ಹವಾಮಾನ ಮತ್ತು ಆಹಾರದಲ್ಲಿನ ಬದಲಾವಣೆಗಳು ಕೆಲವೊಮ್ಮೆ ನಮ್ಮ ಚರ್ಮ ಮತ್ತು ತುಟಿಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಕಾಳಜಿ ವಹಿಸೋದು ಅತ್ಯಗತ್ಯ.. ಬ್ಯೂಟಿ ಪ್ರೊಡಕ್ಟ್ಗೂ ಹೆಚ್ಚಾಗಿ ಆಹಾರದ ಗುಣಮಟ್ಟವನ್ನು ಸುಧಾರಿಸಿಕೊಳ್ಳಿ.. ತ್ವಚೆಯ ಸೌಂದರ್ಯಕ್ಕೆ ನೀರು ಪ್ರಮುಖ ಅಂಶ. ಸಾಧ್ಯವಾದಷ್ಟು ನೀರು ಕುಡಿದು ಸೌಂದರ್ಯ ವೃದ್ಧಿಸಿಕೊಳ್ಳಿ.. ದೇಹಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಜೀವಸತ್ವಗಳು ಮತ್ತು ಖನಿಜಾಂಶಗಳಿಗೆ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಿ. ತರಕಾರಿ. ಹಣ್ಣಿಗೆ ಮೊದಲ ಆದ್ಯತೆ ಕೊಡಿ.. ತುಟಿಯನ್ನು ತೇವವಾಗಿಡಲು ಉತ್ತಮ ಲಿಪ್ ಬಾಮ್ಗಳನ್ನು ಬಳಸಿ.. ರಾತ್ರಿ ಮಲಗುವ ಮುನ್ನ ತುಟಿಗೆ ತುಪ್ಪ. ಜೇನುತುಪ್ಪ ಅಥವಾ ತೆಂಗಿನ ಎಣ್ಣೆ ಬಳಸುವುದು ಕೂಡ ಉತ್ತಮ.. ಚರ್ಮವನ್ನು ಸುರಕ್ಷಿತವಾಗಿರಿಸಲು ಮನೆಯಲ್ಲಿ ಆರ್ದ್ರಕ (Humidifier) ಬಳಸಿ.. ಸ್ಕಿನ್ ಕೇರ್ ಪ್ರೊಡಕ್ಟ್ಸ್ ಬಗ್ಗೆ ಎಚ್ಚರವಿರಲಿ. ನಿಮಗೆ ಹೊಂದಿಕೆಯಾಗುವಂತದ್ದನ್ನು ನೋಡಿ ಬಳಸಿ.. ಸೌಂದರ್ಯ ವೃದ್ಧಿಗೆ ಮನೆಯಲ್ಲಿರುವ ನೈಸರ್ಗಿಕ ಉತ್ಪನ್ನಗಳು ಸಹಕಾರಿ.