IRCTC Wonders of Wayanad Tour:ಕೇರಳ ರಾಜ್ಯವು ಹಸಿರು ಬೆಟ್ಟಗಳು ಹಾಗೂ ಪ್ರಕೃತಿ ಸೌಂದರ್ಯದ ತವರೂರು ಆಗಿದೆ. ಅದಕ್ಕಾಗಿಯೇ ಅನೇಕ ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಲು ತುಂಬಾ ಇಷ್ಟಪಡುತ್ತಾರೆ. ಮುಖ್ಯವಾಗಿ ಚಳಿಗಾಲದಲ್ಲಿ ಜನರು ಮಂಜಿನಿಂದ ಆವೃತವಾದ ಹಸಿರು ಬೆಟ್ಟಗಳು, ಹರಿಯುವ ಜಲಪಾತಗಳನ್ನು ವೀಕ್ಷಿಸುಲು ಹಾತೊರೆಯುತ್ತಾರೆ.
ಈ ಪಟ್ಟಿಯಲ್ಲಿ ನೀವು ಕೂಡ ಇದ್ದೀರಾ? ಹಾಗಾದರೆ, ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನಿಮಗೋಸ್ಕರವಾಗಿ ಗುಡ್ನ್ಯೂಸ್ ನೀಡಿದೆ. ಈ ನಿಗಮವು ವಯನಾಡಿನ ಹಲವು ಸ್ಥಳಗಳಿಗೆ ಭೇಟಿ ನೀಡಲು ಟೂರ್ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್ ಎಷ್ಟು ದಿನಗಳನ್ನು ಒಳಗೊಂಡಿದೆ? ಪ್ರವಾಸದ ದರ ಎಷ್ಟು? ಈ ಪ್ಯಾಕೇಜ್ನಲ್ಲಿ ಯಾವ ಸ್ಥಳಗಳು ಸೇರಿವೆ ಎಂಬುದನ್ನು ನೋಡೋಣ.
IRCTC 'ವಂಡರ್ಸ್ ಆಫ್ ವಯನಾಡ್' ಹೆಸರಿನಲ್ಲಿ ಈ ಪ್ಯಾಕೇಜ್ ತಂದಿದೆ. ಈ ಪ್ರವಾಸವು ರೈಲಿನಲ್ಲಿ ಹೈದರಾಬಾದ್‌ನಿಂದ ಆರಂಭವಾಗುತ್ತದೆ. ವಯನಾಡಿನಲ್ಲಿರುವ ಅನೇಕ ತಾಣಗಳಿಗೆ ಭೇಟಿ ನೀಡಬಹುದು. ಈ ಪ್ಯಾಕೇಜ್ 5 ರಾತ್ರಿಗಳು ಮತ್ತು 6 ಹಗಲುಗಳಿಂದ ಕೂಡಿರುತ್ತದೆ. ಈ ಪ್ರವಾಸದ ಪ್ರಯಾಣ ಪ್ರತಿ ಮಂಗಳವಾರ ನೆಡಯುತ್ತದೆ.
1ನೇ ದಿನ:ಮೊದಲ ದಿನವು ಕಾಚಿಗುಡ- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 12789) ಕಾಚಿಗುಡ ರೈಲು ನಿಲ್ದಾಣದಿಂದ ಬೆಳಗ್ಗೆ 6ಕ್ಕೆ ಹೊರಡಲಿದೆ. ಅವತ್ತು ಇಡೀ ದಿನ ಪ್ರಯಾಣ ಜರುಗುತ್ತದೆ.
2ನೇ ದಿನ:ಎರಡನೇ ದಿನ ಬೆಳಗ್ಗೆ 6.17ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ಕರೆದುಕೊಂಡು ತೆರಳಲಾಗುವುದು. ಉಪಹಾರದ ನಂತರ, ಸೇಂಟ್ ಏಂಜೆಲೋ ಫೋರ್ಟ್ ಹಾಗೂ ಅರಕ್ಕಲ್ ಮ್ಯೂಸಿಯಂಗೆ ಭೇಟಿ ನೀಡಲಾಗುವುದು. ಅಲ್ಲಿಂದ ವಯನಾಡಿಗೆ ಪ್ರಯಾಣ ಪ್ರಾರಂಭವಾಗುತ್ತದೆ. ನಡುವೆ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ಕೊಡಲಾಗುವುದು. ಅಂದು ರಾತ್ರಿ ಚೆಕ್ ಇನ್ ಮಾಡಿ ಕಲ್ಪೆಟ್ಟಾದಲ್ಲಿರುವ ಹೋಟೆಲ್‌ನಲ್ಲಿ ತಂಗಲಾಗುವುದು.
3ನೇ ದಿನ:ಮೂರನೇ ದಿನ ಬೆಳಗ್ಗೆ ಹೋಟೆಲ್‌ನಲ್ಲಿ ಉಪಹಾರ ಸೇವಿಸಿದ ಬಳಿಕ ನಾವು ಕುರ್ವದೀಪದ ಅನೇಕ ಭಾಗಗಳಿಗೆ ಭೇಟಿ ಕೊಡಲಾಗುವುದು. ತಿರುನೆಲ್ಲಿ ದೇವಸ್ಥಾನ, ಬಾಣಾಸುರ ಸಾಗರ ಅಣೆಕಟ್ಟಿಗೆ ಭೇಟಿ ನೀಡಲಾಗುವುದು. ಅಂದು ರಾತ್ರಿ ಕಲ್ಪೆಟ್ಟಾದಲ್ಲಿ ಉಳಿದುಕೊಳ್ಳಲಾಗುವುದು.
4ನೇ ದಿನ:ನಾಲ್ಕನೇ ದಿನ, ಉಪಹಾರದ ನಂತರ ಅಂಬಲ್ವಾಯಲ್ ಹೆರಿಟೇಜ್ ಮ್ಯೂಸಿಯಂ, ಸ್ಕುಯಿಪಾರಾ ಫಾಲ್ಸ್, ಎಡಕ್ಕಲ್ ಗುಹೆಗಳು, ಪೊಕ್ಕೋಡ್ ಸರೋವರಕ್ಕೆ ವೀಕ್ಷಿಸಲಾಗುವುದು. ಆ ದಿನ ರಾತ್ರಿ ಕಲ್ಪೆಟ್ಟಾದಲ್ಲಿ ತಂಗಲಾಗುವುದು.