ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು 'ದೆಹಲಿ ಚಲೋ' ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ.. ಪ್ರತಿಭಟನೆಯ ಭಾಗವಾಗಿ ರೈತರು ಪಂಜಾಬ್ - ಹರಿಯಾಣ ಗಡಿಯ ಶಂಭು ಪ್ರದೇಶವನ್ನು ತಲುಪಿದರು.. ಸೇತುವೆ ಮೇಲಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.. ಅಶ್ರುವಾಯು. ಜಲಫಿರಂಗಿ ಬಳಸಿದ ಹಿನ್ನೆಲೆ ಕೆಲ ಕ್ಷಣ ಘರ್ಷಣೆ ನಡೆಯಿತು. ಬಳಿಕ ರೈತರು ನಿನ್ನೆ ರಾತ್ರಿವರೆಗೂ ಕದನ ವಿರಾಮ ನೀಡಿದ್ದರು. ಇದೀಗ ಮತ್ತೆ ದೆಹಲಿ ಕಡೆ ಪ್ರತಿಭಟನೆಯ ಪ್ರಯಾಣ ಬೆಳೆಸಿದ್ದಾರೆ.. ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇತ್ತ ಪ್ರತಿಭಟನಾಕಾರರೂ ತಮ್ಮ ಹೋರಾಟ ಮುಂದುವರಿಸಿದ್ದಾರೆ.. ಅಶ್ರುವಾಯು. ಜಲಫಿರಂಗಿ ಬಳಸಿದ ಪರಿಣಾಮ 60 ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಮತ್ತು ರೈತರ ಪ್ರತಿದಾಳಿಯಲ್ಲಿ 24 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ.. ರೈತರು ದೆಹಲಿ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳ ಮೇಲೆ ಮುಳ್ಳು ತಂತಿ ಹಾಕಲಾಗಿತ್ತು.. ಸಿಂಘು ಗಡಿಯಲ್ಲಿ ಬ್ಯಾರಿಕೇಡ್‌ಗಳ ಮೇಲೆ ಮುಳ್ಳು ತಂತಿ ಹಾಕಲಾಗಿತ್ತು.. ಮುಖ್ಯ ರಸ್ತೆಗಳಲ್ಲಿ ಬೀಡುಬಿಟ್ಟಿರುವ ಪೊಲೀಸರು.. ಎತ್ತ ಕಣ್ಣಾಯಿಸಿದರೂ ಹೋರಾಟ. ಸಂಚಾರ ದಟ್ಟಣೆ.. ಪ್ರತಿಭಟನೆಗೆ ಸರ್ವ ಸಿದ್ಧತೆಗಳನ್ನೂ ನಡೆಸಿರುವ ರೈತರು.. ಪ್ರತಿಭಟನೆ ವೇಳೆ ಮಾಧ್ಯಮ ಮಿತ್ರರ ಪರದಾಟ.. ರಸ್ತೆಗಳಲ್ಲಿ ಗಂಟೆಗಟ್ಟಲೆ ನಿಂತ ವಾಹನಗಳು.. ರೈತರ 'ದೆಹಲಿ ಚಲೋ' ಪ್ರತಿಭಟನೆ.. ರೈತರ 'ದೆಹಲಿ ಚಲೋ' ಪ್ರತಿಭಟನೆ.. ರೈತರ 'ದೆಹಲಿ ಚಲೋ' ಪ್ರತಿಭಟನೆ.