ನವದೆಹಲಿ:ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ನಿರ್ಬಂಧವನ್ನು ಏಪ್ರಿಲ್ ಅಂತ್ಯದಲ್ಲಿ ಹಿಂಪಡೆದಿದೆ. ಈ ನಿರ್ಧಾರ ಭಾರತದ ಎರಡು ನೆರೆಯ ಎರಡು ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಬಾಂಗ್ಲಾದೇಶದಲ್ಲಿ ಇದರ ಬೆಲೆ ಇಳಿಕೆ ಕಂಡರೆ, ನೇಪಾಳದಲ್ಲಿ ದರ ದುಪ್ಪಟ್ಟಾಗಲಿದೆ.
ಏಪ್ರಿಲ್ 27ರಂದು ಭಾರತ ಸರ್ಕಾರ ನೆರೆಯ ಆರು ದೇಶಗಳಾದ ಬಾಂಗ್ಲಾದೇಶ, ಯುನೈಟೈಡ್ ಅರಬ್ ಎಮಿರೇಟ್ಸ್ (ಯುಎಇ), ಭೂತನ್, ಬೆಹರೀನ್, ಮಾರಿಷಸ್ ಮತ್ತು ಶ್ರೀಲಂಕಾಕ್ಕೆ ಒಟ್ಟು 99.150 ಮಿಲಿಯನ್ ಟನ್ ಈರುಳ್ಳಿ ರಫ್ತಿಗೆ ಅನುಮತಿ ನೀಡಿತ್ತು. ಇದರ ಹಿಂದೆಯೇ ಮೇ 4ರಂದು ಈರುಳ್ಳಿ ಮೇಲೆ ಹಾಕಿದ್ದ ರಫ್ತು ನಿರ್ಬಂಧ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ. ಈ ಬಾರಿ ಮಾನ್ಸೂನ್ ಪೂರಕ ಮುನ್ಸೂಚನೆ ಹಾಗೂ 2024ರ ಖಾರಿಫ್ ಬೆಳೆ ಉತ್ಪಾದನೆ ಉತ್ತಮವಾಗಿದ್ದು, ಹೋಲ್ಸೇಲ್ ಮತ್ತು ಚಿಲ್ಲರೆ ಮಾರುಕಟ್ಟೆ ಪರಿಸ್ಥಿತಿ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ಮೇಲಿನ ನಿಷೇಧವನ್ನು ತೆಗೆದುಹಾಕಿದ್ದಾಗಿ ಗ್ರಾಹಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದರು.
ಜೊತೆಗೆ ಸದ್ಯ ಮಂಡಿ (ಹೋಲ್ಸೇಲ್ ಮಾರುಕಟ್ಟೆ) ಮತ್ತು ಚಿಲ್ಲರೆ ಮಾರುಕಟ್ಟೆ ಸ್ಥಿತಿಗತಿ ಸ್ಥಿರವಾಗಿದೆ. ಹಾಗೇ ಅಂತಾರಾಷ್ಟ್ರೀಯ ಲಭ್ಯತೆ ಮತ್ತು ದರದ ಸ್ಥಿತಿ ಹಿನ್ನೆಲೆಯಲ್ಲಿ ಈ ನಿರ್ಧಾರ ನಡೆಸಿದ್ದಾಗಿ ತಿಳಿಸಿದರು. ಅಧಿಕಾರಿಗಳ ಅಂದಾಜಿನ ಪ್ರಕಾರ, 2024ರ ರಾಬಿ ಬೆಳೆಯಲ್ಲಿ ಈರುಳ್ಳಿ ಉತ್ಪಾದನೆ 191 ಲಕ್ಷ ಟನ್ ಆಗಿದೆ. ಮಾಸಿಕ ದೇಶಿಯ ಬಳಕೆ 17 ಲಕ್ಷ ಟನ್ ಇದೆ.
ಭಾರತದ ಈರುಳ್ಳಿಗೆ ಯಾಕೆ ಪ್ರಾಮುಖ್ಯತೆ?:ಚೀನಾದ ಬಳಿಕ ಅತಿ ಹೆಚ್ಚು ಈರುಳ್ಳಿ ಉತ್ಪಾದನೆ ಮಾಡುವ ದೇಶ ಭಾರತವಾಗಿದೆ. ಜಾಗತಿಕ ಉತ್ಪಾದನೆಯಲ್ಲಿ ಶೇ 20ರಷ್ಟು ಕೊಡುಗೆ ನೀಡುತ್ತದೆ. ಈರುಳ್ಳಿ ಬೆಳೆಗೆ ಪೂರಕ ವಾತಾವರಣ, ಉತ್ತಮ ಕೃಷಿ ಭೂಮಿ ಜೊತೆಗೆ ಅತ್ಯುತ್ತಮ ಸ್ಥಾಪಿತ ನೀರಾವರಿ ವ್ಯವಸ್ಥೆ ಹೊಂದಿರುವುದೇ ಇದಕ್ಕೆ ಕಾರಣ.
ಭಾರತವೂ ವೈವಿಧ್ಯ ಕೃಷಿ ಪರಿಸ್ಥಿತಿ ಹೊಂದಿದ್ದು, ವರ್ಷ ಪೂರ್ತಿ ಈರುಳ್ಳಿಯ ವಿವಿಧ ತಳಿಗಳ ಬೆಳೆಯಲಾಗುವುದು. ಇಲ್ಲಿನ ಈರುಳ್ಳಿ ಉತ್ಪಾದನೆಯ ಪ್ರಮುಖ ರಾಜ್ಯಗಳು ಎಂದರೆ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಬಿಹಾರ್, ಮಧ್ಯಪ್ರದೇಶ ಮತ್ತು ರಾಜಸ್ಥಾನ್. ಇಲ್ಲಿ ಈರುಳ್ಳಿ ಬೆಳೆಗೆ ಉತ್ತಮವಾದ ಮಣ್ಣು ಮತ್ತು ತಾಪಮಾನ ಪರಿಸ್ಥಿತಿ ಇದೆ.
ಇಲ್ಲಿ ಬೆಳೆಯುವ ಅತಿ ಹೆಚ್ಚು ಈರುಳ್ಳಿ ಉತ್ಪಾದನೆಯಿಂದಾಗಿ ಭಾರತ ದೇಶಿಕ ಬಳಕೆ ಜೊತೆಗೆ ರಫ್ತು ಕೂಡ ಮಾಡುತ್ತದೆ. ಹೆಚ್ಚಿನ ಪೂರೈಕೆ ಮತ್ತು ಕಡಿಮೆ ಉತ್ಪಾದನಾ ವೆಚ್ಚದಿಂದಾಗಿ ಭಾರತ ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾ ಸೇರಿದಂತೆ ಅನೇಕ ದೇಶಗಳಿಗೆ ಈರುಳ್ಳಿ ರಫ್ತು ಮಾಡುತ್ತದೆ.
ಜಾಗತಿಕವಾಗಿ ಈರುಳ್ಳಿ ರಫ್ತಿನಲ್ಲಿ ಭಾರತವೂ ಮುಂದಿದೆ. ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕ ದೇಶಗಳಿಗೆ ಈರುಳ್ಳಿ ರಫ್ತು ಮಾಡುತ್ತದೆ. ಜೊತೆಗೆ ಭಾರತ ಕೂಡ ಹಲವು ದೇಶಗಳೊಂದಿಗೆ ಈರುಳ್ಳಿ ರಫ್ತಿನ ಸರಾಗ ವಹಿವಾಟಿಗೆ ವ್ಯಾಪಾರ ಒಪ್ಪಂದ ನಡೆಸಿದೆ.
ಬೆಳೆಯುತ್ತಿರುವ ಜನಸಂಖ್ಯೆ, ಬದಲಾಗುತ್ತಿರುವ ಆಹಾರ ಪದ್ಧತಿ, ಈರುಳ್ಳಿ ಹೊಂದಿರುವ ಅಡುಗೆಗಳ ಪ್ರಖ್ಯಾತಿಗಳಿಂದಾಗಿ ಜಾಗತಿಕವಾಗಿ ಈರುಳ್ಳಿ ಬೇಡಿಕೆ ಹೆಚ್ಚಿದೆ. ಹಲವು ದೇಶಗಳ ಈ ಈರುಳ್ಳಿ ಬೇಡಿಕೆ ಮುಟ್ಟುವಲ್ಲಿ ಭಾರತ ಪ್ರಮುಖ ದೇಶವಾಗಿದೆ. ಭಾರತ ದೇಶಿಯ ಮತ್ತು ವಿದೇಶಿ ಮಾರುಕಟ್ಟೆಗೆ ಸರಿಯಾದ ಸಮಯದಲ್ಲಿ ಈರುಳ್ಳಿ ವಿತರಣೆಗೆ ಮತ್ತು ರಕ್ಷಣೆಗೆ ಅನುಕೂಲವಾಗುವಂತೆ ಅನೇಕ ಶೀತಲ ಸಂಗ್ರಹಣೆ ವ್ಯವಸ್ಥೆಯ ನೆಟ್ವರ್ಕ್ ಮತ್ತು ಸಮರ್ಥ ಸಾರಿಗೆ ವ್ಯವಸ್ಥೆಯನ್ನೂ ಕೂಡಾ ಅಭಿವೃದ್ಧಿಪಡಿಸಿದೆ.
ತಾತ್ಕಾಲಿಕವಾಗಿ ಈರುಳ್ಳಿ ರಫ್ತಿಗೆ ಭಾರತ ನಿರ್ಬಂಧ ವಿಧಿಸಿದ್ದರ ಕಾರಣವೇನು?: ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಭಾರತದಲ್ಲಿ 2023-24ರಲ್ಲಿ ರಾಬಿ ಮತ್ತು ಖಾರಿಫ್ ಅವಧಿಯಲ್ಲಿ ಅಂದಾಜಿಗಿಂತ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಉತ್ಪಾದನೆಯಾಗಿತ್ತು. ಈ ಹಿನ್ನೆಲೆ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಈರುಳ್ಳಿ ಲಭ್ಯತೆ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆ ಹೆಚ್ಚಿದ ಹಿನ್ನಲೆ 2023ರ ಡಿಸೆಂಬರ್ 8ರಂದು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ನಿರ್ಬಂಧವನ್ನು ವಿಧಿಸಿತ್ತು. ಈ ಮೂಲಕ ಖಾರೀಫ್ ಉತ್ಪಾದನೆಯಲ್ಲಿನ ಶೇ 20ರಷ್ಟು ಇಳಿಕೆಯ ನಡುವೆ ದೇಶಿಯ ಪೂರೈಕೆ ಹೆಚ್ಚಿಸಿತು. ಇದರಿಂದಾಗಿ ಸರ್ಕಾರ 2024ರ ಹೊಸ ಬೆಳೆ ಬರುವವರೆಗೆ ಈರುಳ್ಳಿ ಬೆಲೆ ಸ್ಥಿರಗೊಳಿಸಲು ಸಹಾಯ ಮಾಡಿತು.
ಈರುಳ್ಳಿಯಲ್ಲಿ ಪ್ರದೇಶ ಮತ್ತು ಹವಾಮಾನದ ಆಧಾರದ ಮೇಲೆ ರಾಬಿ ಮತ್ತು ಖಾರಿಫ್ ಎರಡರಲ್ಲೂ ಬೆಳೆಯಬಹುದಾಗಿದೆ. ಖಾರಿಫ್ ಬೆಳೆಗಳು ಜೂನ್- ಜುಲೈನಲ್ಲಿ ಬಿತ್ತನೆ ಮಾಡಿ ಚಳಿಗಾಲ ಎಂದರೆ ಅಕ್ಟೋಬರ್ ನವಂಬರ್ ಹೊತ್ತಿನಲ್ಲಿ ಕೂಯ್ಲು ಮಾಡಲಾಗುವುದು. ಈ ಈರುಳ್ಳಿಗಳು ಸಾಮಾನ್ಯವಾಗಿ ಕಡಿಮೆ ಸಂಗ್ರಹಣೆ ಹೊಂದಿದ್ದು, ಸುಗ್ಗಿಯ ನಂತರ ಸಂಸ್ಕರಿಸಲಾಗುತ್ತದೆ.