IRCTC Thailand Package Details:ಥೈಲ್ಯಾಂಡ್ ದೇಶವು ಅತ್ಯುತ್ತಮ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿದೆ. ಇಲ್ಲಿನ ಪ್ರವಾಸಿ ತಾಣಗಳು ವಿಶೇಷವಾಗಿ ಯುವಕರಿಗೆ ಅಚ್ಚಮೆಚ್ಚು. ಇಲ್ಲಿಗೆ ಪ್ರವಾಸಕ್ಕೆ ಹೋದರೆ ನೀವು ಬ್ಯಾಂಕಾಕ್ ಬೀಚ್ ಅನ್ನು ಸಂಪೂರ್ಣವಾಗಿ ಆನಂದಿಸಬಹುದಾಗಿದೆ. ಅಂತಾರಾಷ್ಟ್ರೀಯ ಟೂರ್ ಆಗಿರುವುದರಿಂದ ಬೆಲೆ ಜಾಸ್ತಿ ಇದೆ ಎನ್ನುವ ಅನುಮಾನ ಮೂಡುವುದು ಸಾಮಾನ್ಯ. ನಿಮಗಾಗಿ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಕೈಗೆಟುಕುವ ಬೆಲೆಯಲ್ಲಿ ಥೈಲ್ಯಾಂಡ್ ಸೌಂದರ್ಯ ಆನಂದಿಸಲು ವಿಶೇಷ ಟೂರ್ ಪ್ಯಾಕೇಜ್ ನೀಡುತ್ತಿದೆ. ಪ್ರವಾಸದ ಪ್ಯಾಕೇಜ್‌ನ ಸಂಪೂರ್ಣ ವಿವರಗಳನ್ನು ತಿಳಿಯೋಣ..
'NEW YEAR GET AWAY - THAILAND DELIGHTS EX BENGALURU' ಎಂಬ ಹೆಸರಿನಲ್ಲಿ IRCTC ಈ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ರವಾಸವು ನಾಲ್ಕು ರಾತ್ರಿಗಳು ಮತ್ತು ಐದು ಹಗಲು ದಿನಗಳನ್ನು ಇರುತ್ತದೆ. ಈ ಪ್ರವಾಸವು ಬೆಂಗಳೂರಿನಿಂದ ವಿಮಾನ ಪ್ರಯಾಣದ ಮೂಲಕ ಪ್ರಾರಂಭವಾಗುತ್ತದೆ. ಥಾಯ್ಲೆಂಡ್‌ನ ಪ್ರಸಿದ್ಧ ಪ್ರವಾಸಿ ಕೇಂದ್ರಗಳಾದ ಪಟ್ಟಾಯ ಮತ್ತು ಬ್ಯಾಂಕಾಕ್‌ನಲ್ಲಿರುವ ಅನೇಕ ಸ್ಥಳಗಳನ್ನು ವೀಕ್ಷಿಸಬಹುದು. ಪ್ರಯಾಣದ ವಿವರಗಳು ಇಲ್ಲಿದೆ ನೋಡಿ...
1ನೇ ದಿನ:ಮೊದಲ ದಿನ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 11ಕ್ಕೆ ವಿಮಾನ ಪ್ರಯಾಣ ಪ್ರಾರಂಭವಾಗಲಿದೆ. ಬೆಳಿಗ್ಗೆ 4ಕ್ಕೆ ಬ್ಯಾಂಕಾಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಡಾನ್ ಮುವಾಂಗ್) ಆಗಮಿಸಲಾಗುವುದು. ವಿಮಾನ ನಿಲ್ದಾಣದಲ್ಲಿ ಫ್ರೆಶ್ ಅಪ್ ಆಗಬೇಕು. ಮತ್ತು ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಪ್ರತಿನಿಧಿಯನ್ನು ಭೇಟಿ ಮಾಡಬೇಕಾಗುತ್ತದೆ. ಉಪಹಾರದ ನಂತರ, ಪಟ್ಟಾಯಕ್ಕೆ ಹೊರಡಲಾಗುವುದು. ಪಟ್ಟಾಯ ತಲುಪಿದಾಗ ಟೈಗರ್ ಪಾರ್ಕ್‌ಗೆ ಭೇಟಿ ನೀಡಲಾಗುವುದು. ನಂತರ, ಮೊದಲೇ ಬುಕ್ ಮಾಡಿದ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಚೆಕ್-ಇನ್ ಮಾಡಬೇಕು. ಹೋಟೆಲ್‌ನಲ್ಲಿ ಊಟದ ನಂತರ ವಿಶ್ರಾಂತಿ ಪಡೆಯಿರಿ. ಸಂಜೆ ವೇಳೆ ಅಲ್ಕಾಜರ್ ಪ್ರದರ್ಶನ ವೀಕ್ಷಿಸಿ ಆನಂದಿಸಿ. ಪಟ್ಟಾಯದಲ್ಲಿನ ಹೋಟೆಲ್‌ನಲ್ಲಿ ಭೋಜನ ಮತ್ತು ರಾತ್ರಿ ಉಳಿದುಕೊಳ್ಳಬೇಕಾಗುತ್ತದೆ.
2ನೇ ದಿನ:ಎರಡನೇ ದಿನ ಹೋಟೆಲ್‌ನಲ್ಲಿ ಉಪಹಾರದ ಬಳಿಕ ಕೋರಲ್ ಐಲ್ಯಾಂಡ್ಗೆ ತೆರಳಲಾಗುವುದು. ಮಧ್ಯಾಹ್ನ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಊಟ ನಂತರ, ವಿರಾಮ ಪಡೆಯಬಹುದು. ನಂತರ 'ಇ ಎಕ್ಸ್‌ಕ್ಲೂಸಿವ್ ನ್ಯೂ ಇಯರ್ ಈವ್ ಗಾಲಾ ಡಿನ್ನರ್ ವಿತ್ ಡಿಜೆ' ಇರುತ್ತದೆ ಇದನ್ನು ಆನಂದಿಸಿರಿ. ಮತ್ತು ಪಟ್ಟಾಯದಲ್ಲಿರುವ ಹೋಟೆಲ್‌ನಲ್ಲಿ ರಾತ್ರಿಯ ವಾಸ್ತವ್ಯ.
3ನೇ ದಿನ:ಮೂರನೇ ದಿನ ಹೋಟೆಲ್‌ನಲ್ಲಿ ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್ಔಟ್ ಮಾಡಬೇಕಾಗುತ್ತದೆ. ಬ್ಯಾಂಕಾಕ್ ನಗರದ ಅನೇಕ ಭಾಗಗಳಿಗೆ ಭೇಟಿ ಕೊಡಲಾಗುವುದು. ಬ್ಯಾಂಕಾಕ್‌ನಲ್ಲಿರುವ ಗೋಲ್ಡನ್ ಬುದ್ಧ ಮತ್ತು ಮಾರ್ಬಲ್ ಬುದ್ಧ ಇರುವ ಸ್ಥಳಕ್ಕೆ ಭೇಟಿ ಕೊಡಲಾಗುವುದು. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ ನಂತರ, ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ ಛಾಫರಾಯ ರಿವರ್ ಕ್ರೂಸ್ನಲ್ಲಿ ಆನಂದಿಸಿ.ಅಲ್ಲಿಯೇ ರಾತ್ರಿ ಊಟ ಮಾಡಿ. ಬಳಿಕ ಬ್ಯಾಂಕಾಕ್‌ನ ಹೋಟೆಲ್‌ನಲ್ಲಿ ರಾತ್ರಿಯ ತಂಗಬೇಕಾಗುತ್ತದೆ.
4ನೇ ದಿನ:ನಾಲ್ಕನೇ ದಿನಹೋಟೆಲ್ನಲ್ಲಿ ಉಪಹಾರದ ನಂತರ, ಸಫಾರಿ ವರ್ಲ್ಡ್ ಮತ್ತು ಮೆರೈನ್ ಪಾರ್ಕ್‌ನಲ್ಲಿ ಇಡೀ ದಿನ ಕಳೆಯಲಾಗುವುದು. ಸಫಾರಿ ವರ್ಲ್ಡ್ನಲ್ಲಿ ಮಧ್ಯಾಹ್ನ ಊಟ ವ್ಯವಸ್ಥೆ ಮಾಡಲಾಗುವುದು. ಮತ್ತೆ ಹೋಟೆಲ್ಗೆ ಹಿಂತಿರುಗಿ, ಇಂಡಿಯನ್ ರೆಸ್ಟೊರೆಂಟ್‌ನಲ್ಲಿ ಭೋಜನ. ಬ್ಯಾಂಕಾಕ್‌ನ ಹೋಟೆಲ್‌ನಲ್ಲಿ ರಾತ್ರಿಯ ಉಳಿಯಬೇಕಾಗುತ್ತದೆ.