ಕರ್ನಾಟಕ

karnataka

ETV Bharat / lifestyle

ಆತ ತಾನು ಮಾಡಿದ ತಪ್ಪು ಒಪ್ಪಿಕೊಂಡಿದ್ದಾನೆ..! ನಾನೀಗ ನನ್ನ ಗಂಡನನ್ನು ಕ್ಷಮಿಸಬೇಕೇ? ಬೇಡವೇ?; ಮನಶಾಸ್ತ್ರಜ್ಞರ ಸಲಹೆ ಏನು? - HUSBAND AND WIFE RELATIONSHIP

ಆತನಿಗೆ ತನ್ನ ತಪ್ಪಿನ ಅರಿವಾಗಿದೆ, ಅಳುತ್ತಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ, ಕ್ಷಮಿಸಿಬಿಡು ಅಂತಿದ್ದಾನೆ. ಹಾಗಾದರೆ ನಾನೀಗ ಏನು ಮಾಡಬೇಕು. ಕ್ಷಮಿಸಬೇಕಾ? ಆದರೆ ಮುಂದೆಯೂ ಹೀಗೆ ಮಾಡಿದರೆ ಏನು ಗತಿ? ಮನಶ್ಶಾಸ್ತ್ರಜ್ಞರ ಸಲಹೆ ಏನು?

husband-cheating-wife-and-psychiatrist-advice-for-family-problems-
ಆತ ತಾನು ಮಾಡಿದ ತಪ್ಪು ಒಪ್ಪಿಕೊಂಡಿದ್ದಾನೆ..! ನಾನೀಗ ನನ್ನ ಗಂಡನನ್ನು ಕ್ಷಮಿಸಬೇಕೇ? ಬೇಡವೇ? (Getty Images)

By ETV Bharat Karnataka Team

Published : Feb 25, 2025, 7:09 AM IST

ಇತ್ತೀಚಿನ ದಿನಗಳಲ್ಲಿ ಮನೆ ನಡೆಸಿಕೊಂಡು ಹೋಗುವುದೇ ದುಸ್ತರವಾಗಿದೆ. ಹೀಗಾಗಿ ಗಂಡ -ಹೆಂಡತಿ ಇಬ್ಬರೂ ದುಡಿಯಬೇಕಾದ ಅಗತ್ಯವಿದೆ. ಇದರಿಂದ ಪತಿ - ಪತ್ನಿ ಪರಸ್ಪರ ಹತ್ತಿರ ಇರಲು, ಅರಿತುಕೊಳ್ಳಲು ಹಾಗೂ ಹೆಚ್ಚಿನ ಸಮಯವನ್ನು ಏಕಾಂತದಲ್ಲಿ ಕಳೆಯಲು ಸಾಧ್ಯವಾಗುವುದಿಲ್ಲ.

ಇದು ಒಮ್ಮೊಮ್ಮೆ ಸಂವಹನದ ಕೊರತೆ, ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವುದು ಕಾಮನ್​ ಎಂಬಂತಾಗಿದೆ. ಹೀಗೆ ಹುಟ್ಟುವ ಅಂತರ ಇಬ್ಬರ ನಡುವೆ ಬಿರುಕಿಗೂ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ಕೆಲವರು ಮತ್ತೊಬ್ಬರಿಗೆ ಹತ್ತಿರವಾಗಿ ಬಿಡುತ್ತಾರೆ. ಈ ಕಾರಣದಿಂದಾಗಿ, ಪರಸ್ಪರ ದಾಂಪತ್ಯದಲ್ಲಿ ತೊಡಕುಗಳು ಉಂಟಾಗುತ್ತವೆ. ಇಂತಹುದೇ ಪರಿಸ್ಥಿತಿ ಎದುರಿಸಿದ ಮಹಿಳೆಯೊಬ್ಬರ ಸಮಸ್ಯೆ ಬಗ್ಗೆ ತಿಳಿದುಕೊಳ್ಳುವುದಾದರೆ? .

ಏನದು ಸಮಸ್ಯೆ?: ಮಹಿಳೆ ಹೇಳುವ ಪ್ರಕಾರ, 'ನಮ್ಮ ಮದುವೆಯಾಗಿ ಹತ್ತು ವರ್ಷಗಳಾಗಿವೆ. ನಾವಿಬ್ಬರೂ ಕೆಲಸ ಮಾಡುತ್ತಿದ್ದೇವೆ. ನಿತ್ಯ ಆಫೀಸಿಗೆ ಹೋಗಿ ಬರುವುದರಲ್ಲೇ ಬ್ಯುಸಿಯಾದೆವು. ಇದರಿಂದಾಗಿ ನಮ್ಮ ನಡುವಿನ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗಿವೆ. ಈ ನಡುವೆ ನಾನು ಅವನಲ್ಲಿ ಸಾಕಷ್ಟು ಬದಲಾವಣೆಗಳನ್ನು ಗಮನಿಸಿದ್ದೇವೆ. ಒಂದು ದಿನ ಆತ ನನ್ನ ಬಳಿಗೆ ಬಂದು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದ. ತಪ್ಪು ಮಾಡಿ ಬಿಟ್ಟಿದ್ದೇನೆ, ನಾನು ಬೇರೊಬ್ಬ ಹುಡುಗಿಯೊಂದಿಗೆ ಹತ್ತಿರವಾಗಿದ್ದೇನೆ ಎಂದು ಹೇಳಿದ. ಇದೇ ಗಳಿಗೆಯಲ್ಲಿ ಮತ್ತೆ ಇಂತಹ ತಪ್ಪು ಮಾಡಲ್ಲ ಎಂದ. ಆದರೆ, ಒಮ್ಮೆ ಮೋಸ ಮಾಡಿದವರು ಮತ್ತೆ ಹಾಗೆ ಮಾಡುವುದಿಲ್ಲ ಎಂಬ ಗ್ಯಾರಂಟಿ ಏನು?. ಯಾವ ನಿರ್ಧಾರ ತೆಗೆದುಕೊಳ್ಳಬೇಕೋ ಗೊತ್ತಿಲ್ಲ. ನಾವು ಅವರಿಗೆ ಎರಡನೇ ಅವಕಾಶ ನೀಡಬಹುದೇ?' ಎಂಬುದು ಸಮಸ್ಯೆಯ ಸುಳಿಗೆ ಸಿಲುಕಿದ ಮಹಿಳೆಯ ಪ್ರಶ್ನೆಯಾಗಿದೆ.

ಈ ಬಗ್ಗೆ ಅವರು ಮನಶ್ಶಾಸ್ತ್ರಜ್ಞರ ಮೊರೆ ಹೋಗಿದ್ದು, ಅವರಿಂದ ಸಲಹೆ ಬಯಸುತ್ತಿದ್ದಾರೆ. ಬನ್ನಿ ಈ ಮಹಿಳೆಯ ಸಮಸ್ಯೆಗೆ ಖ್ಯಾತ ಮನಶಾಸ್ತ್ರಜ್ಞೆ ಡಾ.ಮಂಡಾಡಿ ಗೌರಿದೇವಿಯವರು ಏನು ಹೇಳುತ್ತಾರೆ ಎಂಬುದನ್ನು ಈಗ ತಿಳಿಯೋಣ.

ಯಾಂತ್ರಿಕ ಬದುಕು:ಸದ್ಯ ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದಾರೆ. ಅದರಿಂದಾಗಿ ಕೆಲವರಿಗೆ ಕುಟುಂಬ ಮತ್ತು ವೃತ್ತಿಯ ನಡುವೆ ತಮ್ಮ ಸಮಯವನ್ನು ಸರಿಯಾಗಿ ವಿಭಜಿಸಲು ಸಾಧ್ಯವಾಗುವುದಿಲ್ಲ. ಅದರಿಂದಾಗಿ ಜೀವನ ಯಾಂತ್ರಿಕವಾಗುತ್ತಾ ಸಾಗುತ್ತದೆ. ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದ ಕಾರಣ ನೀವಿಬ್ಬರೂ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದೂರವಾಗಿದ್ದೀರಿ. ಆದಾಗ್ಯೂ, ಅದೇ ಸಮಯದಲ್ಲಿ, ಕೆಲವರು ತಿಳಿಯದೇ ಇತರರ ಆಕರ್ಷಣೆಗೆ ಒಳಗಾಗುತ್ತಾರೆ. ಇದು ಸ್ನೇಹದಿಂದ ಪ್ರಾರಂಭವಾಗುತ್ತದೆ ಮತ್ತು ನಂತರ ಅವರು ಎಲ್ಲಾ ರೀತಿಯಲ್ಲೂ ಹತ್ತಿರವಾಗುತ್ತಾರೆ. ಈ ಕ್ರಮದಲ್ಲಿ ನೋಡುವುದಾದರೆ ಸಮಸ್ಯೆ ಸುಳಿಗೆ ಸಿಲುಕಿದ ಮಹಿಳೆ ಜೀವನದಲ್ಲೂ ಇಂತಹದ್ದೇ ಸಮಸ್ಯೆ ತಲೆದೋರಿದೆ.

ಇದಕ್ಕೆ ಮನಶಾಸ್ತ್ರಜ್ಞರ ಸಲಹೆ ಏನು?:ಪತಿ-ಪತ್ನಿಯರ ನಡುವಿನ ಪ್ರೀತಿ-ವಿಶ್ವಾಸದ ತಳಹದಿಯ ಮೇಲೆ ದಾಂಪತ್ಯ ಮುಂದುವರಿಕೆ ನಿಂತಿರುತ್ತದೆ. ನಿಮ್ಮ ವಿಚಾರದಲ್ಲಿ ಈಗ ನಡೆದದ್ದು ಸಹಿಸಲಸಾಧ್ಯ. ನೀವು ಅವರಿಗೆ ವಿಚ್ಛೇದನ ನೀಡುವುದು ಸುಲಭ ಅಂತಾನೂ ಇರಬಹುದು. ಆದರೆ, ಈಗ ನಿಮಗೆ ಮಗು ಸಹ ಇದೆ. ಆ ಮಗುವಿನ ಮುಂದಿನ ಜೀವನ, ಬೆಳವಣಿಗೆಯ ಪ್ರಶ್ನೆ ಇಲ್ಲಿ ಬರುತ್ತದೆ. ಮಗುವನ್ನು ಬೆಳೆಸುವ ಸಂಬಂಧ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಮಗುವಿಗೆ ನಿಮ್ಮಿಬ್ಬರ ಪ್ರೀತಿ ಮತ್ತು ಕಾಳಜಿ ಬೇಕು. ಹೀಗಾಗಿ ವಿಚ್ಚೇದನ ಸರಿಯಾದ ಕ್ರಮ ಆಗುವುದಿಲ್ಲ ಅಂತಾರೆ ಮನೋವಿಜ್ಞಾನಿ ಡಾಕ್ಟರ್​ ಮಂದಾಡಿ ಗೌರಿದೇವಿ

ಇಬ್ಬರ ಜಗಳದಲ್ಲಿ ಮಗು ಬಡವಾಗುತ್ತೆ:ವಿಷಯ ತಿಳಿದ ಮೇಲೆ ಆತನ ಜೊತೆ ಇರಲು ಆಗಲ್ಲ ಎಂದು ವಿಚ್ಚೇದನ ಕೊಟ್ಟರೆ ಇಬ್ಬರ ನಡುವಣ ಸಂಬಂಧಕ್ಕೆ ಹದಗೆಡುತ್ತದೆ. ಡಿವೋರ್ಸ್​ ಬಳಿಕವೂ ಇಬ್ಬರೂ ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂತಹ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೀವು ಕೌಟುಂಬಿಕ ಸಲಹೆಗಾರರ ​​ಸಹಾಯ ತೆಗೆದುಕೊಳ್ಳಿ. ಅವರು ನಿಮ್ಮ ಮಾನಸಿಕ, ಸಾಮಾಜಿಕ ಮತ್ತು ಕೌಟುಂಬಿಕ ಪರಿಸ್ಥಿತಿಗಳನ್ನು ವಿಶ್ಲೇಷಿಸುತ್ತಾರೆ ಮತ್ತು ಅಗತ್ಯ ಸಲಹೆ ನೀಡುತ್ತಾರೆ. ಬಂಧವನ್ನು ಬಲಪಡಿಸಲು ಕೆಲವು ಸಲಹೆಗಳನ್ನು ನೀಡಲಾಗುತ್ತದೆ. ಅವನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪಶ್ಚಾತ್ತಾಪವನ್ನೂ ಪಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಇನ್ನೊಂದು ಅವಕಾಶ ನೀಡಿ, ಇನ್ನು ಮುಂದೆ ನಿಮ್ಮ ಜೀವನವನ್ನು ಹೊಸದಾಗಿ ಆರಂಭಿಸಿ ಎನ್ನುತ್ತಾರೆ ಡಾ. ಮಂದಾಡಿ ಗೌರಿದೇವಿ .

ಇದನ್ನು ಓದಿ:ಗರ್ಭಧಾರಣೆಗೆ ಸೂಕ್ತ ವಯಸ್ಸು ಯಾವುದು? ಯಾವ ವಯಸ್ಸಿನ ನಂತರ ಮಕ್ಕಳನ್ನು ಪಡೆಯೋದು ಕಷ್ಟ?: ತಜ್ಞರ ಮಾತು ಕೇಳಿ

ನಿಮ್ಮ ಸಂಗಾತಿಗೆ ಐ ಲವ್​ ಯೂ ಅಂತ ಹೇಳಿಲ್ವಾ? ಈಗಲೇ ಹೋಗಿ ಹೇಳಿ ನೋಡಿ!

ABOUT THE AUTHOR

...view details