ETV Bharat / technology

ನಮ್ಮ ಗುರಿ, ಮೊದಲ ಆದ್ಯತೆ ಗಗನಯಾನ: ಈಟಿವಿ ಭಾರತ ಸಂದರ್ಶನದಲ್ಲಿ ಇಸ್ರೋ ಅಧ್ಯಕ್ಷರ ಮನದಾಳದ ಮಾತು - ISRO CHAIRMAN INTERVIEW

ISRO Chairman Interview: ನಾವು ಮುಂದಿನ ದಶಕದಲ್ಲಿ ಹಲವಾರು ಯೋಜನೆಗಳನ್ನು ಹೊಂದಿದ್ದೇವೆ. ಈಗ ನಮ್ಮ ಗುರಿ ಮತ್ತು ನಮ್ಮ ಮೊದಲ ಆದ್ಯತೆ ಗಗನಯಾನ ಮಿಷನ್​ ಆಗಿದೆ ಎಂದು ಇಸ್ರೋ ಅಧ್ಯಕ್ಷರು ಈಟಿವಿ ಭಾರತಕ್ಕೆ ತಿಳಿಸಿದರು.

ISRO CHAIRMAN INTERVIEW  ISRO GAGANYAAN MISSION  ISRO CHAIRMAN V NARAYANAN INTERVIEW  HUMAN SPACEFLIGHT MISSION ISRO
ಇಸ್ರೋ ಅಧ್ಯಕ್ಷ ವಿ ನಾರಾಯಣನ್ (ETV Bharat)
author img

By ETV Bharat Tech Team

Published : Feb 15, 2025, 4:13 PM IST

ISRO Chairman Interview : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ ಅನೇಕ ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಹೊಸ ಪ್ರೊಪಲ್ಷನ್ ಸಿಸ್ಟಮ್, 200-ಟನ್ ಥ್ರಸ್ಟ್ ಎಂಜಿನ್, ವೀನಸ್ ಮಿಷನ್, ಮಾರ್ಸ್ ಆರ್ಬಿಟಲ್ ಮಿಷನ್, ಚಂದ್ರಯಾನ್-4 ಮತ್ತು ಚಂದ್ರಯಾನ 5 ಸೇರಿವೆ. ಗಗನಯಾನ ಕಾರ್ಯಕ್ರಮವು ಬಾಹ್ಯಾಕಾಶ ಸಂಸ್ಥೆಗೆ ತಕ್ಷಣದ ಆದ್ಯತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದರು.

ಸಂದರ್ಶನದಲ್ಲಿ ಗಗನಯಾನ ಮಾನವ ಬಾಹ್ಯಾಕಾಶ ಹಾರಾಟದ ಸೇರಿದಂತೆ ಮುಂದಿನ ಹತ್ತಾರು ಯೋಜನೆಗಳ ಬಗ್ಗೆ ಇಸ್ರೋ ಅಧ್ಯಕ್ಷರು ಸುದೀರ್ಘವಾಗಿ ಮಾತನಾಡಿದರು. ಸವಾಲುಗಳು ಮತ್ತು ಬಾಹ್ಯಾಕಾಶ ಸಂಸ್ಥೆಯ ಸಿದ್ಧತೆಯನ್ನು ಕುರಿತು ಅವರು ವಿವರಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಇತ್ತೀಚೆಗೆ ಗಗನಯಾನ ಮಿಷನ್ ಅನ್ನು 2026 ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ದೃಢಪಡಿಸಿದ್ದರು. ಯೋಜನೆಯ ಮೊದಲ ಅನ್​ಕ್ರೂವ್ಡ್​ (ಸಿಬ್ಬಂದಿ ಇಲ್ಲದ) ಮಿಷನ್ ಆಗಿದ್ದು, ಇದರಲ್ಲಿ ವ್ಯೋಮಿತ್ರ ರೋಬೋಟ್ ಅನ್ನು ಹೊತ್ತೊಯ್ಯುವುದಾಗಿದೆ. ಈ ಮಿಷನ್​ ಈ ವರ್ಷ ಉಡಾವಣೆಗೊಳ್ಳಲಿದೆ.

ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಅವರ ವಿಶೇಷ ಸಂದರ್ಶನ (ETV Bharat)

ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಈಟಿವಿ ಭಾರತಗೆ ಅನ್​ಕ್ರೂವ್ಡ್​ ಮಿಷನ್‌ಗೂ ಮೊದಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಒಟ್ಟು ಮೂರು ಅನ್​ಕ್ರೂವ್ಡ್​ ಟೆಸ್ಟ್​ ಫ್ಲೈಟ್ಸ್​ ಪ್ರಾರಂಭಿಸಲಿದೆ. ಮೊದಲ ಹಾರಾಟ ಈ ವರ್ಷ ಶ್ರೀಹರಿಕೋಟಾದಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಯಶಸ್ವಿ ಪರೀಕ್ಷೆಯ ನಂತರ ಕ್ರೂವ್ಡ್​ ಮಿಷನ್ (ಸಿಬ್ಬಂದಿ ಇರುವ) ಮುಂದುವರಿಯುತ್ತದೆ. ಮಿಷನ್‌ಗೆ ಆಯ್ಕೆಯಾದ ಗಗನಯಾತ್ರಿಗಳು ಮಿಷನ್ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ದೈಹಿಕ ಮತ್ತು ತರಬೇತಿ ಮಾಡ್ಯೂಲ್‌ಗಳಿಗೆ ಒಳಗಾಗುತ್ತಾರೆ ಎಂದು ಅಧ್ಯಕ್ಷರು ಒತ್ತಿ ಹೇಳಿದರು.

400 ಕಿ.ಮೀ. ಕಡಿಮೆ ಭೂಮಿಯ ಕಕ್ಷೆಗೆ (ಲೋ ಅರ್ಥ್​ ಆರ್ಬಿಟ್​) ಮೂರು ಗಗನಯಾತ್ರಿಗಳನ್ನು ಕಳುಹಿಸುವ ಗುರಿಯನ್ನು ಹೊಂದಿರುವ ಗಗನಯಾನ ಮಿಷನ್, ಹ್ಯೂಮನ್​-ರೇಟೆಡ್ LVM 3 ವೆಹಿಕಲ್​ (HLVM 3) ಅನ್ನು ಬಳಸಿಕೊಳ್ಳುತ್ತದೆ. ಈ ವಾಹನವು ವರ್ಧಿತ ರಚನಾತ್ಮಕ ಮತ್ತು ಥರ್ಮಲ್​ ಮಾರ್ಜೆನ್ಸ್​ ಹೊಂದಿದ್ದು, ವಿಶ್ವಾಸಾರ್ಹತೆಯನ್ನು ಸುಧಾರಿಸಲು ಹೆಚ್ಚಿದ ಪುನರುಕ್ತಿಯನ್ನು ಹೊಂದಿದೆ. ಪ್ರಮುಖ ಬೆಳವಣಿಗೆಗಳಲ್ಲಿ ರಿಯಲ್​-ಟೈಂ ವೆಹಿಕಲ್​ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆ, ಸಿಬ್ಬಂದಿ ಸುರಕ್ಷತೆಗಾಗಿ ಕಕ್ಷೆಯ ಮಾಡ್ಯೂಲ್ ವ್ಯವಸ್ಥೆ ಮತ್ತು ಸುಧಾರಿತ ಪರಿಸರ ನಿಯಂತ್ರಣ ಮತ್ತು ಸುರಕ್ಷತಾ ವ್ಯವಸ್ಥೆ ಸೇರಿವೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.

ಈ ವೆಹಿಕಲ್​ ಗಗನಯಾತ್ರಿಗಳನ್ನು ಭೂಮಿಯಿಂದ 170 ಕಿ.ಮೀ. ದೂರದ ಆಗಸದತ್ತ ಸಾಗಿಸುತ್ತದೆ. ನಂತರ 400 ಕಿ.ಮೀ.ವರೆಗೆ ಮುನ್ನಡೆಯುತ್ತದೆ. ನಂತರ ಕಕ್ಷೆಗೆ ತಲುಪುತ್ತದೆ. ಮಿಷನ್​ನ ಉದ್ದೇಶ ಪೂರ್ಣಗೊಂಡ ನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುತ್ತದೆ ಎಂದು ಹೈಲೈಟ್ ಮಾಡಿದ ಇಸ್ರೋ ಅಧ್ಯಕ್ಷರು, ಸರ್ವೀಸ್​ ಮಾಡ್ಯೂಲ್‌ನ ಪ್ರೊಪಲ್ಷನ್ ಸಿಸ್ಟಮ್​ ಆರೋಹಣ ಮತ್ತು ಅವರೋಹಣ ಎರಡನ್ನೂ ನಿರ್ವಹಿಸುತ್ತದೆ. ರೀ-ಎಂಟ್ರಿ ಸಮಯದಲ್ಲಿ ವೇಗ ಕಡಿತ, ನಂತರ ಪ್ಯಾರಾಚೂಟ್ ಸಹಾಯದಿಂದ ಇಳಿಯುವಿಕೆಯ ಕಾರ್ಯ ನಡೆಯುತ್ತದೆ. ಈ ಪ್ಯಾರಾಚೂಟ್‌ಗಳನ್ನು ಆಗ್ರಾದಲ್ಲಿ ಡಿಆರ್​ಡಿಒ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಗಗನಯಾನ ಕಾರ್ಯಾಚರಣೆಯ ಅಡಿಯಲ್ಲಿ ವಿಶೇಷವಾಗಿ ಬಾಹ್ಯಾಕಾಶ ನೌಕೆ ರೀ-ಎಂಟ್ರಿ ಸಮಯದಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ಯಶಸ್ಸು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಳಿದಾಗ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಜಾರಿಯಲ್ಲಿವೆ ಎಂದು ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಭರವಸೆ ನೀಡಿದರು. ಹೆಚ್ಚಿನ ವೇಗವನ್ನು ಹೊಂದಿರುವ ವಸ್ತುವು ಭೂಮಿಯ ವಾತಾವರಣಕ್ಕೆ ಮತ್ತೆ ಪ್ರವೇಶಿಸಿದಾಗ ಅದು ಗಮನಾರ್ಹವಾದ ಶಾಖವನ್ನು ಉತ್ಪಾದಿಸುತ್ತದೆ. ಇದನ್ನು ಪರಿಹರಿಸಲು ಸೇಫ್​ ರೀ-ಎಂಟ್ರಿ ಖಚಿತಪಡಿಸಿಕೊಳ್ಳಲು ಇಸ್ರೋ ಅಡ್ವಾನ್ಸ್ಡ್​ ಥರ್ಮಲ್​ ಪ್ರೊಟೆಕ್ಷನ್​ ಸಿಸ್ಟಮ್ಸ್​ ಅಭಿವೃದ್ಧಿಪಡಿಸುತ್ತಿದೆ ಮತ್ತು ಪ್ರದರ್ಶಿಸುತ್ತಿದೆ. ಫೈನಲ್​ ಸ್ಟೇಜ್​ನಲ್ಲಿ ಪ್ಯಾರಾಚೂಟ್‌ಗಳನ್ನು ಬಳಸಿಕೊಂಡು ಬಾಹ್ಯಾಕಾಶ ನೌಕೆಯನ್ನು ನಿಖರವಾದ, ನಿಯಂತ್ರಿತ ವೇಗಕ್ಕೆ ನಿಧಾನಗೊಳಿಸಲಾಗುತ್ತದೆ. ಇದು ಸುರಕ್ಷಿತ ಮತ್ತು ನಿಖರವಾದ ಇಳಿಯುವಿಕೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಗಗನಯಾನ ಕಾರ್ಯಕ್ರಮದ ಬಳಿಕ ಇಸ್ರೋ ಬಾಹ್ಯಾಕಾಶಕ್ಕೆ ಕಡಿಮೆ-ವೆಚ್ಚದ ಪ್ರವೇಶವನ್ನು ಹೆಚ್ಚಿಸುವತ್ತ ಗಮನಹರಿಸಲಿದೆ. ಬಾಹ್ಯಾಕಾಶ ಸಂಸ್ಥೆಯು ಈಗಾಗಲೇ ಲುನರ್​ ಪೊಲಾರ್​ ಎಕ್ಸ್​ಪ್ಲೋರೇಷನ್ ಮಿಷನ್ (LUPEX) ಸೇರಿದಂತೆ ಹಲವಾರು ಕಾರ್ಯಾಚರಣೆಗಳಿಗೆ ಅನುಮೋದನೆಯನ್ನು ಹೊಂದಿದೆ ಎಂದು ಇಸ್ರೋ ಅಧ್ಯಕ್ಷರು ಸವಿವರ ಮಾಹಿತಿ ನೀಡಿದರು. ನಾರಾಯಣನ್ ಇದನ್ನು ಇಸ್ರೋಗೆ ಪ್ರಮುಖ ಗಮನ ಮತ್ತು ಚಂದ್ರಯಾನ-3 ಕಾರ್ಯಾಚರಣೆಯ ಗಮನಾರ್ಹ ವರ್ಧನೆ ಎಂದು ಕರೆದರು.

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಪಾನಿನ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಚಂದ್ರನ ಪರಿಶೋಧನೆ ಮತ್ತು ವೈಜ್ಞಾನಿಕ ಆವಿಷ್ಕಾರವನ್ನು ಮುಂದುವರಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ನಾರಾಯಣನ್ ವಿವರಿಸಿದರು.

ಎಕ್ಸ್​ಕ್ಲ್ಯೂಸಿವ್​ ಸಂದರ್ಶನ - ಅನುಭಾ ಜೈನ್​, ಈಟಿವಿ ಭಾರತ

ಓದಿ: ಏರೋ ಇಂಡಿಯಾ 2025: ಕೊನೆ ದಿನ ಫೈಟರ್ ಜೆಟ್‌ಗಳ ಹಾರಾಟ ಕಣ್ತುಂಬಿಕೊಂಡ ಜನಸಾಗರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.