ಚಾಮರಾಜನಗರ: ಕೂಲಿ ಕೆಲಸಕ್ಕೆ ಬಂದಿದ್ದವನ ಮಗಳ ಮೇಲೆ ಕಾಮುಕನೋರ್ವ ಅತ್ಯಾಚಾರ ಎಸಗಿರುವ ಘಟನೆ ಹನೂರು ತಾಲೂಕಿನಲ್ಲಿ ನಡೆದಿದೆ. ತಮಿಳುನಾಡಿನ ತಾರಮಂಗಲ ಗ್ರಾಮದ ವೆಟ್ರಿವಲ್(28) ಅತ್ಯಾಚಾರ ಎಸಗಿರುವ ಆರೋಪಿ.
ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾವಿ ತೋಡುವ ಕೆಲಸಕ್ಕಾಗಿ ವ್ಯಕ್ತಿಯೋರ್ವನನ್ನು ವೆಟ್ರಿವಲ್ ಕರೆತಂದಿದ್ದ. ಬಾವಿ ತೋಡಲು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಬಾಲಕಿಯನ್ನು ವೆಟ್ರಿವಲ್ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು ಹುಡುಕಿಕೊಂಡು ತಂದೆ ಬರುವುದನ್ನು ಕಂಡ ವೆಟ್ರಿವಲ್, ಪರಾರಿಯಾಗಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಂಟ್ವಾಳ: ಶಾಲಾ ಕೊಠಡಿಯಲ್ಲಿ ಕೂಡಿಹಾಕಿ ಯುವತಿಯ ಅತ್ಯಾಚಾರ - ಆರೋಪಿ ಅರೆಸ್ಟ್ - YOUNG WOMAN RAPE