ಕರ್ನಾಟಕ

karnataka

ETV Bharat / lifestyle

ಮೈನಡುಗಿಸುವ ಚಳಿಯಲ್ಲಿ ಸಖತ್​ ಮಜಾ ನೀಡುವ 'ಮಸಾಲಾ ಟೀ' ಮಾಡೋದು ಹೇಗೆ? - HOW TO MAKE MASALA TEA

How to Make Masala Tea: ಮೈನಡುಗಿಸುವ ಚಳಿಯಲ್ಲಿ 'ಮಸಾಲ ಟೀ' ಸೇವಿಸಿದರೆ ಸಖತ್​ ಮಜಾ ಬರುತ್ತದೆ. ಹಾಗಾದ್ರೆ, ಸೂಪರ್ ರುಚಿಯ ಮಸಾಲಾ ಟೀ ಹೇಗೆ ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ.

MASALA TEA  BEST HOMEMADE MASALA TEA  PERFECT MASALA CHAI RECIPE  WINTER SPECIAL MASALA TEA
ಮಸಾಲಾ ಟೀ (pexels)

By ETV Bharat Lifestyle Team

Published : Jan 21, 2025, 5:17 PM IST

Updated : Jan 21, 2025, 5:29 PM IST

How to Make Masala Tea:ನಮ್ಮಲ್ಲಿ ಅನೇಕರಿಗೆ ಬೆಳಗ್ಗೆ ಒಂದು ಕಪ್ ಚಹಾದ ಸೇವಿಸದ ನಂತರವೇ ದಿನವು ಪ್ರಾರಂಭವಾಗುತ್ತದೆ. ಇತ್ತೀಚೆಗೆ ಕೆಲವರು ತಮ್ಮ ಆರೋಗ್ಯವನ್ನು ಸುಧಾರಿಸಲು ಹಾಗೂ ತೂಕ ನಿಯಂತ್ರಣದಲ್ಲಿಡಲು ಗ್ರೀನ್​ ಟೀ, ಶುಂಠಿ ಚಹಾ, ಪುದೀನ ಟೀ ಸೇವಿಸುವುದು ತಮ್ಮ ದೈನಂದಿನ ಅಭ್ಯಾಸವಾಗಿ ಮಾಡಿಕೊಂಡಿದ್ದಾರೆ.

ಇನ್ನು ಚಳಿಗಾಲದಲ್ಲಿ ಬೆಳಗ್ಗೆ ಈ 'ಮಸಾಲಾ ಟೀ' ಪ್ರಯತ್ನಿಸಿ. ಈ ಚಹಾ ಸೇವಿಸಿದರೆ ಮನಸ್ಸಿ ಸಮಾಧಾನ ಲಭಿಸುತ್ತದೆ. ಮಸಾಲಾ ಚಹಾ ಆರೋಗ್ಯಕ್ಕೂ ಒಳ್ಳೆಯದು. ಈ ಮಸಾಲೆಯುಕ್ತ ಚಹಾ ತಯಾರಿಸಿ ಕುಡಿಯುವಾಗ ನಿಮಗೆ ದೊರೆಯುವ ಅನುಭವ ಅದ್ಭುತ. ಹಾಗಾದರೆ, ಮಸಾಲಾ ಟೀ ಮಾಡುವುದು ಹೇಗೆ ಹಾಗೂ ಇದಕ್ಕೆ ಬೇಕಾಗುವ ಪದಾರ್ಥಗಳೇನು ಎಂಬುದನ್ನು ತಿಳಿಯೋಣ.

ಮಸಾಲಾ ಟೀಗೆ ಬೇಕಾಗಿರುವ ಪದಾರ್ಥಗಳೇನು?:

  • ಏಲಕ್ಕಿ - 6
  • ಲವಂಗ - 5
  • ದಾಲ್ಚಿನ್ನಿ - ಒಂದು ಚಿಕ್ಕ ಪೀಸ್​
  • ಶುಂಠಿ - ಎರಡು ಇಂಚಿನ ಪೀಸ್​
  • ಸಕ್ಕರೆ - ನಾಲ್ಕು ಟೀಸ್ಪೂನ್​
  • ಚಹಾ ಪುಡಿ - ನಾಲ್ಕು ಟೀಸ್ಪೂನ್​
  • ಕಾಯಿಸಿದ ಹಾಲು - 3 ಗ್ಲಾಸ್

ಮಸಾಲಾ ಟೀ ಸಿದ್ಧಪಡಿಸುವ ವಿಧಾನ:

  • ಮೊದಲು ಏಲಕ್ಕಿ, ಲವಂಗ ಹಾಗೂ ದಾಲ್ಚಿನ್ನಿ ಪುಡಿಮಾಡಿ ಇಟ್ಟುಕೊಳ್ಳಿ. ಬಳಿಕ ಪುಡಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಪಕ್ಕದಲ್ಲಿ ಇಡಿ. ಜೊತೆಗೆ ಒಂದು ಪೀಸ್ ಶುಂಠಿಯನ್ನು ಸಣ್ಣಗೆ ಕಟ್​ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ.
  • ಇದೀಗ ಒಲೆಯ ಮೇಲೆ ಒಂದು ಟೀ ಮಾಡುವ ಬಳಸುವ ಪಾತ್ರೆ ಇಡಿ. ಮೂರು ಗ್ಲಾಸ್ ನೀರು ಸುರಿಯಿರಿ ಹಾಗೂ ಮಧ್ಯಮ ಉರಿಯಲ್ಲಿ ಕುದಿಸಬೇಕಾಗುತ್ತದೆ.
  • ಅರ್ಧ ಗ್ಲಾಸ್ ನೀರು ಕಡಿಮೆಯಾಗುವವರೆಗೆ ಚೆನ್ನಾಗಿ ಕುದಿಸಿದ ನಂತರ, ಈ ಮೊದಲೇ ತಯಾರಿಸಿದ ಮಸಾಲೆ ಪುಡಿ, ಸಣ್ಣಗೆ ಹೆಚ್ಚಿದ ಶುಂಠಿ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ಮತ್ತೆ ಅರ್ಧ ಗ್ಲಾಸ್ ನೀರು ಕಡಿಮೆಯಾಗುವವರೆಗೆ ಚೆನ್ನಾಗಿ ಕುದಿಸಬೇಕಾಗುತ್ತದೆ.
  • ಬಳಿಕ ಸಕ್ಕರೆ, ಚಹಾ ಪುಡಿ ಸೇರಿಸಿ ಸ್ವಲ್ಪ ಹೊತ್ತು ಚೆನ್ನಾಗಿ ಕುದಿಯಲು ಬಿಡಬೇಕಾಗುತ್ತದೆ. ಪದಾರ್ಥಗಳನ್ನು ಚೆನ್ನಾಗಿ ಕುದಿಸಿದಷ್ಟೂ ಚಹಾ ರುಚಿಕರವಾಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.
  • ಎಲ್ಲ ಮಿಶ್ರಣ ಕುದಿಯಲು ಪ್ರಾರಂಭಿಸಿದ ಬಳಿಕ, ಕುದಿಸಿದ ಹಾಲನ್ನು ಅದರಲ್ಲಿ ಸುರಿದುಕೊಳ್ಳಿ. ಇಲ್ಲಿ ಹಸಿ ಹಾಲನ್ನು ಬಳಸಬಾರದು. ಹಾಗೆ ಸುರಿದರೆ ಅವು ಒಡೆದು ಹೋಗುತ್ತವೆ.
  • ಪ್ರತ್ಯೇಕವಾಗಿ ಹಾಲನ್ನು ಕುದಿಸಬೇಕು. ಈ ಮಸಾಲಾ ಮಿಶ್ರಣವು ಕುದಿಸುತ್ತಿರುವಾಗ ಅದರೊಳಗೆ ಕುದಿಸಿದ ಹಾಲನ್ನು ಸೇರಿಸಿ ಉರಿ ಕಡಿಮೆ ಮಾಡಿ. ಎರಡು ನಿಮಿಷಗಳ ಬಳಿಕ ರುಚಿಕರವಾದ ಮಸಾಲಾ ಚಾಯ್ ಸಿದ್ಧ!
  • ಬಳಿಕ ಅದನ್ನು ಸೋಸಿ, ಬೆಳಗ್ಗೆ ಎದ್ದ ತಕ್ಷಣ ಈ ಟೀಯನ್ನು ಬಿಸಿಯಾಗಿ ಕುಡಿದರೆ ಸಖತ್​ ಮಜಾ ಬರುತ್ತದೆ.
  • ಇಷ್ಟವಾದರೆ ಒಮ್ಮೆ ಪ್ರಯತ್ನಿಸಿ ನೋಡಿ.

ಇವುಗಳನ್ನೂ ಓದಿ:

Last Updated : Jan 21, 2025, 5:29 PM IST

ABOUT THE AUTHOR

...view details