ಕರ್ನಾಟಕ

karnataka

ETV Bharat / opinion

ಡಬ್ಲ್ಯೂಟಿಒ 13ನೇ ಸಮ್ಮೇಳನ: ಆಹಾರ ಭದ್ರತೆ, ಎಂಎಸ್​ಪಿ ಬಗ್ಗೆ ಚರ್ಚೆ - ಆಹಾರ ಭದ್ರತೆ

ಇಂದಿನಿಂದ ಯುಎಇಯ ಅಬುಧಾಬಿಯಲ್ಲಿ ಡಬ್ಲ್ಯೂಟಿಒದ 13ನೇ ಸಮ್ಮೇಳನ ನಡೆಯಲಿದ್ದು, ವಿಶ್ವ ಆಹಾರ ಭದ್ರತೆ, ಎಂಎಸ್​ಪಿ ಬಗ್ಗೆ ಚರ್ಚೆ ನಡೆಯಲಿದೆ. ಡಬ್ಲ್ಯೂಟಿಒದ ನೀತಿ ನಿರೂಪಣೆಗಳ ಬಗ್ಗೆ ಪರಿಟಾಲ ಪುರುಷೋತ್ತಮ ಅವರು ಇಲ್ಲಿ ವಿವರಿಸಿದ್ದಾರೆ.

ಡಬ್ಲ್ಯೂಟಿಒ 13ನೇ ಸಮ್ಮೇಳನ
ಡಬ್ಲ್ಯೂಟಿಒ 13ನೇ ಸಮ್ಮೇಳನ

By ETV Bharat Karnataka Team

Published : Feb 26, 2024, 2:07 PM IST

ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಗೆ ಕಾನೂನು ಮಾನ್ಯತೆ, ಡಬ್ಲ್ಯೂಟಿಒ ಒಪ್ಪಂದದಿಂದ ಭಾರತ ಹೊರ ಬರಬೇಕು ಎಂದು ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿದ್ದರೆ, ಇಂದಿನಿಂದ (ಫೆಬ್ರವರಿ 26 ರಿಂದ 29) ಮೂರು ದಿನಗಳ ಕಾಲ ಯುಎಇಯ ಅಬುಧಾಬಿಯಲ್ಲಿ ಡಬ್ಲ್ಯುಟಿಒದ 13ನೇ ಸಚಿವರ ಸಮ್ಮೇಳನ ನಡೆಯಲಿದೆ. ಅಲ್ಲಿ ಸದಸ್ಯ ರಾಷ್ಟ್ರಗಳ ಮಧ್ಯೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

164 ರಾಷ್ಟ್ರಗಳು ಡಬ್ಲ್ಯೂಟಿಒದ ಸದಸ್ಯ ರಾಷ್ಟ್ರಗಳಾಗಿವೆ. ಇದರಲ್ಲಿ ಭಾರತವೂ ಒಂದಾಗಿದ್ದು, ಸಮ್ಮೇಳನದಲ್ಲಿ ಭಾರತವು ಕೃಷಿ ವಿಷಯಗಳ ಬಗ್ಗೆ ಯಾವುದೇ ಚರ್ಚೆಯಲ್ಲಿ ತೊಡಗುವುದಿಲ್ಲ ಎಂದು ಹೇಳಲಾಗಿದೆ. ಇದಲ್ಲದೇ, ಸಾರ್ವಜನಿಕ ಸಮಸ್ಯೆಗೆ ಶಾಶ್ವತ ಪರಿಹಾರ, ಸ್ಟಾಕ್ ಹೋಲ್ಡಿಂಗ್, ದೇಶದ ಸಾರ್ವಜನಿಕ ಸಂಗ್ರಹಣೆ ವ್ಯವಸ್ಥೆ, 800 ಮಿಲಿಯನ್ ಬಡವರ ಆಹಾರ ಭದ್ರತೆ ಖಾತ್ರಿ, 95.3 ಮಿಲಿಯನ್ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕುರಿತು ಚರ್ಚೆ ನಡೆಯಲಿದೆ.

ಭಾರತೀಯ ರೈತರು ಬಡವರಾಗಿದ್ದು, ಅವರ ಜೀವನ ಕಟ್ಟಲು ಎಂಎಸ್​ಪಿ ಅಗತ್ಯವಿದೆ. ಆಹಾರ ಭದ್ರತಾ ಕಾರ್ಯಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಪಬ್ಲಿಕ್​ ಸ್ಟಾಕ್ ಹೋಲ್ಡಿಂಗ್, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿ ಪ್ರತಿ ತಿಂಗಳು 813 ಮಿಲಿಯನ್ ಬಡವರಿಗೆ ಉಚಿತ ಪಡಿತರ ಒದಗಿಸುವುದಾಗಿದೆ.

ಕನಿಷ್ಠ ಬೆಂಬಲ ಬೆಲೆ ಅಡಿ ರೈತರಿಂದ ಅಕ್ಕಿ ಮತ್ತು ಗೋಧಿಯಂತಹ ಆಹಾರ ಧಾನ್ಯಗಳ ಖರೀದಿ ಮಾಡಲಾಗುತ್ತದೆ. ಮಾರುಕಟ್ಟೆ ಬೆಲೆಗಿಂತ ನಿಗದಿತ ದರಕ್ಕೆ ಬೆಳೆ ಖರೀದಿ ಮಾಡಲಾಗುತ್ತದೆ. ಭಾರತವಲ್ಲದೇ, ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ನ್ಯೂಜಿಲೆಂಡ್ ಸೇರಿದಂತೆ ವಿಶ್ವ ವ್ಯಾಪಾರ ಸಂಸ್ಥೆ ಸದಸ್ಯ ರಾಷ್ಟ್ರಗಳು ಎಂಎಸ್​ಪಿ ನೀಡುತ್ತವೆ.

ಆದರೆ, ಈ ಎಂಎಸ್​​ಪಿಗೆ ಕೆಲ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದು ವಿಶ್ವ ವ್ಯಾಪಾರ ಒಪ್ಪಂದಕ್ಕೆ ಅಡ್ಡಿ ಎಂದು ಹೇಳಿವೆ. ಹೀಗಾಗಿ ಎಂಎಸ್​ಪಿಯನ್ನು ನಿಲ್ಲಿಸಬೇಕು ಎಂಬ ವಾದನ್ನು 2013 ರಲ್ಲಿ ನಡೆದ ಡಬ್ಲ್ಯೂಟಿಒದ 9ನೇ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗಿತ್ತು. ಆಹಾರ ಭದ್ರತೆಗಾಗಿ ಕೆಲ ವರ್ಷಗಳವರೆಗೆ ನೀಡುವುದು ಬಳಿಕ ಅದನ್ನು ನಿಲ್ಲಿಸುವ ಬಗ್ಗೆ 'ಶಾಂತಿ ಷರತ್ತು' ಒಪ್ಪಂದದ ಅಡಿ ಒಪ್ಪಿಕೊಳ್ಳಲಾಗಿತ್ತು.

ಆದರೆ, ಇದನ್ನು ಭಾರತ ವಿರೋಧಿಸಿತ್ತು. ಎಂಎಸ್​ಪಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಧ್ವನಿ ಎತ್ತಿತ್ತು. ಇದಕ್ಕೆ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟ ಸೇರಿದಂತೆ 80 ಕ್ಕೂ ಹೆಚ್ಚು ದೇಶಗಳು (ಜಿ-33) ಮತ್ತು ಆಫ್ರಿಕನ್ ಗುಂಪು ಈ ವಿಷಯದಲ್ಲಿ ಭಾರತವನ್ನು ಬೆಂಬಲಿಸುತ್ತಿವೆ.

ಕೃಷಿ ಕ್ಷೇತ್ರ ಇಂದು ಸಾಕಷ್ಟು ಬದಲಾಗಿದೆ. ಅದರ ವೆಚ್ಚಗಳೂ ಬದಲಾಗಿವೆ. ಆಹಾರ ಭದ್ರತೆ ಅಗತ್ಯವಿರುವ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ದೊಡ್ಡ ದೇಶಗಳೊಂದಿಗೆ ವ್ಯಾಪಾರ ನಡೆಸುವಲ್ಲಿ ಸ್ಪರ್ಧಿಸುವುದು ಸಾಧ್ಯವಿಲ್ಲ. ಜೊತೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೃಷಿ ಉತ್ಪನ್ನವೂ ಹೆಚ್ಚಾಗಿದೆ. ವಾಸ್ತವವಾಗಿ ಸಣ್ಣ ರೈತರಿಗೆ ಇಂದು ಸರ್ಕಾರದ ಬೆಂಬಲದ ಹೆಚ್ಚಿನ ಅಗತ್ಯವಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತವು ವಿಧಿಸಿರುವ ರಫ್ತು ನಿರ್ಬಂಧಗಳನ್ನು ಚರ್ಚಿಸಲು ಬಯಸುತ್ತವೆ. ಅಕ್ಕಿ ಮತ್ತು ಈರುಳ್ಳಿಯಂತಹ ಕೃಷಿ ಉತ್ಪನ್ನಗಳ ಮೇಲೆ ವ್ಯಾಪಾರ ನಿರ್ಬಂಧ ಹೇರಲಾಗಿದೆ. ಇದನ್ನು ಅಮೆರಿಕ ಮತ್ತು ಯುರೋಪ ರಾಷ್ಟ್ರಗಳು ವಿರೋಧಿಸುತ್ತವೆ. ಇದು 13ನೇ ಡಬ್ಲ್ಯೂಟಿಒ ಸಮ್ಮೇಳನದಲ್ಲಿ ಚರ್ಚೆಗೆ ಬರಲಿವೆ.

ಇದನ್ನೂ ಓದಿ:ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಮರುಸ್ಥಾಪಿಸುವ ಬೇಡಿಕೆಯ ಹಿಂದಿನ ಕಾರಣವೇನು? ಇಲ್ಲಿದೆ ಮಾಹಿತಿ

ABOUT THE AUTHOR

...view details