Home Remedies Get Rid Of Mosquitoes:ಸೊಳ್ಳೆಗಳು ಪ್ರತಿಯೊಂದು ಸೀಸನ್ನಲ್ಲಿ ವಿಪರೀತವಾಗಿರುತ್ತವೆ. ಅವುಗಳನ್ನು ಓಡಿಸಲು ಅನೇಕ ಜನರು ವಿವಿಧ ಸೊಳ್ಳೆ ನಿವಾರಕಗಳು ಮತ್ತು ಕಾಯಿಲ್ ಬಳಕೆ ಮಾಡುತ್ತಾರೆ. ಇದರಿಂದ ಸೊಳ್ಳೆಗಳನ್ನು ಮನೆಯಿಂದ ಓಡಿ ಹೋಗುತ್ತವೆ. ಇದರ ಜೊತೆಗೆ ಸೋಳ್ಳೆ ಓಡಿಸಲು ಬಳಕೆ ಮಾಡಿದ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇದರೊಂದಿಗೆ ನೈಸರ್ಗಿಕವಾಗಿ ಸೊಳ್ಳೆಗಳ ಕಾಟ ತಪ್ಪಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕರ್ಪೂರ, ಬೇವಿನ ಎಣ್ಣೆ, ಬಿರಿಯಾನಿ ಎಲೆಗಳು: ಒಂದು ಚಿಕ್ಕ ಬಟ್ಟಲಿನಲ್ಲಿ ಒಂದು ಚಮಚ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಐದರಿಂದ ಆರು ಕರ್ಪೂರದ ಪೀಸ್ಗಳನ್ನು ಸೇರಿಸಿ ಮತ್ತು ಕರಗಿಸಿ. ನಂತರ ಈ ಮಿಶ್ರಣವನ್ನು ಬಿರಿಯಾನಿ ಎಲೆಗಳಿಗೆ ಹಚ್ಚಬೇಕು, ಬಳಿಕ ಈ ಎಲೆಗಳನ್ನು ಸುಡುವುದರಿಂದ ಬರುವ ಹೊಗೆಯು ಸೊಳ್ಳೆಗಳನ್ನು ಮನೆಯಿಂದ ಹೊರಗೆ ಓಡುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಬೇವಿನ ಎಣ್ಣೆ, ಕರ್ಪೂರದಿಂದ ದೀಪ:ಸ್ವಲ್ಪ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರ ಪೀಸ್ಗಳನ್ನು ಹಚ್ಚಬೇಕು. ಇದನ್ನು ಒಲೆಯ ಮೇಲೆ ಹಾಕಿ ಕರಗಿಸಿ. ಆ ಎಣ್ಣೆಯನ್ನು ಪಣತಿಗೆ ಹಾಕಿ ಸುರಿಯಿರಿ, ಬತ್ತಿಯನ್ನು ಹಾಕಿ ದೀಪವನ್ನು ಬೆಳಗಿಸಿ. ಬತ್ತಿಯನ್ನು ಹೊತ್ತಿಸುವುದರಿಂದ ಈ ಹೊಗೆ ತಾಳಲಾರದೇ ಅಲ್ಲಿಂದ ಸೊಳ್ಳೆಗಳು ಓಡಿ ಹೋಗುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಕರ್ಪೂರ, ಬೇವಿನ ಸೊಪ್ಪಿನ ಹೊಗೆ: ನಿತ್ಯ ಸೊಳ್ಳೆ ಕಾಯಿಲ್‌ಗಳನ್ನು ಹಚ್ಚುವ ಬದಲು, ಕಿಟಕಿ ಬಾಗಿಲು ಮುಚ್ಚಿ 15 ನಿಮಿಷಗಳ ಕಾಲ ಕರ್ಪೂರ ಮತ್ತು ಬೇವಿನ ಸೊಪ್ಪನ್ನು ಸುಡಬೇಕಾಗುತ್ತದೆ. ಬೇರೆ ದಾರಿ ತೋಚದೇ ಸೊಳ್ಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.