ಕರ್ನಾಟಕ

karnataka

ETV Bharat / opinion

ಜಮ್ಮುವಿನಲ್ಲಿ ಭಯೋತ್ಪಾದನೆ ಉಲ್ಬಣ, 'ನಯಾ ಕಾಶ್ಮೀರ'ದಲ್ಲಿ ಅನಿಶ್ಚಿತತೆ: ಚುನಾವಣೆಗಳು ಹಿಂಸಾಚಾರ ತಡೆಯಬಹುದೇ? - Terror Surge in Jammu - TERROR SURGE IN JAMMU

ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಳವನ್ನು ಗಮನಿಸಿದರೆ, ಸದ್ಯ ಕಾಶ್ಮೀರದಿಂದ ಕಡಿಮೆ ಉಗ್ರಗಾಮಿ ಪೀಡಿತ ಪ್ರದೇಶವಾದ ಜಮ್ಮುವನ್ನು ಉಗ್ರರು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಇದರ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ನಡೆಯದಿರುವ ವಿಧಾನಸಭಾ ಚುನಾವಣೆ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ. ಬುಲೆಟ್‌ನ ಮೇಲೆ ಮತದಾನ ಜಯಗಳಿಸುತ್ತದೆಯೇ? ಅಥವಾ ಚೀನಾ ಮತ್ತು ಪಾಕಿಸ್ತಾನವನ್ನು ದ್ವಿಮುಖ ಸವಾಲನ್ನು ಭಾರತ ಮತ್ತಷ್ಟು ಎದುರಿಸಬೇಕಾಗಿದೆಯೇ? ಎಂಬ ಪ್ರಶ್ನೆಗಳು ಸಂಧಿಸುತ್ತಿವೆ. ಈ ಬಗ್ಗೆ ಸಂಜಯ್ ಕಪೂರ್ ಅವರ ಲೇಖನವಿದು.

ಭದ್ರತಾ ಸಿಬ್ಬಂದಿ
ಭದ್ರತಾ ಸಿಬ್ಬಂದಿ (ANI)

By ETV Bharat Karnataka Team

Published : Jul 26, 2024, 5:14 PM IST

ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಳವನ್ನು ಗಮನಿಸಿದರೆ, ಸದ್ಯ ಕಾಶ್ಮೀರದಿಂದ ಕಡಿಮೆ ಉಗ್ರಗಾಮಿ ಪೀಡಿತ ಪ್ರದೇಶವಾದ ಜಮ್ಮುವನ್ನು ಉಗ್ರರು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಇದರ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ನಡೆಯದಿರುವ ವಿಧಾನಸಭಾ ಚುನಾವಣೆ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ.

ಉತ್ತರ ಕಾಶ್ಮೀರದ ಕುಪ್ವಾರದಲ್ಲಿರುವ ಬುಂಗಸ್ ಕಣಿವೆ (ANI) (ANI)

ಬುಲೆಟ್‌ನ ಮೇಲೆ ಮತದಾನ ಜಯಗಳಿಸುತ್ತದೆಯೇ? ಅಥವಾ ಚೀನಾ ಮತ್ತು ಪಾಕಿಸ್ತಾನವನ್ನು ದ್ವಿಮುಖ ಸವಾಲನ್ನು ಭಾರತ ಮತ್ತಷ್ಟು ಎದುರಿಸಬೇಕಾಗಿದೆಯೇ? ಎಂಬ ಪ್ರಶ್ನೆಗಳು ಎದುರಾಗುತ್ತಿವೆ.

ಜಮ್ಮುವಿನಲ್ಲಿ ಭಾರತೀಯ ಸೇನೆಯ ಮೇಲೆ ಹಠಾತ್ ಭಯೋತ್ಪಾದಕ ದಾಳಿಯ ಹೆಚ್ಚಳವು ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಗಡಿಯ ಸ್ಥಿರತೆಯ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಚುನಾವಣೆಯ ಬಗ್ಗೆ ಅನೇಕ ವಿಶ್ಲೇಷಕರಿಗೆ ಅಚ್ಚರಿ ಉಂಟು ಮಾಡಿದೆ. ಚೀನಾ ಮತ್ತು ಪಾಕಿಸ್ತಾನದೊಂದಿಗಿನ ದ್ವಿಮುಖ ಸಂಬಂಧವು ಹೇಗಿರುತ್ತದೆ ಎಂಬುದರ ಸೂಚನೆಯೇ ಇದು? ಎಂಬ ಪ್ರಶ್ನೆ ತಲೆ ಎತ್ತಿದೆ.

ಸೈನಿಕರ ಪಾರ್ಥಿವ ಶರೀರಕ್ಕೆ ಸೇನಾ ಸಿಬ್ಬಂದಿ ಅಂತಿಮ ನಮನ ಸಲ್ಲಿಸುತ್ತಿರುವುದು (ANI)

ಸೇನೆ ಮತ್ತು ಇತರ ಭದ್ರತಾ ಪಡೆಗಳ ವಿರುದ್ಧ ಇತ್ತೀಚೆಗೆ ನಡೆದ ದಾಳಿಗಳು ಕಾಶ್ಮೀರದಲ್ಲಿದ್ದ ಉತ್ಸಾಹಕ್ಕೆ ವ್ಯತಿರಿಕ್ತವಾಗಿದೆ. ಏಕೆಂದರೆ ಸಾವಿರಾರು ಪ್ರವಾಸಿಗರು ಕಣಿವೆಯ ರಮಣೀಯ ಸೌಂದರ್ಯ ಕಣ್ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ. ಇತ್ತೀಚಿಗೆ ರಾಜ್ಯದ ಜಮ್ಮು ಜಿಲ್ಲೆಯ ರಿಯಾಸಿ ಪಟ್ಟಣದಲ್ಲಿ ಕಂದಕಕ್ಕೆ ಬಿದ್ದ ಬಸ್​ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಜೂನ್ 9 ರಂದು ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲೇ ಈ ದುರಂತ ನಡೆದಿತ್ತು. ಈ ಘಟನೆ ನಂತರವೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಂದಿನಿಂದ ಭದ್ರತಾ ಸಿಬ್ಬಂದಿಯ ಮೇಲೆ ಇಲ್ಲಿಯವರೆಗೆ ಅನೇಕ ಭಯೋತ್ಪಾದಕ ದಾಳಿಗಳು ನಡೆದಿವೆ. ಹಲವು ವರ್ಷಗಳಿಂದ ಶಾಂತವಾಗಿದ್ದ ಜಮ್ಮುವಿನ ದೋಡಾ, ಕಥುವಾ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಭಯೋತ್ಪಾದಕ ದಾಳಿಯಿಂದ ಸಾವುನೋವುಗಳು ಹೆಚ್ಚಾಗಿವೆ.

ಶ್ರೀನಗರದಲ್ಲಿ ಮುಹರಂ ಮೆರವಣಿಗೆಯ ಸಂದರ್ಭದಲ್ಲಿ ಸೈನಿಕರು ಗಸ್ತಿನಲ್ಲಿರುವುದು (ANI)

ಭಯೋತ್ಪಾದಕ ದಾಳಿಯಲ್ಲಿನ ಬದಲಾವಣೆಗಳೇನು?:ಕಾಶ್ಮೀರದಿಂದ ಸದ್ಯ ಕಡಿಮೆ ಉಗ್ರಗಾಮಿ ಪೀಡಿತ ಪ್ರದೇಶವಾಗಿದ್ದ ಜಮ್ಮುವಿನ ಉಗ್ರರ ಗಮನ ಕೇಂದ್ರೀಕೃತವಾಗಿದೆ. 2020 ರ ಜೂನ್‌ನಲ್ಲಿ ಗಾಲ್ವಾನ್‌ನಲ್ಲಿನ ಮುಖಾಮುಖಿಯ ನಂತರ ಚೀನಾದ ಸೈನಿಕರನ್ನು ಎದುರಿಸಲು ಜಮ್ಮುವಿನಿಂದ ಲಡಾಖ್‌ಗೆ ಸೇನಾ ಪಡೆಗಳನ್ನು ಸ್ಥಳಾಂತರಿಸಿದ ನಂತರ ಈ ಪ್ರದೇಶದಲ್ಲಿ ಉಗ್ರವಾದ ಮತ್ತಷ್ಟು ಬೆಳೆದಿದೆ ಎಂಬುದು ವ್ಯೂಹಾತ್ಮಕ ತಜ್ಞರ ಅಭಿಪ್ರಾಯವಾಗಿದೆ. ಗಾಲ್ವಾನ್‌ ಘಟನೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

ಹುತಾತ್ಮರಿಗೆ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು. (ANI)

ಲಡಾಖ್ ಘರ್ಷಣೆಯ ನಂತರ ಭಾರತೀಯ ಸೇನೆಯು ಚೀನಾಕ್ಕೆ ಹತ್ತಿರವಿರುವ ವಲಯಗಳಲ್ಲಿ ಸೇನೆಯ ಉಪಸ್ಥಿತಿಯನ್ನು ಹೆಚ್ಚಿಸಿದೆ. ಭಾರತ ಮತ್ತು ಪಾಕಿಸ್ತಾನ ಅಥವಾ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಸಂಭವಿಸಿದರೆ, ಇಸ್ಲಾಮಾಬಾದ್ ಮತ್ತು ಬೀಜಿಂಗ್ ಎರಡೂ ತಮ್ಮ ಮಿಲಿಟರಿಗಳು ಪರಸ್ಪರ ಸಮನ್ವಯಗೊಳ್ಳುತ್ತವೆ. ಇದರಿಂದ ಭಾರತ ಈಗ ನೋಡುತ್ತಿರುವುದಕ್ಕಿಂತ ಹೆಚ್ಚಿನ ಉಗ್ರಗಾಮಿತ್ವವನ್ನು ಎದುರಿಸಬೇಕಾಗಬಹುದು ಎಂದು ಊಹಿಸಿದರೆ ತಪ್ಪಾಗಲಾರದು.

ಭಾರತೀಯ ಪಡೆಗಳ ಮೇಲೆ ದಾಳಿ ಮಾಡುವ ಭಯೋತ್ಪಾದಕರು ಗುಣಮಟ್ಟದ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥಿತ ಬೆಂಬಲ ಹೊಂದಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅವರ ದೃಷ್ಟಿಯಲ್ಲಿ, ಹೆಚ್ಚಿನ ಭಯೋತ್ಪಾದಕರು ಪಾಕಿಸ್ತಾನದಿಂದ ಒಳನುಸುಳುವವರು. ಆದ್ದರಿಂದ, ಅವರಿಗೆ ಪಾಕಿಸ್ತಾನ ಅಥವಾ ಚೀನಾದ ಬೆಂಬಲವಿದೆ ಎಂಬುದು ಸ್ಪಷ್ಟವಾಗಿದೆ.

ದೇಶ ಮತ್ತು ಸರ್ಕಾರ ಬಿಕ್ಕಟ್ಟಿನಲ್ಲಿರುವಾಗ ಪಾಕಿಸ್ತಾನದ ಸೇನೆ ಏಕೆ ಇದನ್ನು ಮಾಡುತ್ತಿದೆ?:ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವುದನ್ನು ವಿರೋಧಿಸುವವರಿಗೆ ಉಗ್ರಗಾಮಿಗಳಿಂದ ಸಾಕಷ್ಟು ಬೆಂಬಲವಿದೆ ಎಂದು ಪಾಕಿಸ್ತಾನ ಸೇನೆಯು ತೋರಿಸಲು ಬಯಸುತ್ತದೆ ಎಂದು ಭಾರತೀಯ ರಕ್ಷಣಾ ವಲಯಗಳಲ್ಲಿನ ಅಭಿಪ್ರಾಯ.

ಜಮ್ಮು ಪ್ರದೇಶದಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (ಎಸ್‌ಒಪಿ) ಅನುಸರಿಸದ ಕಾರಣ ಸೇನೆಯು ಉಗ್ರ ದಾಳಿಗೆ ಒಳಗಾಗುತ್ತಿದೆ ಎಂಬ ಅಭಿಪ್ರಾಯವೂ ಇದೆ. ಸೈನ್ಯವು ತನ್ನ ವಾಹನಗಳಿಗೆ ರೋಡ್ ಓಪನಿಂಗ್ ಪಾರ್ಟಿಸ್​(ಆರ್‌ಒಪಿ) ಇರುವುದನ್ನು ಮೊದಲೇ ಖಚಿತಪಡಿಸಿಕೊಂಡಿದ್ದರೆ, ಈ ವಾಹನಗಳನ್ನು ಸ್ಫೋಟಿಸುವಲ್ಲಿ ಉಗ್ರಗಾಮಿಗಳು ಯಶಸ್ವಿಯಾಗುವ ಸಾಧ್ಯತೆಯೇ ಇರಲಿಲ್ಲ ಎಂದು ತಜ್ಞರ ತಿಳಿಸಿದ್ದಾರೆ. ಪ್ರತಿ ಬುಲೆಟ್ ಪ್ರೂಫ್ ಜೀಪ್ ಬೆಲೆ 1.5 ಕೋಟಿ ರೂ. ಆಗಿದೆ. ಇಂತಹ ವಾಹನಗಳನ್ನು ಆರ್​ಡಿಎಕ್ಸ್ ನಂತಹ ಹೆಚ್ಚಿನ ತೀವ್ರತೆಯ ಬಾಂಬ್​ ಬಳಿಸಿ ಮಾತ್ರ ಸ್ಫೋಟಿಸಬಹುದು.

ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ: ಉಗ್ರವಾದ ಉಲ್ಬಣದ ಮಧ್ಯೆ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಕಾಶ್ಮೀರ ಕಣಿವೆಯಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ. ಇದರ ಮೇಲೆ ಉಗ್ರವಾದ ಪರಿಣಾಮ ಬೀರಿಲ್ಲ. ಶ್ರೀನಗರದಲ್ಲಷ್ಟೇ ಅಲ್ಲ, ಕಾಶ್ಮೀರದಾದ್ಯಂತ ​ ರೂಂ ಹುಡುಕುವುದು ಇತ್ತೀಚಿನ ದಿನಗಳಲ್ಲಿ ಕಷ್ಟಕರವಾಗಿದೆ. ಒಂದು ಸಾಮಾನ್ಯ ರೂಂ ಪಡೆಯಲು ಅದೃಷ್ಟವಿದ್ದರೂ ಸಹ, ದರ ಮಾತ್ರ 3 ಸ್ಟಾರ್ ಹೋಟೆಲ್‌ ರೂಂಗೆ ಸರಿಸಮನಾಗಿರುತ್ತದೆ. ಹೆಚ್ಚಿನ ಹೌಸ್ ಬೋಟ್​ಗಳೂ ಭರ್ತಿಯಾಗುತ್ತಿವೆ.

ಆರು ವರ್ಷಗಳ ರಾಜ್ಯಪಾಲರ ಆಳ್ವಿಕೆಯ ನಂತರ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಬಗ್ಗೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ದೆಹಲಿಯಲ್ಲಿರುವಂತೆ ರಾಜ್ಯಪಾಲರು ಪೊಲೀಸ್ ಮತ್ತು ಅಧಿಕಾರಿಗಳ ವರ್ಗಾವಣೆಗಳಂತಹ ಕೆಲಸವನ್ನು ನಿರ್ವಹಿಸುವುದನ್ನು ಮುಂದುವರಿಸುತ್ತಾರೆ ಎಂಬುದು ಬೇರೆ ವಿಷಯ, ಆದರೆ ದೊಡ್ಡ ಬದಲಾವಣೆಯೆಂದರೆ ರಾಜ್ಯ ಸರ್ಕಾರವು ಉಗ್ರಗಾಮಿಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತದೆ.

ಚುನಾವಣೆಗಳು ಹಿಂಸಾಚಾರ ಕಾರಣದಿಂದ ಮುಂದೂಡದೆ ನಡೆದರೆ ಅದು ವಿಭಿನ್ನ ಕಾಶ್ಮೀರವಾಗಿರುತ್ತದೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಫಾರೂಕ್ ಅಬ್ದುಲ್ಲಾ, ಅವರ ಮಗ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರಂತಹ ನಾಯಕರು ಕೆಲ ಸವಾಲುಗಳನ್ನು ಎದುರಿಸಿದ್ದಾರೆ.

ಇತ್ತೀಚೆಗೆ ನಡೆದ ಸಂಸದೀಯ ಚುನಾವಣೆಯಲ್ಲಿ, ಒಮರ್ ಅಬ್ದುಲ್ಲಾ ಜೈಲಿನಲ್ಲಿರುವ ನಾಯಕ ಎಂಜಿನಿಯರ್ ರಶೀದ್ ವಿರುದ್ಧ ಸೋತ್ತಿದ್ದರು. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಧಿಕಾರದ ಸಮತೋಲನವನ್ನು ಬುಡಮೇಲಾದರೆ ರಶೀದ್ ಅವರಂತಹ ನಾಯಕರು ಅಧಿಕಾರಕ್ಕೆ ಬರುವ ಬಲವಾದ ಸಾಧ್ಯತೆ ದಟ್ಟವಾಗಿದೆ.

ಸ್ಥಳೀಯ ಕಾಶ್ಮೀರಿಗಳಿಂದ ಅಥವಾ ನುಸುಳುಕೋರರ ಹಿಂಸಾಚಾರವು ಯಶಸ್ವಿ ಚುನಾವಣೆಗಳೊಂದಿಗೆ ಕೊನೆಗೊಳ್ಳುತ್ತದೆಯೇ? ಎಂಬುದು ಸದ್ಯ ಇರುವ ದೊಡ್ಡ ಪ್ರಶ್ನೆಯಾಗಿದೆ.

ಲೇಖನ: ಸಂಜಯ್ ಕಪೂರ್

ಇದನ್ನೂ ಓದಿ:ಜಮ್ಮುವಿನಲ್ಲಿ ಉಗ್ರರ ಚಟುವಟಿಕೆ ಹೆಚ್ಚಳ: ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸುವುದೊಂದೇ ದಾರಿ - terrorism in Jammu

ABOUT THE AUTHOR

...view details