ETV Bharat / bharat

ಮಹಾ ಕುಂಭಮೇಳ 2025: ಮೊದಲ ಬಾರಿಗೆ ಶ್ರೀ ಪಂಚಾಯಿತಿ ಅಖಾಡದಿಂದ ಜಗದ್ಗುರು ನೇಮಕ - MAHA KUMBH MELA 2025

ಶ್ರೀ ಪಂಚಾಯಿತಿ ಅಖಾಡ ಇದೇ ಮೊದಲ ಬಾರಿಗೆ ಬೀಜ ಮಂತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ನಿರಂಜನಿ ಬ್ರಹ್ಮರ್ಷಿ ಕುಮಾರ ಸ್ವಾಮಿಗಳಿಗೆ ಜಗದ್ಗುರು ಪಟ್ಟ ನೀಡಿದೆ.

Shri Panchayati Akhara Niranjani first Jagadguru Mahamandaleshwar Brahmarshi Kumar
pಟ್ಟ ನೀಡಿದ ಬಳಿಕ ಪುಷ್ಪಾರ್ಚನೆ (ಈಟಿವಿ ಭಾರತ್​)
author img

By ETV Bharat Karnataka Team

Published : Feb 1, 2025, 11:40 AM IST

ಪ್ರಯಾಗ್​ರಾಜ್​: ನಾಗ ಸನ್ಯಾಸಿಗಳು ಮತ್ತು ಮಹಾಮಂಡಳೇಶ್ವರು ಹೊಂದಿರುವ ಹಲವು ಅಖಾಡಗಳು ಮಹಾ ಕುಂಭಮೇಳದಲ್ಲಿ ಕಾಣಬಹುದಾಗಿದೆ. ಶ್ರೀ ಪಂಚಾಯಿತಿ ಅಖಾಡ ನಿರಂಜನಿ ಬ್ರಹ್ಮರ್ಷಿ ಕುಮಾರ ಸ್ವಾಮಿಗಳಿಗೆ ಜಗದ್ಗುರು ಬಿರುದು ನೀಡಿ ಗೌರವಿಸಿದರು. ಈ ಅಖಾಡದಿಂದ ಸಂತರಿಗೆ ಜಗದ್ಗುರು ಎಂಬ ಬಿರುದು ನೀಡಿರುವುದು ಇದೇ ಮೊದಲು ಎಂಬುದು ವಿಶೇಷ.

ಅಖಾಡದ ಕಾರ್ಯದರ್ಶಿ ಮಹಂತ್​ ರವೀಂದ್ರ ಪುರಿ ಮಾತನಾಡಿ, ಅಖಾಡಗಳಲ್ಲೇ ಮೊದಲ ಬಾರಿಗೆ ಜಗದ್ಗುರುಗಳನ್ನು ನೇಮಕ ಮಾಡಲಾಗಿದೆ. ಮಹಮಂಡಲೇಶ್ವರ ಅವರು ಜಗದ್ಗುರುಗಳಾಗಿರುತ್ತಾರೆ. ಬಸಂತ ಪಂಚಮಿಯ ಅಮೃತ ಸ್ನಾನಕ್ಕೂ ಮುನ್ನ ಪಂಚಾಯಿತಿ ಅಖಾಡ ನಿರಂಜನಿಯವರು ಮಂತ್ರ ಪಂಡಿತರಾದ ಮಹಾಮಂಡಲೇಶ್ವರ ಬ್ರಹ್ಮರ್ಷಿ ಕುಮಾರ ಸ್ವಾಮಿಗಳಿಗೆ ಜಗದ್ಗುರು ಪಟ್ಟ ಪ್ರದಾನ ಮಾಡಿದರು. ಶುಕ್ರವಾರ ನಿರಂಜನಿ ಅಖಾಡದ ಶಿಬಿರದಲ್ಲಿ ಆಚಾರ್ಯ ಮಹಾಮಂಡಲೇಶ್ವರ ಕೈಲಾಶಾನಂದ ಗಿರಿ ಹಾಗೂ ಕಾರ್ಯದರ್ಶಿ ಮಹಂತ್ ರವೀಂದ್ರ ಪುರಿ ಸೇರಿದಂತೆ ವಿವಿಧ ಮಹಾಮಂಡಲೇಶ್ವರರ ಸಮ್ಮುಖದಲ್ಲಿ ಮಂತ್ರ ಪಠಣದ ನಡುವೆ ಪುಷ್ಪಾರ್ಚನೆ ಮಾಡುವ ಮೂಲಕ ಪೂರ್ಣ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

Shri Panchayati Akhara Niranjani first Jagadguru Mahamandaleshwar Brahmarshi Kumar Swami
ನಿರಂಜನಿ ಬ್ರಹ್ಮರ್ಷಿ ಕುಮಾರ ಸ್ವಾಮಿ (ಈಟಿವಿ ಭಾರತ್​​)

ನಿರಂಜನ ಆಖಾಡದ ಆಚಾರ್ಯ ಪೀಠಾಧೀಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರ ಅನುಮತಿ ಮೇರೆಗೆ ಜಗದ್ಗುರುಗಳಾಗಿ ಜಲ ಅಭಿಷೇಕದ ನಂತರ ಪಟ್ಟಾಭಿಷೇಕ ಕಾರ್ಯ ನಡೆಯಿತು. ಪಟ್ಟಾಭಿಷೇಕಕ್ಕೂ ಮುನ್ನ ನಿರಂಜನಿ ಪೀಠಾಧೀಶ್ವರರು ವೇದ ಮಂತ್ರ ಪಠಣ ಮಾಡಿದರು. ಬಳಿಕ ವಿವಿಧ ಅಖಾಡಗಳಿಂದ ಸಾಧು ಸಂತರು ಆಗಮಿಸಿ ಜಗದ್ಗುರುಗಳಿಗೆ ಪುಷ್ಪಾರ್ಚನೆ ನಡೆಸಿದರು.

ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಹಾಗೂ ನಿರಂಜನಿ ಅಖಾಡದ ಕಾರ್ಯದರ್ಶಿ ಮಹಂತ ರವೀಂದ್ರ ಪುರಿ ಮಾತನಾಡಿ, ಬ್ರಹ್ಮರ್ಷಿ ಕುಮಾರ ಸ್ವಾಮಿಗಳು ಹಲವು ವರ್ಷಗಳಿಂದ ಸನಾತನ ಧರ್ಮ ಪ್ರಚಾರ ನಡೆಸುತ್ತಿದ್ದು, ನಿರಂಜನಿ ಅಖಾಡದ ಮಹಾಮಂಡಲೇಶ್ವರನಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಅವರಿಗೆ ಸನಾತನ ಧರ್ಮವನ್ನು ಜಗದ್ಗುರು ಎಂಬ ಬಿರುದು ನೀಡಲಾಗಿದೆ. ಅವರು ವೇದ ಬೀಜ ಮಂತ್ರದಲ್ಲಿ ನಿಪುಣರಾಗಿದ್ದು ಈ ಮಂತ್ರದ ಮೂಲಕ ಅನೇಕ ಗುಣಪಡಿಸಲಾಗದ ಕಾಯಿಲೆಗೆ ಚಿಕಿತ್ಸೆ ನೀಡಿದ್ದಾರೆ. ನಿರಂಜನಿ ಅಖಾಡ ಇಂತಹ ಸಮರ್ಥ ಸಂತರಿಗೆ ಮೊದಲ ಬಾರಿ ಜಗದ್ಗುರುವಾಗಿ ನೇಮಕ ಮಾಡಿದೆ.

ನಿರಂಜನಿ ಅಖಾಡದ ಮಹಾಮಂಡಲೇಶ್ವರ ಕುಮರ್​ ಸ್ವಾಮಿ ಮಹಾರಾಜ್​ ಮಾತನಾಡಿ, ಸನಾತನ ಧರ್ಮ ಬಲಗೊಳಿಸಲು ದೇಶದ ಮತ್ತು ವಿದೇಶದಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವೇದ ಮಂತ್ರದಲ್ಲಿ ಅದ್ಬುತ ಶಕ್ತಿ ಇದೆ. ಎಲ್ಲ ರೀತಿಯ ಜನರ ಸಮಸ್ಯೆಯನ್ನು ಇದರಿಂದ ಅವರು ಗುಣಪಡಿಸಿದ್ದಾರೆ. ವಿದೇಶಿಗರು ಇದೀಗ ಸನಾತನ ಧರ್ಮದ ಶಕ್ತಿ ಗುರುತಿಸುತ್ತಿದ್ದಾರೆ. ಮಂತ್ರದ ಹೊರತಾಗಿ ಅವರು ಆಯುರ್ವೇದದ ಬಗ್ಗೆ ತಿಳಿದಿದ್ದಾರೆ ಎಂದರು.

ಇದೇ ವೇಳೆ, ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರಿಗೆ ಕಾಶಿ ವಿದ್ವತ್ ಪರಿಷತ್ ವತಿಯಿಂದ ಸನಾತನ ಧರ್ಮ ಮಾರ್ತಾಂಡ ಗೌರವ ನೀಡಲಾಯಿತು. ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷರಾದ ಮಹಂತ್ ರವೀಂದ್ರ ಪುರಿ ಅವರಿಗೆ ಮಹಾ ಜಗದ್ಗುರು ಎಂಬ ಬಿರುದನ್ನು ಸಹ ನೀಡಲಾಯಿತು.

ಇದನ್ನೂ ಓದಿ: ರಾಮೇಶ್ವರಂನಲ್ಲಿ ಭಾರತದ ಮೊದಲ ಲಂಬವಾಗಿ ತೆರೆಯುವ ರೈಲ್ವೆ ಸೀ ಬ್ರಿಡ್ಜ್​ ಸಿದ್ಧ: ಶೀಘ್ರದಲ್ಲೇ ಕಾರ್ಯಾರಂಭ

ಇದನ್ನೂ ಓದಿ: ಮಹಾಕುಂಭದಿಂದ ಮರಳುತ್ತಿದ್ದ ಯಾತ್ರಿಗಳಿದ್ದ ಪಿಕಪ್​ ವಾಹನ ಅಪಘಾತ; 8 ಸಾವು, 12 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.