Guntur Special Malpuri Recipe:ಪ್ರತಿಯೊಬ್ಬರೂ ಸಿಹಿತಿಂಡಿಗಳನ್ನು ಇಷ್ಟಪಡುತ್ತಾರೆ. ಸ್ವೀಟ್ ಬಾಕ್ಸ್ ಮುಂದೆ ಇಟ್ಟರೆ ಸಾಕು. ಒಂದರ ಬದಲಿಗೆ ಎರಡೆರಡು ಸಿಹಿ ತಿಂದು ಸಂತೃಪ್ತರಾಗುತ್ತಾರೆ. ಹಬ್ಬ ಹರಿದಿನಗಳಲ್ಲಿ ಮತ್ತು ಶುಭ ಸಮಾರಂಭಗಳಲ್ಲಿ ಮಹಿಳೆಯರು ಯಾವಾಗಲೂ ಮನೆಯಲ್ಲಿ ಸಿಹಿತಿಂಡಿ ತಯಾರಿಸುತ್ತಾರೆ. ಆದರೆ, ಇದೀಗ ಬಹಳ ಫೇಮಸ್ ಆಗಿರುವ 'ಸ್ಪೆಷಲ್ ಕೋವಾ ಮಾಲ್ಪುರಿ' ಮಾಡುವುದು ಹೇಗೆ ಎಂದು ನೋಡೋಣ. ಅನೇಕ ಜನರು ಇದನ್ನು ಮಾಡಲು ಕಷ್ಟಪಡುತ್ತಾರೆ.
ಕೆಲವು ಸಲಹೆಗಳನ್ನು ನೀವು ಅನುಸರಿಸಿದರೆ, ಕೋವಾ ಮಾಲ್ಪುರಿ ತುಂಬಾ ರುಚಿಕರವಾಗಿ ಸಿದ್ಧಪಡಿಸಬಹುದು. ಈ ಸಿಹಿ ಕೋವಾ ಮಾಲ್ಪುರಿಗಳನ್ನು ಮನೆಯಲ್ಲಿ ಎಲ್ಲರೂ ಇಷ್ಟಪಡುತ್ತಾರೆ. ಇದೀಗ ತಡಮಾಡದೇ ಗುಂಟೂರು ಸ್ಪೆಷಲ್ ಕೋವಾ ಮಾಲ್ಪುರಿ ಮಾಡುವುದು ಹೇಗೆ ಎಂದು ನೋಡೋಣ.
ಸ್ಪೆಷಲ್ ಕೋವಾ ಮಾಲ್ಪುರಿಗೆ ಬೇಕಾದ ಪದಾರ್ಥಗಳು:
ಪೂರಿಗಳಿಗೆ:
- ಗೋಧಿ ಹಿಟ್ಟು - 2 ಕಪ್
- ಮೈದಾ ಹಿಟ್ಟು - ಅರ್ಧ ಕಪ್
- ನೀರು - ಎರಡೂವರೆ ಕಪ್