ಅದ್ಭುತ ರುಚಿಯ ಚಿಕನ್ ಫ್ರೈ: ಮನೆಯಲ್ಲಿ ಸಿದ್ಧಪಡಿಸೋದು ಕೂಡ ಅತ್ಯಂತ ಸರಳ! - CHICKEN FRY RECIPE
How To Make Chicken Fry at Home: ಈ ಬಾರಿ ಅದ್ಭುತ ರುಚಿಯ ಚಿಕನ್ ಫ್ರೈ ರೆಸಿಪಿಯನ್ನು ನಿಮಗಾಗಿ ನಾವು ತಂದಿದ್ದೇವೆ. ಮನೆಯಲ್ಲಿ ಚಿಕನ್ ಫ್ರೈ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
How To Make Chicken Fry at Home:ಬಹುತೇಕರು ಚಿಕನ್ ಅಡುಗೆ ಅಂದ್ರೆ ಸಾಕು, ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಚಿಕನ್ನಲ್ಲಿ ವಿವಿಧ ಪ್ರಕಾರದ ಅಡುಗೆಗಳನ್ನು ಬಯಸುವವರಿಗಾಗಿ ನಾವು ವಿಭಿನ್ನ ರೆಸಿಪಿಯನ್ನು ತಂದಿದ್ದೇವೆ. ಅದುವೇ ಚಿಕನ್ ಫ್ರೈ.. ನಾವು ತಿಳಿಸಿದಂತೆ ಚಿಕನ್ ಫ್ರೈ ಸಿದ್ಧಪಡಿಸಿದರೆ ಟೇಸ್ಟ್ ತುಂಬಾ ಚೆನ್ನಾಗಿರುತ್ತದೆ. ಮತ್ತೇಕೆ ತಡ, ಸಖತ್ ರುಚಿಯ ಚಿಕನ್ ಫ್ರೈ ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ..
ಚಿಕನ್ ಫ್ರೈ ರೆಸಿಪಿಗೆ ಬೇಕಾಗುವ ಪದಾರ್ಥಗಳೇನು?
ಮ್ಯಾರಿನೇಟ್ ಮಾಡಲು:
ಚಿಕನ್ - 1 ಕೆಜಿ
ಉಪ್ಪು - 2 ಟೀಸ್ಪೂನ್
ಅರಿಶಿನ - 1 ಟೀಸ್ಪೂನ್
ಖಾರದ ಪುಡಿ - 1 ಟೀಸ್ಪೂನ್
ಮೊಸರು - 2 ಟೇಬಲ್ ಸ್ಪೂನ್
ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಒಂದೂವರೆ ಟೀಸ್ಪೂನ್
ನಿಂಬೆ ರಸ - ಸ್ವಲ್ಪ
ಚಿಕನ್ ಫ್ರೈ ಮಾಡಲು:
ಈರುಳ್ಳಿ - 3 (ಮಧ್ಯಮ ಗಾತ್ರ)
ಎಣ್ಣೆ - 5 ಟೀ ಸ್ಪೂನ್
ಹಸಿ ಮೆಣಸಿನಕಾಯಿ - 3 (ಲಂಬವಾಗಿ ಕತ್ತರಿಸಿದ ತುಣುಕು)
ಪುದೀನ - ಸ್ವಲ್ಪ
ಕರಿಬೇವಿನ ಎಲೆಗಳು - ಸ್ವಲ್ಪ (ನುಣ್ಣಗೆ ಕತ್ತರಿಸಿ ಇಟ್ಟುಕೊಳ್ಳಬೇಕು)
ಕೊತ್ತಂಬರಿ ಸೊಪ್ಪ - ಸ್ವಲ್ಪ
ಮಸಾಲಾ ಪುಡಿಗೆ ಬೇಕಾಗುವ ಸಾಮಗ್ರಿಗಳು:
ಒಣಮೆಣಸಿನಕಾಯಿ - 4
ಕರಿಮೆಣಸು - 1 ಟೀಸ್ಪೂನ್
ದಾಲ್ಚಿನ್ನಿ - 2 ಇಂಚುಗಳು
ಲವಂಗ - 7
ಏಲಕ್ಕಿ - 4
ಧನಿಯಾ ಪುಡಿ - 2 ಟೇಬಲ್ ಸ್ಪೂನ್
ಜೀರಿಗೆ - 1 ಟೀಸ್ಪೂನ್
ಚಿಕನ್ ಫ್ರೈ ತಯಾರಿಸುವ ವಿಧಾನ:
ಮೊದಲು ಚಿಕನ್ನ್ನು ಮ್ಯಾರಿನೇಟ್ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಚಿಕನ್ನ್ನು ತೊಳೆದು ಮಿಕ್ಸಿಂಗ್ ಬೌಲ್ಗೆ ಹಾಕಿಕೊಳ್ಳಿ.
ಬಳಿಕ ಉಪ್ಪು, ಮೆಣಸಿನ ಪುಡಿ, ಅರಿಶಿನ, ಮೊಸರು, ಅಲ್ಲಾ (ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ರಸವನ್ನು ಸೇರಿಸಬೇಕಾಗುತ್ತದೆ. ಜೊತೆಗೆ ಎಲ್ಲಾ ಪದಾರ್ಥಗಳು ಮಿಶ್ರಣವಾಗುವಂತೆ ಚೆನ್ನಾಗಿ ಕಲಸಿಕೊಳ್ಳಬೇಕಾಗುತ್ತದೆ. ಬಳಿಕ ಪಾತ್ರೆಯ ಮೇಲೆ ಮುಚ್ಚಳವನ್ನು ಮುಚ್ಚಿ ಕಾಲು ಗಂಟೆ ಹಾಗೆ ಬಿಡಬೇಕಾಗುತ್ತದೆ.
ಈಗ ಅಡುಗೆಗೆ ಅಗತ್ಯವಿರುವ ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಈಗ ಸ್ಟೌ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಬೇಕಾಗುತ್ತದೆ.
ಈ ರೀತಿಯಲ್ಲಿ ಈರುಳ್ಳಿಯನ್ನು ಹುರಿದಾದ ಬಳಿಕ, ಮ್ಯಾರಿನೇಟ್ ಮಾಡಿದ ಚಿಕನ್ನ್ನು ಇದರೊಳಗೆ ಸೇರಿಸಿ. ನಂತರ ಒಂದು ಅಥವಾ ಎರಡು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಒಂದು ಚಮಚದಿಂದ ಫ್ರೈ ಮಾಡಿ.
ನಂತರ ಪ್ಯಾನ್ಅನ್ನು ಮುಚ್ಚಿ ಹಾಗೂ ಕಡಿಮೆ ಉರಿಯಲ್ಲಿ ಬೇಯಿಸಿ, ಮತ್ತು ನಡುವೆ ಮಿಶ್ರಣ ಮಾಡುವಾಗ ಎಣ್ಣೆ ಬೇರ್ಪಡುವವರೆಗೆ ಬೇಯಿಸಬೇಕಾಗುತ್ತದೆ.
ಈ ನಡುವೆ, ಚಿಕನ್ ಫ್ರೈಗೆ ನಿಮ್ಮ ಮನೆಯಲ್ಲಿ ಇರುವ ಮಸಾಲೆಗಳೊಂದಿಗೆ ಮಸಾಲಾ ಪುಡಿಯನ್ನು ತಯಾರಿಸಿ.
ಬಳಿಕ ಒಲೆಯ ಮೇಲೆ ಚಿಕ್ಕ ಕಡಾಯಿ ಇಟ್ಟು ಒಣಮೆಣಸಿಕಾಯಿ, ಕಾಳುಮೆಣಸು, ದಾಲ್ಚಿನ್ನಿ, ಲವಂಗ, ಏಲಕ್ಕಿ, ಕೊತ್ತಂಬರಿ ಸೊಪ್ಪು ಹಾಗೂ ಜೀರಿಗೆ ಹಾಕಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
ಬಳಿಕ ಸ್ವಲ್ಪ ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಈಗ ಒಲೆಯ ಮೇಲೆ ಚಿಕನ್ ಬೆಂದ ನಂತರ ಎಣ್ಣೆ ಮೇಲಕ್ಕೆ ತೇಲುತ್ತದೆ. ಆಗ ಹಸಿಮೆಣಸಿನಕಾಯಿ, ಪುದೀನಾ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳವನ್ನು ಮುಚ್ಚಿ, ಮಧ್ಯದಲ್ಲಿ ನಿಧಾನವಾಗಿ ಬೆರೆಸಿ ಹಾಗೂ ಕಡಿಮೆ ಉರಿಯಲ್ಲಿ ಮತ್ತೆರಡು ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಎರಡು ಚಮಚ ತಯಾರಿಸಿದ ಮಸಾಲೆ ಪುಡಿಯನ್ನು ಹಾಕಿ ಸರಿಯಾಗಿ ಕಲಸಿ.
ಅದಾದ ಬಳಿಕ ಕಡಿಮೆ ಉರಿಯಲ್ಲಿ ಒಂದು ಅಥವಾ ಎರಡು ನಿಮಿಷಗಳ ಕಾಲ ಹುರಿಯಿರಿ. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಜೊತೆಗೆ ಮಿಶ್ರಣ ಮಾಡಿದರೆ ಸಾಕು. ಆಗ ತುಂಬಾ ರುಚಿಯಾದ ಚಿಕನ್ ಫ್ರೈ ರೆಡಿಯಾಗುತ್ತದೆ!