ಕರ್ನಾಟಕ

karnataka

ETV Bharat / photos

ಕುತೂಹಲ ಕೆರಳಿಸುತ್ತದೆ ಭಿಂಬೆಟ್ಕಾ ಶಿಲಾ ವರ್ಣಚಿತ್ರಗಳು; ಮಾನವ ಇತಿಹಾಸದಲ್ಲಡಗಿವೆ ಹಲವು ರಹಸ್ಯಗಳು

By ETV Bharat Karnataka Team

Published : Feb 17, 2024, 1:14 PM IST

ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ಭಿಂಬೆಟ್ಕಾದಲ್ಲಿ ಕಾಣಸಿಗುವ ಶಿಲಾ ವರ್ಣಚಿತ್ರಗಳು ಸರಿಸುಮಾರು 10,000 ವರ್ಷಗಳ ಹಿಂದಿನವು ಎಂದು ಪರಿಗಣಿಸಲಾಗಿದೆ. ಈ ಸಂಬಂಧ ಅಧ್ಯಯನ, ಸಂಶೋಧನೆ ಮುಂದುವರಿದಿದ್ದು, ಮಾನವ ಇತಿಹಾಸ ಕಂಡುಹಿಡಿಯುವ ಪ್ರಯತ್ನ ಮುಂದುವರಿದಿದೆ. ಭಿಂಬೆಟ್ಕಾದ ಕೆಲ ಕುತೂಹಲಕಾರಿ ಫೋಟೋಗಳಿಲ್ಲಿವೆ ನೋಡಿ.
ಭಿಂಬೆಟ್ಕಾದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಯು ಮಾನವ ನಾಗರಿಕತೆಯ ರಹಸ್ಯಗಳನ್ನು ಬಹಿರಂಗಪಡಿಸುತ್ತವೆಯೇ? ಎಂಬುದನ್ನು ಕಾದು ನೋಡಬೇಕಿದೆ.
ಭಿಂಬೆಟ್ಕಾ ಮಧ್ಯಪ್ರದೇಶದಲ್ಲಿರುವ ಪುರಾತನ ಕ್ಷೇತ್ರ.
ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದ್ದು, ಅಧ್ಯಯನ ನಡೆಯುತ್ತಿದೆ.
ಕಾಡುಪ್ರಾಣಿಗಳ ಜೊತೆಗೆ ಜಿರಾಫೆಯಂತಹ ಆಕೃತಿಗಳು, ರಾಜರು - ಸೈನಿಕರಂತೆ ಕಾಣುವ ಆಕೃತಿಗಳು ಶಿಲಾವರ್ಣಚಿತ್ರಗಳಲ್ಲಿ ಕಾಣ ಸಿಗುತ್ತದೆ.
ಆ ಯುಗದ ಕೆತ್ತನೆ ಇಂದಿಗೂ ಹಾಗೇ ಇದ್ದು, ಅಂದಿನ ಜೀವನಶೈಲಿಯನ್ನು ಈ ಚಿತ್ರಗಳಲ್ಲಿ ಕಾಣಬಹುದು.
ಕಳೆದ ವರ್ಷ ಸಾತ್ಪುರದ ದಟ್ಟ ಅರಣ್ಯಗಳಲ್ಲಿ ಹತ್ತು ಸಾವಿರ ವರ್ಷಗಳಷ್ಟು ಹಳೆಯದಾದ ಶಿಲಾ ವರ್ಣಚಿತ್ರಗಳು ಕಂಡು ಬಂದಿವೆ.
13 ಪುರಾತತ್ವಶಾಸ್ತ್ರಜ್ಞರ ತಂಡ ಇಲ್ಲಿ ಅಧ್ಯಯನ ನಡೆಸುತ್ತಿದೆ.
ಈ ಹೊಸ ಸಂಶೋಧನೆ ಒಂದು ವರ್ಷ ಸಮಯ ತೆಗೆದುಕೊಳ್ಳಲಿದೆ.
ಇಲ್ಲಿ ಮನುಷ್ಯರ ಅಸ್ತಿತ್ವ ಎಂದಿನಿಂದ ಇತ್ತು? ಹೇಗಿತ್ತು? ಎಂಬುದನ್ನು ಪತ್ತೆ ಹಚ್ಚಲು ತಂಡ ಪ್ರಯತ್ನಿಸುತ್ತಿದೆ.

ABOUT THE AUTHOR

...view details