ETV Bharat / state

ಬೆಳಗಾವಿ: ಆಟೋ ಚಾಲಕನಿಂದ ಹಲ್ಲೆ ಬಳಿಕ ಕುಸಿದು ಬಿದ್ದು ಗೋವಾ ಮಾಜಿ ಶಾಸಕ ಸಾವು - FORMER GOA MLA DIED

ಆಟೋ ಚಾಲಕ ಹಲ್ಲೆಗೈದ ಬಳಿಕ ಕುಸಿದು ಬಿದ್ದು ಗೋವಾ ಮಾಜಿ ಶಾಸಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

FORMER GOA MLA LAVOO MAMLEDAR
ಘಟನೆಯ ಸಿಸಿಟಿವಿ ದೃಶ್ಯ (ETV Bharat)
author img

By ETV Bharat Karnataka Team

Published : Feb 15, 2025, 4:03 PM IST

ಬೆಳಗಾವಿ: ಕಾರು ಟಚ್ ಆದ ವಿಚಾರಕ್ಕೆ ಆಟೋ ಚಾಲಕ ಹಲ್ಲೆ ಮಾಡಿದ ಬಳಿಕ ಗೋವಾ ಮಾಜಿ ಶಾಸಕ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಗೋವಾದ ಮಾಜಿ ಶಾಸಕ ಲಾವೂ ಮಾಮಲೇದಾರ್ (69) ಮೃತರು. ಬೆಳಗಾವಿಯ ಖಡೇಬಜಾರ್‌ನಲ್ಲಿರುವ ಶ್ರೀನಿವಾಸ ಲಾಡ್ಜ್ ಎದುರು ಈ ಘಟನೆ ನಡೆದಿದೆ. ಮೃತ ಲಾವೂ ಅವರು ಗೋವಾ ರಾಜ್ಯದ ಪೋಂಡಾ ಕ್ಷೇತ್ರಕ್ಕೆ 2012-2017ರ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು.

ಖಡೇಬಜಾರ್ ಬಳಿ ಆಟೋಗೆ ಮಾಜಿ ಶಾಸಕರ ಕಾರು ತಾಗಿದೆ. ಕಾರಿನಲ್ಲಿ ಶ್ರೀನಿವಾಸ ಲಾಡ್ಜ್ ಕಡೆಗೆ ಲಾವೂ ಮಾಮಲೇದಾರ್ ಬಂದಿದ್ದರು‌. ಆಗ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಆಟೋ ಚಾಲಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಮೆಟ್ಟಿಲು ಏರಿ ಲಾಡ್ಜ್‌ನಲ್ಲಿರುವ ರೂಮ್‌ಗೆ ಹೊರಟಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯ ಲಾಡ್ಜ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ರೋಹನ್ ಜಗದೀಶ್ ಪ್ರತಿಕ್ರಿಯೆ (ETV Bharat)

ಸ್ಥಳಕ್ಕೆ ದೌಡಾಯಿಸಿದ ಮಾರ್ಕೆಟ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಮೃತದೇಹವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಸ್ಥಳಕ್ಕೆ ಡಿಸಿಪಿ ರೋಹನ್​ ಜಗದೀಶ್​, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಘಟನೆ ಕುರಿತು ಡಿಸಿಪಿ ರೋಹನ್ ಜಗದೀಶ್​ ಪ್ರತಿಕ್ರಿಯಿಸಿ, "ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಗೋವಾ ಮಾಜಿ ಶಾಸಕ ಲಾವೂ ಮಾಮಲೇದಾರ್ ಅವರು ಶ್ರೀನಿವಾಸ್ ಲಾಡ್ಜ್​​ ನಲ್ಲಿದ್ದರು. ತಮ್ಮ ಕಾರಿನಲ್ಲಿ ಲಾಡ್ಜ್​ ಕಡೆ ಬರುವಾಗ ಆಟೋಗೆ ಕಾರು ಟಚ್ ಆಗಿದೆ ಎಂಬ ವಿಚಾರ ಆಟೋ ಚಾಲಕ ಮತ್ತು ಅವರ ನಡುವೆ ಸಣ್ಣ ಜಗಳ ಆಗುತ್ತದೆ. ಬಳಿಕ ಆಟೋ ಚಾಲಕ ಅವರ ಕಪಾಳಕ್ಕೆ ಹೊಡೆಯುತ್ತಾನೆ. ನಂತರ ಮೆಟ್ಟಿಲು ಹತ್ತಿಕೊಂಡು ತಾವು ಉಳಿದುಕೊಂಡಿದ್ದ ರೂಮಿಗೆ ಹೋಗುವಾಗ ಕುಸಿದು ಬೀಳುತ್ತಾರೆ. ಕೂಡಲೇ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ಇಸಿಜಿ ಸೇರಿ ಮತ್ತಿತರ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ತನಿಖೆ ಮುಂದುವರಿಸಿದ್ದೇವೆ" ಎಂದರು.

ಇದನ್ನೂ ಓದಿ: ಗ್ರಾಹಕರಿಗೆ ಸ್ವೀಟ್ ಕಟ್ಟಿ ಕೊಡುವಾಗಲೇ ಹೃದಯಾಘಾತ: ಬೇಕರಿ ನೌಕರ ಸಾವು

ಇದನ್ನೂ ಓದಿ: ಸಿದ್ದಾಪುರ: ವಾಟೆಹೊಳೆ ಫಾಲ್ಸ್‌ನಲ್ಲಿ ಮುಳುಗಿ ಇಬ್ಬರು ಯುವಕರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.