ಕರ್ನಾಟಕ

karnataka

ETV Bharat / photos

ಬೇಸಿಗೆಯಲ್ಲಿ ಹೈಡ್ರೇಟ್​ ಆಗಿರೋದು ಹೇಗೆ? ಈ ಹಣ್ಣುಗಳನ್ನು ತಿನ್ನಿ, ಉತ್ತಮ ಆರೋಗ್ಯ ಪಡೆಯಿರಿ - Water Rich Fruits - WATER RICH FRUITS

2024ರ ಬೇಸಿಗೆ ಬಿಸಿ ಬಹಳ ಜೋರಾಗೇ ಇದೆ. ಈ ಋತುವಿನಲ್ಲಿ ಆರೋಗ್ಯದ ಕಾಳಜಿಯನ್ನು ಕೊಂಚ ಹೆಚ್ಚೇ ಮಾಡಬೇಕು. ಬಿಸಿಲ ತಾಪದ ಪರಿಣಾಮವಾಗಿ ನಿರ್ಜಲೀಕರಣದಂತಹ ಹಲವು ಸಮಸ್ಯೆಗಳು ಬರುವುದನ್ನು ತಡೆಗಟ್ಟಲು ನೀವು ದೇಹಕ್ಕೆ ಸಮರ್ಪಕ ಪ್ರಮಾಣದ ನೀರನ್ನು ಪೂರೈಸಲೇಬೇಕು. ನೀರಿನಾಂಶ ಹೆಚ್ಚಿರುವ ಹಣ್ಣನ್ನು ಸೇವಿಸೋ ಮೂಲಕವೂ ಈ ಬಿಸಿಲ ಋತುವಿನಲ್ಲಿ ಉತ್ತಮ ಆರೋಗ್ಯ ಹೊಂದಬಹುದಾಗಿದೆ.

By ETV Bharat Karnataka Team

Published : Apr 9, 2024, 4:58 PM IST

2024ರ ಬೇಸಿಗೆ ಬಿಸಿ ಬಹಳ ಜೋರಾಗಿಯೇ ಇದೆ.
ಕೆಂಡದಂತಹ ಬಿಸಿಲ ತಾಪ ಜನರನ್ನು ಹೈರಾಣಾಗಿಸುತ್ತಿದೆ.
ನೀವು ನಿಮ್ಮ ದೇಹಕ್ಕೆ ಹೆಚ್ಚಿನ ನೀರನ್ನು ಪೂರೈಸಲೇಬೇಕು.
ನೀರು, ನೀರಿನಾಂಶ ಹೆಚ್ಚಿರುವ ಹಣ್ಣು ತರಕಾರಿ ಸೇವನೆ ಮೂಲಕವೂ ಬೇಸಿಗೆಯಲ್ಲಿ ಹೈಡ್ರೇಟ್​ ಆಗಿರಬಹದು.
ಹೆಚ್ಚು ನೀರು ಕುಡಿಯಲು ಸಾಧ್ಯವಿಲ್ಲ ಎನ್ನುವವರು ಈ ಹಣ್ಣುಗಳ ಸೇವನೆ ಮೂಲಕ ದೇಹಕ್ಕೆ ಸಮರ್ಪಕ ಪ್ರಮಾಣದ ನೀರು ಒದಗಿಸಬಹುದಾಗಿದೆ.
ಹೆಚ್ಚು ನೀರನ್ನು ಹೊಂದಿರುವ ಹಣ್ಣುಗಳ ಪೈಕಿ ಕಲ್ಲಂಗಡಿ ಮೊದಲನೆಯದು. ಶೇ.90ರಷ್ಟು ನೀರು ಇದರಲ್ಲಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಕಾರಿ. ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಸ್ಟ್ರಾಬೆರಿ ಫ್ಲೇವೊನಾಯ್ಡ್‌ಗಳು, ಫಿಟೊನ್ಯೂಟ್ರಿಯೆಂಟ್ಸ್, ಫೈಬರ್, ವಿಟಮಿನ್ ಸಿ, ಮ್ಯಾಂಗನೀಸ್, ಫೋಲೇಟ್ ಮತ್ತು ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ಜೀರ್ಣಕ್ರಿಯೆಗೆ ಉಪಯುಕ್ತ.
ಕಿತ್ತಳೆ ದೇಹವನ್ನು ಹೈಡ್ರೇಟ್ ಮಾಡಿ ಚೈತನ್ಯ ನೀಡುತ್ತದೆ. ವ್ಯಾಯಾಮ ಮಾಡುವಾಗ ಅದನ್ನು ತೆಗೆದುಕೊಳ್ಳುವುದು ಉತ್ತಮ. ಇವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಸಿ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.
ಖರಬೂಜದ ಹಣ್ಣಿನಲ್ಲಿ ಶೇಕಡಾ 90ರಷ್ಟು ನೀರು ಇರುತ್ತದೆ. ಇದು ದೇಹವನ್ನು ತ್ವರಿತವಾಗಿ ಹೈಡ್ರೆಟ್​ ಮಾಡುತ್ತದೆ. ಇದನ್ನು ಜ್ಯೂಸ್ ಮೂಲಕ ತೆಗೆದುಕೊಳ್ಳಬಹುದು.
ಲಿಚಿ ಹಣ್ಣು ನೀರಿನಾಂಶದಿಂದ ಸಮೃದ್ಧವಾಗಿದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಿ, ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ.
ಹೀಗೆ ಹಣ್ಣು, ತರಕಾರಿಗಳ ಮೂಲಕ ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸಬಹುದಾಗಿದೆ.

ABOUT THE AUTHOR

...view details