ರಾತ್ರಿಯ ಅನ್ನ ಬೆಳಗ್ಗೆ ತಿನ್ನಲಾಗದಿದ್ದರೆ ಪುದೀನಾ ಪಲಾವ್ ಟ್ರೈ ಮಾಡಿ: ಎಲ್ಲರಿಗೂ ಇಷ್ಟವಾಗುತ್ತೆ ನೋಡಿ! - HOW TO MAKE PUDINA PULAO
ರಾತ್ರಿ ಮಾಡಿದ ಅನ್ನ ಪ್ರತಿ ಮನೆಯಲ್ಲೂ ಉಳಿಯುತ್ತದೆ. ಅದೇ ಅನ್ನವನ್ನು ಬೆಳಗ್ಗೆ ತಿನ್ನಲು ಎಲ್ಲರೂ ಮುಖ ಗಂಟಿಕ್ಕುತ್ತಾರೆ. ತಂಗಳನ್ನದಿಂದ ಅಥವಾ ಫ್ರೆಶ್ ಅನ್ನದಿಂದ ರುಚಿಕಟ್ಟಾದ ಪುದೀನಾ ಪಲಾವ್ ಹೇಗೆಂದು ನಿಮಗೆ ಗೊತ್ತೇ?
Pudina Pulao Recipe:ಪುದೀನಾವನ್ನು ಹಲವು ವಿಧಗಳ ಖಾದ್ಯಗಳನ್ನು ತಯಾರಿಸಲು ಬಳಸುತ್ತಾರೆ. ತರಕಾರಿಗಳಿಂದ ಸಿದ್ಧಪಡಿಸುವ ಪದಾರ್ಥಗಳಿಂದ ಹಿಡಿದು ಮಾಂಸಾಹಾರಿ ಪದಾರ್ಥಗಳಾದ ಮಟನ್ ಮತ್ತು ಚಿಕನ್‌ನಲ್ಲಿ ಕರಿಗಳಲ್ಲಿ ಪುದೀನಾ ಬಳಕೆ ಮಾಡುತ್ತಾರೆ. ಪುದೀನಾ ಘಮಲು ಖಾದ್ಯಕ್ಕೆ ಹೊಸ ಟೇಸ್ಟ್ ಅನ್ನು ನೀಡುತ್ತದೆ. ಹಾಗಾದ್ರೆ ಈ ಬಾರಿ ಪುದೀನಾ ಪುಲಾವ್ ಅನ್ನು ಟ್ರೈ ಮಾಡಿ ನೋಡಿ.
ರಾತ್ರಿ ಉಳಿದ ಅನ್ನದೊಂದಿಗೆ ಅಥವಾ ಫ್ರೆಶ್ ಆಗಿ ಮಾಡಿದ ಅನ್ನದಿಂದಲೂ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಪುದೀನಾ ಪಲಾವ್ ತಯಾರಿಸಬಹುದು. ಈ ಪುದೀನಾ ಪಲಾವ್ ಜೊತೆಗೆ ತಣ್ಣನೆಯ ರೈತಾ ತಿಂದರೆ ಅದ್ಭುತ ಟೇಸ್ಟ್ ಬರುತ್ತದೆ. ಇದಕ್ಕೆ ಬೇಕಾದ ಪದಾರ್ಥಗಳು ಯಾವುವು? ಈಗ ಅದನ್ನು ಹೇಗೆ ಮಾಡಬೇಕೆಂದು ತಿಳಿಯೋಣ.
ಪುದೀನಾ ಪಲಾವ್ಗೆ ಬೇಕಾಗುವ ಪದಾರ್ಥಗಳೇನು?
ಎರಡು ಟೀಸ್ಪೂನ್ ಎಣ್ಣೆ
ಒಂದು ಟೀಸ್ಪೂನ್ ತುಪ್ಪ
ಒಂದು ಬಿರಿಯಾನಿ ಎಲೆ
ಒಂದು ಇಂಚು ದಾಲ್ಚಿನ್ನಿ
5 ಲವಂಗ
4 ಏಲಕ್ಕಿ
ಶಾಜೀರಿಗೆ ಒಂದು ಟೀಸ್ಪೂನ್
ದೊಡ್ಡ ಈರುಳ್ಳಿ ಕತ್ತರಿಸಿ
5 ಹಸಿ ಮೆಣಸಿನಕಾಯಿ
1 ಟೀಸ್ಪೂನ್ ಗರಂ ಮಸಾಲಾ
1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
3 ಟೀಸ್ಪೂನ್ ಪುದೀನಾ ಪೇಸ್ಟ್
ಪುದೀನಾ - ಸಣ್ಣ ಕಟ್ಟು
ಒಂದು ಟೀಸ್ಪೂನ್ ನಿಂಬೆ ರಸ (ಐಚ್ಛಿಕ)
110 ಗ್ರಾಂ ಅಕ್ಕಿ
ರುಚಿಗೆ ಉಪ್ಪು
ತಯಾರಿಸುವ ವಿಧಾನ:
ಮೊದಲು ಒಲೆ ಆನ್ ಮಾಡಿ, ಅದರ ಮೇಲೆ ಪಾತ್ರೆ ಇಡಿ. ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿ ಮಾಡಿ.
ಅದರ ನಂತರ ಬಿರಿಯಾನಿ ಎಲೆ, ದಾಲ್ಚಿನ್ನಿ ಕಡ್ಡಿ, ಲವಂಗ, ಏಲಕ್ಕಿ ಮತ್ತು ಶಾಜೀರಿಗೆ ಸೇರಿಸಿ ಸ್ವಲ್ಪ ಫ್ರೈ ಮಾಡಿ.
ಇದರಲ್ಲಿ ಈರುಳ್ಳಿ ಚೂರುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.. ನಂತರ ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ನಂತರ ಉಪ್ಪು, ಗರಂ ಮಸಾಲಾ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಹಸಿ ವಾಸನೆ ಹೋಗುವವರೆಗೆ ಸುಮಾರು ಒಂದು ನಿಮಿಷ ಫ್ರೈ ಮಾಡಿ.
ಹಿಂದೆ ರುಬ್ಬಿದ ಇಟ್ಟಿದ್ದ ಪುದೀನಾವನ್ನು ಸೇರಿಸಿ ಮತ್ತು ಅದನ್ನು ಮಿಶ್ರಣ ಮಾಡಿ.
ಈಗ ಹಸಿ ವಾಸನೆ ಹೋಗುವವರೆಗೆ ಮತ್ತು ಎಣ್ಣೆ ಮೇಲ ಕಾಣಿಸುವವರೆಗೆ ಹುರಿಯಿರಿ. ಅದರ ನಂತರ ಪುದೀನಾ ಎಲೆಗಳನ್ನು ಸೇರಿಸಿ ಮತ್ತು ಒಂದು ನಿಮಿಷ ಹುರಿಯಿರಿ.
ಇದಕ್ಕೆ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. (ಸ್ವಲ್ಪ ಹುಳಿ ಬೇಕಿದ್ದರೆ ನಿಂಬೆರಸ ಹಾಕಬಹುದು. ಆದರೆ, ಹುಣಸೆಹಣ್ಣಿನ ರಸ ಹಾಕಬಹುದು)
ಅಂತಿಮವಾಗಿ ಕೆಲವು ತಾಜಾ ಪುದೀನಾ ಎಲೆಗಳನ್ನು ಸೇರಿಸಿ. ಮತ್ತು ಸಾಧ್ಯವಾದರೆ ಹುರಿದ ಈರುಳ್ಳಿಯನ್ನು ಟೇಸ್ಟಿಗಾಗಿ ಈ ಪಲಾವ್ನಲ್ಲಿ ಸೇರಿಸಿಬಹುದು.
ಇದನ್ನೊಮ್ಮೆ ಮನೆಯಲ್ಲಿಯೇ ಟ್ರೈ ಮಾಡಿ ನೋಡಿ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪುದೀನಾ ಪಲಾವ್ ಇಷ್ಟಪಡುತ್ತಾರೆ.