒಂದೇ ಹೆಸರು ತೆಗೆದುಕೊಳ್ತಿದ್ದಾರೆ ಅಂದ್ರೆ ಅವರ ಕಡೆಯಿಂದ ಪದೆ ಪದೇ ತಪ್ಪಾಗ್ತಿದೆ ಅಂತಾ ಅರ್ಥ ಎಂದು ಗೌತಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ಫ್ಯಾಮಿಲಿಯೊಂದಿಗೆ ಯಶ್ ಜನ್ಮದಿನಾಚರಣೆ: ಸೆಲೆಬ್ರೇಶನ್ ಫೋಟೋಗಳಿಲ್ಲಿವೆ
ಒಬ್ಬರನ್ನು ಟಾರ್ಗೆಟ್ ಮಾಡಿ ಈಸಿಲಿ ಪ್ಲ್ಯಾನ್ ಮಾಡ್ತಾರೆ. ನೂರು ದಿನಾನೂ ಈ ಮನೇಲಿ ನಡೆದಿದ್ದು ಇದೇ. ಆಡಕ್ಕೆ ಅವಕಾಶ ಕೊಡ್ತಿರ್ಲಿಲ್ಲ. ಇದೇ ತರ ಟಾರ್ಗೆಟ್ ಮಾಡಿ ಆಟದಿಂದ ಹೊರಗಿಡೋದು. ಆಡಕ್ಕೆ ಈಗಿನ್ನ ಬರುತ್ತಿದ್ದೆ, ಅಲ್ಲಿಗೇ ಅಡ್ಡಗಾಲು ಹಾಕಿದ್ರಲ ಎಂದು ಚೈತ್ರಾ ಕುಂದಾಪುರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಲುಕ್ನಲ್ಲಿ ಯಶ್ ಸ್ಟೈಲಿಶ್ ಎಂಟ್ರಿ; ಸ್ಯಾಂಡಲ್ವುಡ್ನ ಮತ್ತೊಂದು ಬ್ಲಾಕ್ಬಸ್ಟರ್ ರೆಡಿ
ಇದಕ್ಕೂ ಮೊದಲು 'ಫಿನಾಲೆ ತಲುಪೋ ಹಠ; ರೊಚ್ಚಿಗೆದ್ರು ಸ್ಪರ್ಧಿಗಳು, ಆಟವಾಯ್ತು ರಂಪಾಟ!' ಎಂಬ ಕ್ಯಾಪ್ಷನ್ ಅಡಿ ಅನಾವರಣಗೊಂಡ ಪ್ರೋಮೋದಲ್ಲಿ ಸ್ಪರ್ಧಿಗಳು ರಂಪಾಟ ಮಾಡಿಕೊಂಡಿರೋದನ್ನು ಕಾಣಬಹುದು. ಫೈನಲಿ ಆಟಗಳನ್ನು ಗೆದ್ದು, ಫೈನಲಿಸ್ಟ್ಗಳಾಗೋದು ಯಾರೆಂಬುದನ್ನು ತಿಳಿಯಲು ಅಪಾರ ಸಂಖ್ಯೆಯ ಕನ್ನಡಿಗರು ಕಾತರರಾಗಿದ್ದಾರೆ.