ಕರ್ನಾಟಕ

karnataka

ETV Bharat / lifestyle

ಘಮಘಮಿಸುವ ಕೇರಳದ ಸ್ಪೆಷಲ್ 'ಸುಲೈಮಾನಿ ಚಹಾ': ವಾವ್ ಎನಿಸುವ ಟೇಸ್ಟ್! - SULAIMANI TEA RECIPE

Sulaimani Tea Recipe: ಕೇರಳದ ಸ್ಪೆಷಲ್ 'ಸುಲೈಮಾನಿ ಚಹಾ' ಸೇವಿಸಿದರೆ ವಾವ್ ಎಸಿಸುವಂತಹ ಭಾವ ನಿಮಗೆ ಆಗುತ್ತದೆ. ಸುಲೈಮಾನಿ ಚಹಾ ಹೇಗೆ ಸಿದ್ಧಪಡಿಸಬೇಕೆಂಬುದನ್ನು ನೋಡೋಣ ಬನ್ನಿ...

KERALA SPECIAL SULAIMANI TEA  MALABAR SPECIAL SULAIMANI TEA  MAKING SULAIMANI TEA AT HOME  EASY AND HEALTHY TEA RECIPE
ಕೇರಳದ ಸ್ಪೆಷಲ್ 'ಸುಲೈಮಾನಿ ಚಹಾ' (Pexels)

By ETV Bharat Lifestyle Team

Published : Jan 31, 2025, 1:13 PM IST

Sulaimani Tea Recipe:ನಮ್ಮಲ್ಲಿ ಹೆಚ್ಚಿನವರಿಗೆ ಚಹಾ ಎನ್ನುವ ಹೆಸರನ್ನು ಕೇಳಿದರೆ ಸಾಕು ತಕ್ಷಣವೇ ಉತ್ಸಾಹದ ಭಾವನೆ ಮೂಡುತ್ತದೆ. ಟೀ ಕುಡಿದರೆ ಆಯಾಸ, ಮಂದತೆ ಹೋಗಲಾಡಿಸುತ್ತದೆ. ರಿಫ್ರೆಶ್​ ಆಗುವಂತೆ ಮಾಡುತ್ತದೆ. ಬಹುತೇಕ ಜನರು ಹಾಲು ಮತ್ತು ಚಹಾ ಪುಡಿಯಿಂದ ಮಾಡಿರುವ ಸಾಮಾನ್ಯ ಚಹಾವನ್ನು ಕುಡಿಯುತ್ತಾರೆ. ಇನ್ನು ಕೆಲವರು ಇರಾನಿ, ಶುಂಠಿ, ಗ್ರೀನ್​, ಲೆಮನ್ ಟೀ ಸೇವಿಸುತ್ತಾರೆ.

ಕೇರಳದ ಸ್ಪೆಷಲ್ ಸುಲೈಮಾನಿ ಚಹಾ ಬಗ್ಗೆ ನೀವು ಕೇಳಿದ್ದೀರಾ? ಒಮ್ಮೆ ಟೀ ಸಿದ್ಧಪಡಿಸಿ ನೋಡಿ. ಇದರ ರುಚಿಯು ಸೂಪರ್ ಆಗಿರುತ್ತದೆ. ಊಟದ ನಂತರ ಇದನ್ನು ಒಂದು ಕಪ್​ ಕುಡಿದರೆ ಜೀರ್ಣಕ್ರಿಯೆಗೆ ಹೆಚ್ಚು ಸಹಾಯವಾಗುತ್ತದೆ. ಈ ಚಹಾ ಟೇಸ್ಟಿಯಾಗಿರುವ ಜೊತೆಗೆ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಟೀ ತಯಾರಿಸಲು ಬೇಕಾಗುವ ಪದಾರ್ಥಗಳೇನು ಹಾಗೂ ಉತ್ಪಾದನಾ ಪ್ರಕ್ರಿಯೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

ಸುಲೈಮಾನಿ ಟೀ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:

  • ನೀರು - 1 ಲೀಟರ್
  • ಲವಂಗ - 6
  • ದಾಲ್ಚಿನ್ನಿ - 2 ಇಂಚಿನಷ್ಟು
  • ಸಕ್ಕರೆ - 3 ರಿಂದ 4 ಟೀಸ್ಪೂನ್​
  • ಟೀ ಪುಡಿ - 3 ಟೀಸ್ಪೂನ್​
  • ತಾಜಾ ಪುದೀನ ಎಲೆಗಳು - 15 ರಿಂದ 20
  • ನಿಂಬೆ - 1

ಸುಲೈಮಾನಿ ಚಹಾ ತಯಾರಿಸುವ ವಿಧಾನ:

  • ಸ್ಟೌವ್ ಆನ್ ಮಾಡಿ ಪಾತ್ರೆ ಇಡಿ, ಅದರಲ್ಲಿ ಒಂದು ಲೀಟರ್ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕಾಗುತ್ತದೆ. ನೀರು ಕುದಿಯುವ ಸಮಯದಲ್ಲಿ ಲವಂಗ, ದಾಲ್ಚಿನ್ನಿ ಹಾಕಬೇಕು. ಹೆಚ್ಚಿನ ಉರಿಯಲ್ಲಿ ಒಂದು ನಿಮಿಷ ಕುದಿಸಿ.
  • ಕುದಿಸಿದ ಬಳಿಕ ಸಕ್ಕರೆ ಹಾಕಿ ಮತ್ತೆರಡು ನಿಮಿಷ ಕುದಿಯಲು ಬಿಡಬೇಕಾಗುತ್ತದೆ. ಸಕ್ಕರೆಯ ಬದಲಾಗಿ ಬೆಲ್ಲವನ್ನೂ ಕೂಡ ಬಳಕೆ ಮಾಡಬಹುದು.
  • ಎರಡು ನಿಮಿಷ ಉರಿಯಲ್ಲಿ ಕುದಿಸಿದ ಬಳಿಕ, ಟೀ ಪುಡಿ ಹಾಕಿ ಒಮ್ಮೆ ಮಿಕ್ಸ್ ಮಾಡಿಕೊಳ್ಳಿ.
  • ಟೀ ಪುಡಿ ಸೇರಿಸಿದ ಬಳಿಕ ಈ ಮಿಶ್ರಣವನ್ನು ಮತ್ತೊಮ್ಮೆ 2 ರಿಂದ 3 ನಿಮಿಷಗಳವರೆಗೆ ಹೆಚ್ಚಿನ ಉರಿಯಲ್ಲಿ ಕುದಿಸಬೇಕು.
  • ಹೆಚ್ಚು ಸಮಯದವರೆಗೆ ಕುದಿಸಿದರೆ ಚಹಾವು ತುಂಬಾ ಖಾರವಾದಂತೆ ಆಗುತ್ತದೆ. ಕುಡಿಯುವಾಗ ಅದು ಸರಾಗವಾಗಿ ಗಂಟಲಿನಲ್ಲಿ ಇಳಿಯುವುದಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
  • ನಿಗದಿತ ಸಮಯದೊಳಗೆ ಕುದಿಸಿದ ನಂತರ, ಸ್ಟೌವ್ ಆಫ್ ಮಾಡಿ. ಇದರೊಳಗೆ ತಾಜಾ ಪುದೀನ ಎಲೆಗಳನ್ನು ಸೇರಿಸಿ ಹಾಗೂ ನಿಂಬೆ ರಸ ಹಿಂಡಬೇಕು. ಬಳಿಕ ಚಹಾದ ಪಾತ್ರೆಯ ಮೇಲೆ ಮುಚ್ಚಿ ಎರಡು ನಿಮಿಷಗಳ ಕಾಲ ಹಾಗೆ ಬಿಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಎಲ್ಲಾ ಪದಾರ್ಥಗಳ ಸುವಾಸನೆಯು ಚಹಾದೊಳಗೆ ಚೆನ್ನಾಗಿ ಬರುತ್ತದೆ.
  • ಇದಾದ ನಂತರ ಬಿಸಿ ಬಿಸಿಯಾದ ಚಹಾವನ್ನು ಲೋಟಗಳಲ್ಲಿ ಹಾಕಿಕೊಂಡು ಕುಡಿಯಿರಿ.
  • ಸೂಪರ್ ಟೇಸ್ಟಿ ಕೇರಳ ಸ್ಪೆಷಲ್​ ಸುಲೈಮಾನಿ ಟೀ ಸಿದ್ಧವಾಗಿದೆ. ಕಡಿಮೆ ಸಮಯದಲ್ಲಿ ಈ ರೆಸಿಪಿ ಟ್ರೈ ಮಾಡಿ ನೋಡಿ.

ಇವುಗಳನ್ನೂ ಓದಿ:

ABOUT THE AUTHOR

...view details