ಮಕ್ಕಳಿಗೆ ಪಾಲಕ್ ಹಿಡಿಸದಿದ್ದರೆ ಇಲ್ಲಿದೆ ಅತ್ಯುತ್ತಮ ಆಯ್ಕೆ: ಅದುವೇ 'ಪಾಲಕ್ ಪನ್ನಿರ್ ಪಲಾವ್' - PALAK PANEER PULAO IN KANNADA
How to Make Palak paneer Pulao Rice: ಈ ಬಾರಿ ನಾವು ನಿಮಗಾಗಿ ಪಾಲಕ್ ಪನ್ನಿರ್ ಪಲಾವ್ ರೆಸಿಪಿಯನ್ನು ತಂದಿದ್ದೇವೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಪಾಲಕ್ ಪನ್ನಿರ್ ಪಲಾವ್ ತುಂಬಾ ಇಷ್ಟವಾಗುತ್ತದೆ.
How to Make Palak paneer Pulao Rice:ಪಾಲಕ್ ಆರೋಗ್ಯಕರ ಸೊಪ್ಪುಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ನಿಯಮಿತವಾಗಿ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ದೃಷ್ಟಿ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿದ್ದರೆ ಅವುಗಳಿಗೆ ಪರಿಹಾರ ಲಭಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಬಹುತೇಕರ ಮನೆಯಲ್ಲೂ ಪಾಲಕ್ ಸೊಪ್ಪು ಪಲ್ಯ, ಪಾಲಕ್ ಕರಿ, ಸೇರಿದಂತೆ ವಿವಿಧ ಅಡುಗೆಗಳನ್ನು ಸಿದ್ಧಪಡಿಸುತ್ತಾರೆ. ಆದರೆ, ಮಕ್ಕಳು ಈ ಅಡುಗೆಗಳನ್ನು ತಿನ್ನಲು ಅಷ್ಟಾಗಿ ಇಷ್ಟಪಡುವುದಿಲ್ಲ.
ಈ ಬಾರಿ ತಾಜಾ ಪಾಲಕ್ ಸೊಪ್ಪಿನಿಂದ 'ಪಾಲಕ್ ಪನೀರ್ ಪುಲಾವ್' ಸಖತ್ ಟೇಸ್ಟಿಯಾಗಿ ಸಿದ್ಧಪಡಿಸಬಹುದು. ಅತಿ ಕಡಿಮೆ ಸಮಯದಲ್ಲಿ ಮಕ್ಕಳ ಲಂಚ್ ಬಾಕ್ಸ್ಗೆ ಈ ರೆಸಿಪಿಯನ್ನು ತಯಾರಿಸಿಬಹುದು. ಟೇಸ್ಟಿ ಹಾಗೂ ಆರೋಗ್ಯಕರ ಈ ರೆಸಿಪಿಗೆ ಬೇಕಾದ ಪದಾರ್ಥಗಳೇನು? ಸಿದ್ಧಪಡಿಸುವ ವಿಧಾನ ಹೇಗೆ ಎಂಬುದನ್ನು ಈಗ ಕಲಿಯೋಣ.
ಪಾಲಕ್ ಪನ್ನಿರ್ ಪಲಾವ್ಗೆ ಬೇಕಾಗುವ ಪದಾರ್ಥಗಳು:
ಪಾಲಕ್- 3 ಕಟ್ಗಳು (ಸುಮಾರು 200 ಗ್ರಾಂ)
ಬೇಯಿಸಿದ ಬಾಸ್ಮತಿ ರೈಸ್ - 2 ಕಪ್
ಪನೀರ್ - 200 ಗ್ರಾಂ
ಈರುಳ್ಳಿ - 1
ಹಸಿಮೆಣಸಿನಕಾಯಿ - 2
ಜೀರಿಗೆ - 1 ಟೀಸ್ಪೂನ್
ಕೊತ್ತಂಬರಿ ಪುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ತುಪ್ಪ - 2 ಟೀಸ್ಪೂನ್
ಎಣ್ಣೆ - 2 ಟೀಸ್ಪೂನ್
ಸಕ್ಕರೆ - 1 ಟೀಸ್ಪೂನ್
ಕಾಳುಮೆಣಸು - 2
ಬೆಳ್ಳುಳ್ಳಿ ಎಸಳು - 15
ಶುಂಠಿ ಚೂರುಗಳು - 2 ಚಿಕ್ಕದು
ಕಸೂರಿ ಮೇಥಿ - ಒಂದು ಟೀಸ್ಪೂನ್
ಮೆಣಸಿನಕಾಯಿ - ಅರ್ಧ ಟೀಸ್ಪೂನ್
ಕೊತ್ತಂಬರಿ ಪುಡಿ - ಒಂದು ಟೀಸ್ಪೂನ್
ನಿಂಬೆ ರಸ - ಒಂದು ಟೀಸ್ಪೂನ್
ಪಾಲಕ್ ಪನ್ನಿರ್ ಪಲಾವ್ ತಯಾರಿಸುವ ವಿಧಾನ:
ಇದಕ್ಕಾಗಿ ಅಡುಗೆಗೆ ಅಗತ್ಯವಿರುವ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ತೆಳುವಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು.
ಜೊತೆಗೆ ಶುಂಠಿ ಹಾಗೂ ಬೆಳ್ಳುಳ್ಳಿ ಎಸಳುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ಪಾಲಕ್ನ್ನು ಸ್ವಚ್ಛವಾಗಿ ತೊಳೆದು ಪಕ್ಕಕ್ಕೆ ಇರಿಸಿ. ಪನೀರ್ ಅನ್ನು ಸ್ವಚ್ಛಗೊಳಿಸಿ ಹಾಗೂ ಪೀಸ್ ಮಾಡಿ ಇಟ್ಟುಕೊಳ್ಳಿ.
ಈಗ ಒಲೆಯ ಮೇಲೆ ಪಾತ್ರೆ ಇಟ್ಟು ನೀರು ಸುರಿದುಕೊಳ್ಳಿ. ಅದರಲ್ಲಿ ಸ್ವಲ್ಪ ಸಕ್ಕರೆ ಹಾಗೂ ಉಪ್ಪು ಸೇರಿಸಿ. ನೀರು ಕುದಿಯುವಾಗ ಪಾಲಕ್ ಸೊಪ್ಪನ್ನು ಸೇರಿಸಿ. ಪಾಲಕ್ ಅನ್ನು ಐದು ನಿಮಿಷಗಳ ಕಾಲ ಬೇಯಿಸಿದ ಬಳಿಕ, ಅದನ್ನು ಸಾಣಿಗೆಯಿಂದ ಸೋಸಿಕೊಳ್ಳಿ.
ಪಾಲಕ್ ಸಂಪೂರ್ಣವಾಗಿ ತಣ್ಣಗಾದ ಬಳಿಕ, ಅದನ್ನು ಮಿಶ್ರಣದ ಬಟ್ಟಲಿಗೆ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ.
ಈಗ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಹಾಗೂ ಎಣ್ಣೆಯನ್ನು ಇಡಿ. ಎಣ್ಣೆ ಬಿಸಿಯಾದ ಬಳಿಕ ಜೀರಿಗೆ ಹಾಕಿ ಹುರಿಯಿರಿ. ನಂತರ ಕರಿಮೆಣಸು ಹಾಕಿ ಹುರಿದುಕೊಳ್ಳಬೇಕಾಗುತ್ತದೆ.
ಇದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ ಹಾಗೂ ಬೆಳ್ಳುಳ್ಳಿ ಪೀಸ್ಗಳನ್ನು ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿಕೊಳ್ಳಿ.
ಬೆಳ್ಳುಳ್ಳಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿದ ನಂತರ, ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಪೀಸ್ಗಳನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
ಎರಡು ನಿಮಿಷಗಳವರೆಗೆ ಹುರಿದ ನಂತರ, ಪನೀರ್ ಪೀಸ್ಗಳನ್ನು ಹಾಕಿ ಫ್ರೈ ಮಾಡಿ. ಹಾಗೆಯೇ ಕೊತ್ತಂಬರಿ ಸೊಪ್ಪು ಹಾಗೂ ಕಸೂರಿ ಮೇಥಿಯನ್ನು ಕೈಯಿಂದ ಪುಡಿ ಮಾಡಿ.
ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ನಂತರ ಪನೀರ್ ಅನ್ನು 5 ನಿಮಿಷಗಳವರೆಗೆ ಕುದಿಸಿ.
ನಂತರ ನುಣ್ಣಗೆ ರುಬ್ಬಿದ ಪಾಲಕ್ ಪೇಸ್ಟ್ ಸೇರಿಸಿ ಈಗ ಅದರೊಳಗೆ ಮಿಶ್ರಣ ಮಾಡಿ.
ಇದನ್ನು 5 ನಿಮಿಷ ಬೇಯಿಸಿದ ಬಳಿಕ ಪಾಲಕ್ನ ಹಸಿ ವಾಸನೆ ಹೋಗುತ್ತದೆ. ಬಳಿಕ ಮೆಣಸಿನಕಾಯಿ ಹಾಗೂ ಕೊತ್ತಂಬರಿ ಪುಡಿ ಹಾಕಿ ಮಿಶ್ರಣ ಮಾಡಿ.
ನಂತರ ಬೇಯಿಸಿದ ಬಾಸ್ಮತಿ ರೈಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು
ಈ ರೈಸ್ನ ಮೇಲೆ ಕೊತ್ತಂಬರಿ ಸೊಪ್ಪು, ನಿಂಬೆ ರಸ, ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ಕಸೂರಿ ಮೇಥಿಯನ್ನು ಕೈಯಿಂದ ಪುಡಿಮಾಡಿ ಹಾಕಿ.
ಒಂದು ನಿಮಿಷದ ಬಳಿಕ ಒಲೆ ಆಫ್ ಮಾಡಿ ಹಾಗೂ ಪಾತ್ರೆಯ ಮುಚ್ಚಳವನ್ನು ಮುಚ್ಚಿ. ಈ ಪುಲಾವ್ ರೈಸ್ನ್ನು 15 ನಿಮಿಷಗಳ ಹಾಗೆಬಿಡಬೇಕಾಗುತ್ತದೆ. ಹೀಗೆ ಮಾಡಿದರೆ ಅನ್ನ ತುಂಬಾ ರುಚಿಯಾಗಿರುತ್ತದೆ.
ಈಗ ಪ್ಲೇಟ್ಗೆ ರೈಸ್ನ್ನು ಬಡಿಸಿಕೊಳ್ಳಿ. ಟೇಸ್ಟಿ ಮತ್ತು ಆರೋಗ್ಯಕರ ಪಾಲಕ್ ಪನೀರ್ ಪುಲಾವ್ ನಿಮ್ಮ ಮುಂದೆ ಸಿದ್ಧ!
ನಿಮಗೆ ಇಷ್ಟವಾದರೆ ಒಮ್ಮೆ ಈ ರೆಸಿಪಿಯನ್ನು ಟ್ರೈ ಮಾಡಿ. ಮನೆ ಮಂದಿಗೆಲ್ಲ ಇಷ್ಟವಾಗುತ್ತದೆ.