IRCTC Magnificent Madhya Pradesh Tour: ದೇಶದ ಅತ್ಯುತ್ತಮ ಹಲವು ಐತಿಹಾಸಿಕ ಪ್ರವಾಸಿ ಸ್ಥಳಗಳು ಮಧ್ಯಪ್ರದೇಶದಲ್ಲಿವೆ. ಆಧ್ಯಾತ್ಮಿಕ, ಪುರಾತನ, ವಿಶ್ವ ಪರಂಪರೆಯ, ಆಧ್ಯಾತ್ಮಿಕ, ನೈಸರ್ಗಿಕ ಮತ್ತು ವನ್ಯಜೀವಿ ಅಭಯಾರಣ್ಯಗಳು ಈ ರಾಜ್ಯದಲ್ಲಿವೆ. ಈ ಎಲ್ಲಾ ತಾಣಗಳನ್ನು ಒಂದೇ ಪ್ರವಾಸದಲ್ಲಿ ವೀಕ್ಷಿಸುವುದು ತುಂಬಾ ಕಷ್ಟ. ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್, ನಿಮಗಾಗಿ ಮೂರು ಪ್ರಮುಖ ನಗರಗಳಿಗೆ ಭೇಟಿ ನೀಡುವುದಕ್ಕಾಗಿ ಸೂಪರ್ ಟೂರ್ ಪ್ಯಾಕೇಜ್ ತಂದಿದೆ.
IRCTC 'ಮ್ಯಾಗ್ನಿಫಿಸೆಂಟ್ ಮಧ್ಯಪ್ರದೇಶ' (Magnificent Madhya Pradesh) ಎಂಬ ಹೆಸರಿನಲ್ಲಿ ಪ್ರವಾಸದ ಪ್ಯಾಕೇಜ್ನ್ನು ಘೋಷಿಸಿದೆ. ಪ್ರವಾಸದಲ್ಲಿ 5 ರಾತ್ರಿಗಳು ಮತ್ತು 6 ಹಗಲು ಒಳಗೊಂಡಿರುತ್ತದೆ. ನೀವು ಈ ಒಂದೇ ಪ್ರವಾಸದಲ್ಲಿ ಗ್ವಾಲಿಯರ್, ಖಜುರಾಹೊ ಮತ್ತು ಓರ್ಚಾದಲ್ಲಿರುವ ದೇವಾಲಯಗಳು ಹಾಗೂ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು.
ಪ್ರವಾಸದ ವಿವರಗಳು ಇಲ್ಲಿವೆ ನೋಡಿ:
1ನೇ ದಿನ:ಮೊದಲ ದಿನದ ಬೆಳಿಗ್ಗೆ ಹೈದರಾಬಾದ್‌ನಿಂದ ವಿಮಾನ ಪ್ರಯಾಣ ಆರಂಭವಾಗುತ್ತದೆ. ಮಧ್ಯಾಹ್ನದ ವೇಳೆಗೆ ಖಜುರಾಹೊ ತಲುಪಿ ಹೋಟೆಲ್‌ಗೆ ಚೆಕ್ ಇನ್ ಮಾಡಬೇಕಾಗುತ್ತದೆ. ಬಳಿಕ ಖಜುರಾಹೊದಲ್ಲಿರುವ ಹಲವಾರು ದೇವಾಲಯಗಳನ್ನು ವೀಕ್ಷಿಸಲಾಗುವುದು. ಮತ್ತೆ ಹೋಟೆಲ್‌ಗೆ ಹಿಂತಿರುಗಲಾಗುವುದು. ಅಲ್ಲಿ ಊಟ ಮಾಡಿ, ರಾತ್ರಿ ಉಳಿದುಕೊಳ್ಳಲಾಗುವುದು.
2ನೇ ದಿನ:ಎರಡನೇ ದಿನ ಬೆಳಿಗ್ಗೆ ಉಪಹಾರದ ಸೇವಿಸಿದ ನೀವು ಖಜುರಾಹೊದ ವಿವಿಧ ದೇವಾಲಯಗಳಿಗೆ ಭೇಟಿ ಕೊಡಬೇಕಾಗುತ್ತದೆ. ಸಂಜೆ ಸಮಯದಲ್ಲಿ ಖಜುರಾಹೊ ನೃತ್ಯ ಉತ್ಸವಕ್ಕೆ ಭೇಟಿ ನೀಡಲಾಗುವುದು. ಊಟ ಮಾಡಿದ ಬಳಿಕ ಇಲ್ಲಿರುವ ಹೋಟೆಲ್ನಲ್ಲಿಯೇ ತಂಗಲಾಗುವುದು.
3ನೇ ದಿನ:ಮೂರನೇ ದಿನ ಬೆಳಿಗ್ಗೆ ಉಪಹಾರದ ಸೇವಿಸಿದ ನಂತರ ನೀವು ಹೋಟೆಲ್ನಿಂದ ಚೆಕ್ ಔಟ್ ಮಾಡಿ ಓರ್ಚಾಗೆ ಹೊರಡಲಾಗುವುದು. ಅಲ್ಲಿನ ಹೋಟೆಲ್‌ಗೆ ಭೇಟಿ ನೀಡಿದ ಬಳಿಕ, ಓರ್ಚಾ ಕೋಟೆ ಸಂಕೀರ್ಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ಕೊಡಲಾಗುವುದು. ಹೋಟೆಲ್‌ಗೆ ಹಿಂತಿರುಗಿ ರಾತ್ರಿ ಅಲ್ಲಿಯೇ ತಂಗಲಾಗುವುದು.