ಕರ್ನಾಟಕ

karnataka

ETV Bharat / photos

ನೀವು ತಿಳಿ ಗುಲಾಬಿ ಬಣ್ಣ ಪ್ರಿಯರೇ.. ಪಿಂಕ್​​ ಬಣ್ಣದಲ್ಲಿ ಲೆಹೆಂಗಾ ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ಸೆಲೆಬ್ರಿಟಿ ಚಾಯ್ಸ್​!

ನಡೆದಾಡುವ ಮಗುವಿನಿಂದ ಹಿಡಿದು ವೃದ್ಧೆಯವರೆಗೂ ಶೇ 75 ರಷ್ಟು ಮಹಿಳೆಯರು ಪಿಂಕ್​ ಬಣ್ಣವನ್ನು ಬಲು ಇಷ್ಟ ಪಡುತ್ತಾರೆ. ಇದು ಸಾರ್ವತ್ರಿಕ ಸತ್ಯ ಕೂಡ. ಈ ಬಣ್ಣದ ವಸ್ತ್ರ ನೀವು ಧರಿಸಿ ಯಾವುದೇ ಕಾರ್ಯಕ್ರಮಕ್ಕೆ ತೆರಳಿ ನೀವೇ ಅಲ್ಲಿ ಹೈಲೈಟ್​​. ನೀವು ಕೂಡ ಈ ಪಿಂಕ್​ ಬಣ್ಣದ ಕ್ಯಾಟಗೆರಿಯವರಾಗಿದ್ದರೆ ನಿಮಗಾಗಿ ಪಿಂಕ್​ ಲೆಹಂಗಾ ಐಡಿಯಾಗಳು ನಾವು ನಿಮಗೆ ಕೊಡುತ್ತಿದ್ದೇವೆ. (ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ)

By ETV Bharat Karnataka Team

Published : Oct 12, 2024, 12:50 PM IST

ನಿನ್ನೆಯಷ್ಟೆ ಬಿಡುಗಡೆಗೊಂಡಿರುವ ಜಿಗ್ರಾ ಚಿತ್ರದಿಂದ ಸದ್ಯ ಅಲಿಯಾ ಭಟ್​ ಎಲ್ಲಡೆ ಸುದ್ದಿಯಾಗುತ್ತಿದ್ದಾರೆ. ಇಲ್ಲಿ ಅವರು ಧರಿಸಿರುವ ತಿಳಿ ಬಣ್ಣದ ಲೆಹಂಗಾವು ಹೂವು, ಜಿಂಕೆ, ಹಕ್ಕಿ ಮುಂತಾದ ವಿನ್ಯಾಸಗಳಿಂದ ಕೂಡಿದ್ದು ಸಿಂಪಲ್​ ಆಗಿ ಆಕರ್ಷಣೀಯವಾಗಿದೆ. (ಅಧಿಕೃತ ಇನ್‌ಸ್ಟಾಗ್ರಾಮ್)
ನೀವು ಜಸ್ಟ್​​ 18 ದಾಟಿ 19, 20ರ ಹರೆಯದಲ್ಲಿದ್ದರೆ ಈ ಪಿಂಕ್​ ಬಣ್ಣ ನಿಮಗಾಗಿ. ಈ ಬಣ್ಣದ ಲೆಹಂಗಾ ನೋಟ ನಿಮ್ಮನ್ನು ಮತ್ತಷ್ಟು ಅಂದಗಾಣಿಸುತ್ತದೆ. (ಅಧಿಕೃತ ಇನ್‌ಸ್ಟಾಗ್ರಾಮ್)
ಕೆಲವರಿಗೆ ಆಡಂಬರದ ಔಟ್​ಫಿಟ್​ಗಿಂದ ಸರಳವಾಗಿ ಕಣ್ಣಿಗೆ ಹಿತವಾಗಿ ಕಾಣುವುದೆಂದರೆ ಇಷ್ಟ. ಅಂತವರಿಗೆ ಪ್ರಿಯಾಂಕಾ ಚೋಪ್ರಾ ಜೋನಾಸ್​ ಲೆಹೆಂಗಾ ಮಾದರಿ ಸೂಟ್​ ಆಗಲಿದೆ. (ಅಧಿಕೃತ ಇನ್‌ಸ್ಟಾಗ್ರಾಮ್)
ಸಾರಾ ಅಲಿ ಖಾನ್ ಧರಿಸಿರುವ ಈ ಲೆಹಂಗಾ ಮಾದರಿಯಲ್ಲಿ ನೀವು ಧರಿಸುವುದಾದರೆ​ ಕನಿಷ್ಠ ಆಭರಣಗಳೊಂದಿಗೆ ರೆಡಿಯಾಗಿ. ಇದು ನಿಮ್ಮ ಒಟ್ಟಾರೆ ನೋಟಕ್ಕೆ ಸಾಂಪ್ರದಾಯಿಕ ಸ್ಪರ್ಶವನ್ನು ನೀಡುತ್ತದೆ. (ಅಧಿಕೃತ ಇನ್‌ಸ್ಟಾಗ್ರಾಮ್)
ನಟಿ ಕತ್ರಿನಾ ಕೈಫ್ ತಮ್ಮ ಗಮನಾರ್ಹವಾದ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ. 2019 ರಲ್ಲಿ ಅಂಬಾನಿ ಕುಟುಂಬದ ಭವ್ಯವಾದ ನವರಾತ್ರಿ ಆಚರಣೆಯಲ್ಲಿ ಅವರು ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು. (ಅಧಿಕೃತ ಇನ್‌ಸ್ಟಾಗ್ರಾಮ್)
ಹಳೆಯ ಈ ಫಿಶ್​ ಕಟ್​​ ಶೈಲಿ ಎಂದಿಗೂ ಫ್ಯಾಷನ್​ನಿಂದ ಹೊರಬರಲು ಸಾಧ್ಯವಿಲ್ಲ. ಜಾನ್ವಿ ಧರಿಸಿರುವ ಈ ಜರಿ ಕಸೂತಿ ಲೆಹೆಂಗಾವು ನಿಮ್ಮಲ್ಲಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. (ಅಧಿಕೃತ ಇನ್‌ಸ್ಟಾಗ್ರಾಮ್)

ABOUT THE AUTHOR

...view details