ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾದ ಕುಲುಮೆಯಂತಾದ ಭೂಮಿ.. ಮಂಗಳವಾರದಂದು. ಇದೇ ಮೊದಲು ಎನ್ನುವಂತೆ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು.. ನರೇಲಾ ಮತ್ತು ಮಂಗೇಶ್ಪುರದಲ್ಲಿ 49.9 ಡಿಗ್ರಿ ತಾಪಮಾನ ದಾಖಲಾದರೆ. ನಜಫ್ಗರ್ನಲ್ಲಿ 49.5 ಡಿಗ್ರಿ ತಾಪಮಾನ ದಾಖಲಾಗಿದೆ.. ಹವಾಮಾನ ಇಲಾಖೆ ಮಾಹಿತಿ ಪ್ರಕಾರ. ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ತಾಪಮಾನ ದಾಖಲಾಗಿದ್ದು. ಹೀಟ್‌ವೇವ್ ಮುಂದುವರಿಯಲಿದೆ.. ಈ ಹಿಂದೆ 2016ರ ಮೇನಲ್ಲಿ ಜೋಧ್‌ಪುರದ ಫಲೋಡಿಯಲ್ಲಿ 51 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು. ಅದು ಭಾರತದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿತ್ತು.. 50 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ತಾಪಮಾನ ಸಾಮಾನ್ಯವಾಗಿ ರಾಜಸ್ಥಾನ ಮತ್ತು ಗುಜರಾತ್‌ನ ಕೆಲವು ಭಾಗಗಳನ್ನು ಒಳಗೊಂಡಂತೆ ಪಶ್ಚಿಮ ಭಾಗಗಳಲ್ಲಿ ದಾಖಲಾಗುತ್ತದೆ.. ಆದ್ರೆ ಕಳೆದ ಒಂದು ವಾರದಿಂದ ದೆಹಲಿಯಲ್ಲಿ 44 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ತಾಪಮಾನ ದಾಖಲಾಗುತ್ತಿದೆ.. ಇಂದು ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್. ಕನಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುವ ಸಾಧ್ಯತೆ ಇದೆ.. ಪಂಜಾಬ್. ಹರಿಯಾಣ. ಚಂಡೀಗಢ. ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಹೀಟ್ ವೇವ್ ಇರಲಿದೆ.. ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾನ್ಸೂನ್ ಆರಂಭವಾಗಲಿದೆ. ಈಗಾಗಲೇ ಕೆಲವೆಡೆ ಮಳೆಯಾಗಿದೆ.. ಸದ್ಯ ದೆಹಲಿಯಲ್ಲಿ ವಿದ್ಯುತ್ಗೆ ಹೆಚ್ಚಿನ ಬೇಡಿಕೆ ಇದೆ.. ಹಲವೆಡೆ ನೀರಿನ ಕೊರತೆ ಕಾಣಿಸಿಕೊಂಡಿದೆ.. ದೆಹಲಿ ತಾಪಮಾನ ಹೆಚ್ಚಳ.. ದೆಹಲಿ ತಾಪಮಾನ ಹೆಚ್ಚಳ.. ದೆಹಲಿ ತಾಪಮಾನ ಹೆಚ್ಚಳ.. ದೆಹಲಿ ತಾಪಮಾನ. ತತ್ತರಿಸಿದ ಜನ.. ದೆಹಲಿ ತಾಪಮಾನ ಹೆಚ್ಚಳ.. ತಾಪಮಾನ ಹೆಚ್ಚಳದಿಂದ ಕೂಲರ್ಗಳ ಮೊರೆ ಹೋಗುತ್ತಿರುವ ಜನ.. ದೆಹಲಿ ತಾಪಮಾನ ಹೆಚ್ಚಳ.. ದೆಹಲಿ ತಾಪಮಾನ ಹೆಚ್ಚಳ.