ಕರ್ನಾಟಕ

karnataka

ETV Bharat / photos

ಬಿಗ್​ ಬಾಸ್​​: ನಮ್ರತಾ ಪ್ರಕಾರ ನಿಷ್ಕಲ್ಮಷ, ಫೇಕ್​​, ವಿನ್ನರ್​ ಇವರೇ...!

ಬಿಗ್​ ಬಾಸ್​ ಮನೆಯಲ್ಲಿ 100 ದಿನಗಳಿಗೂ ಹೆಚ್ಚು ಸಮಯ ಇದ್ದ ನಮ್ರತಾ ಕಳೆದ ವಾರಾಂತ್ಯ ಮನೆಯಿಂದ ಹೊರ ಬಂದಿದ್ದಾರೆ. ಫಿನಾಲೆಗೆ ಇನ್ನೇನು ಒಂದು ಹೆಜ್ಜೆ ಇರುವ ಹೊತ್ತಲ್ಲಿ ಎಲಿಮಿನೇಟ್​ ಆಗಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ 106 ದಿನಗಳ ಬಿಗ್​ ಬಾಸ್​ ಪಯಣದ ಅನುಭವವನ್ನು ​​ ಇಂಟರ್​ವ್ಯೂವ್​ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪ್ರಕಾರ ನಿಷ್ಕಲ್ಮಷ, ಫೇಕ್​​, ಸ್ನೇಹಿತರು, ಅಣ್ಣ-ತಂಗಿ, ಟಾಪ್​​ 3 ಸ್ಪರ್ಧಿಗಳು, ವಿನ್ನರ್ ಯಾರೆಂಬುದನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.

By ETV Bharat Karnataka Team

Published : Jan 23, 2024, 3:33 PM IST

'ಕನ್ನಡ ಬಿಗ್ ಬಾಸ್​' ಫಿನಾಲೆಗೆ ದಿನಗಣನೆ
ಕೊನೆ ಕ್ಷಣದಲ್ಲಿ ಎಲಿಮಿನೇಟ್ ಆದ ​ನಮ್ರತಾ
106 ದಿನಗಳ ಬಿಗ್​ ಬಾಸ್​ ಪಯಣದ ಅನುಭವ ಹಂಚಿಕೊಂಡ ತಾರೆ
'ಎಲಿಮಿನೇಷನ್ ನಿಜಕ್ಕೂ ಶಾಕ್ ಆಗಿದೆ' - ನಮ್ರತಾ
'ನನ್ನದು ಏರಿಳಿತದ ಪಯಣ'
'ಸಣ್ಣ-ಪುಟ್ಟ ತಪ್ಪುಗಳಾಗಿರಬಹುದು'
'ಬಿಗ್​ ಬಾಸ್ ಸೋಲ್‌ಫುಲ್ ಜರ್ನಿ'
'ಸಂಗೀತಾ ಉತ್ತಮ ಸ್ನೇಹಿತೆ'
'ವಿನಯ್​​ ಅಣ್ಣನ ಸ್ಥಾನ ತುಂಬಿದ್ದಾರೆ'
'ಪ್ರತಾಪ್​​​ ಪೋಷಕರು ಮುಗ್ಧರು'
'ಪ್ರತಾಪ್​​ ಯಾವಾಗಲೂ ನನ್ನ ಪುಟ್ಟ ತಮ್ಮ'
'ಸಂಗೀತಾ, ವಿನಯ್​​​ರದ್ದು ನಿಷ್ಕಲ್ಮಷ ಮನಸ್ಸು'
'ತುಕಾಲಿ ಸಂತೋಷ್ ಫೇಕ್​​'
'ವಿನಯ್, ಸಂಗೀತಾ ಮತ್ತು ತುಕಾಲಿ ಟಾಪ್​ 3ರಲ್ಲಿರುತ್ತಾರೆ'
'ನನಗೆ ವಿನಯ್ ಗೆಲ್ಲಬೇಕು'
'ಆದರೆ ಯಾಕೋ ಸಂಗೀತಾ ವಿನ್ ಆಗ್ತಾರೆಂದು ನನ್ನ ಸಿಕ್ಸ್ತ್ ಸೆನ್ಸ್ ಹೇಳ್ತಿದೆ'
'ಫಿನಾಲೆಗೆ ತಲುಪಿರುವವರಲ್ಲಿ ಕಾರ್ತಿಕ್ ಮಹೇಶ್ ಕೊನೆ ಸ್ಥಾನದಲ್ಲಿರಬಹುದು'
'ಸಂತು-ಪಂತು ಆಟವನ್ನು ಬಹಳ ಎಂಜಾಯ್​ ಮಾಡಿದ್ದೇನೆ'
'ಬಿಗ್ ಬಾಸ್ ದನಿ, ಮೈಕ್​ ಅನ್ನು ಮಿಸ್​ ಮಾಡಿಕೊಳ್ಳಲಿದ್ದೇನೆ'
'ಸಂಗೀತಾ ಬಹಳ ತಪ್ಪು ತಿಳಿದುಕೊಂಡಿದ್ದೆ '
'ಆದರೆ ಅವರದ್ದು ನೇರನುಡಿ'
ವಿನಯ್​​ ನನಗೆ ಅಣ್ಣನಿಲ್ಲ ಎಂಬ ಕೊರಗನ್ನು ನೀಗಿಸಿದ್ದಾರೆ
ಬಿಗ್​ ಬಾಸ್​ ಕೊಟ್ಟ ಎಲ್ಲಾ ಸನ್ನಿವೇಶಗಳು ನನಗೆ ಪಾಠಗಳು
ನನ್ನನ್ನು ಸ್ಟಾಂಗ್​ ಮಾಡಿದ ಬಿಗ್​ ಬಾಸ್​ಗೆ ಧನ್ಯವಾದ
'ಹ್ಯಾಪಿಯೆಸ್ಟ್ ವರ್ಷನ್ ಆಫ್ ನಮ್ರತಾ ಇದು' ಎಂದು ಅಭಿಪ್ರಾಯಗಳನ್ನು ಹಂಚಿಕೊಂಡ ಮಾಜಿ ಸ್ಪರ್ಧಿ
ಈ ವಾರಾಂತ್ಯ ಬಿಗ್​ ಬಾಸ್​ ಫಿನಾಲೆ ಕಾರ್ಯಕ್ರಮ ನಡೆಯಲಿದೆ

ABOUT THE AUTHOR

...view details