ಕರ್ನಾಟಕ

karnataka

ETV Bharat / lifestyle

ಮಹಾರಾಷ್ಟ್ರ ಶೈಲಿಯ ಹಸಿಮೆಣಸಿನಕಾಯಿ ಚಟ್ನಿ: ಬಿಸಿ ಅನ್ನ, ರೋಟಿ ಜೊತೆಗೆ ಒಳ್ಳೆಯ ಕಾಂಬಿನೇಷನ್ - GREEN CHILLI CHUTNEY RECIPE

Green Chilli Chutney: ಹಸಿಮೆಣಸಿನಕಾಯಿ ಚಟ್ನಿ ಮಾಡುವುದು ಹೇಗೆ ಗೊತ್ತೇ? ಇದನ್ನು ಬಿಸಿ ಅನ್ನ ಹಾಗೂ ರೋಟಿ ಜೊತೆಗೆ ಸವಿದರೆ ಆ ಖುಷಿಯೇ ಬೇರೆ.

How to Make Green Chilli Chutney  Green Chilli Chutney Recipe  super tasty Green Chilli Chutney
ಸಾಂದರ್ಭಿಕ ಚಿತ್ರ (ETV Bharat)

By ETV Bharat Lifestyle Team

Published : Dec 19, 2024, 8:00 PM IST

Green Chilli Chutney:ಕೆಲವರಿಗೆ ಪಲ್ಯಕ್ಕಿಂತ ಚಟ್ನಿ ತುಂಬಾ ಹಿಡಿಸುತ್ತದೆ. ಅಂಥವರಿಗಾಗಿ ಸೂಪರ್ ಟೇಸ್ಟಿ ಗ್ರೀನ್ ರೆಸಿಪಿಯನ್ನು ನಾವು ತಂದಿದ್ದೇವೆ. ಅದುವೇ ಮಹಾರಾಷ್ಟ್ರ ಶೈಲಿಯ ಹಸಿಮೆಣಸಿನಕಾಯಿ ಚಟ್ನಿ.

ಪ್ರತಿನಿತ್ಯ ಪಲ್ಯ ಮತ್ತು ಉಪ್ಪಿನಕಾಯಿ ತಿಂದು ಬೇಜಾರಾಗಿದ್ದರೆ, ಈ ಹಸಿಮೆಣಸಿನಕಾಯಿ ಚಟ್ನಿಯನ್ನೊಮ್ಮೆ ಟ್ರೈ ಮಾಡಿ ನೋಡಿ. ಈ ಚಟ್ನಿಯನ್ನು ಬಿಸಿ ಅನ್ನ ಹಾಗೂ ರೊಟ್ಟಿಯೊಂದಿಗೆ ಸೇವಿಸಿದರೆ ರುಚಿ ಅದ್ಭುತವಾಗಿರುತ್ತದೆ.

ಕೆಲವೇ ನಿಮಷಗಳಲ್ಲಿ ಈ ರೆಸಿಪಿಯನ್ನು ಬಹಳ ಸುಲಭವಾಗಿ ಮಾಡಬಹುದು. ಹಸಿಮೆಣಸಿನಕಾಯಿ ಚಟ್ನಿಗೆ ಬೇಕಾದ ಪದಾರ್ಥಗಳೇನು? ತಯಾರಿಸುವುದು ವಿಧಾನ ಹೇಗೆ ಎಂಬುದನ್ನು ಕಲಿಯೋಣ.

ಚಟ್ನಿ ರೆಸಿಪಿಗೆ ಬೇಕಾಗುವ ಪದಾರ್ಥಗಳೇನು?:

  • ಬಜ್ಜಿ ತಯಾರಿಸುವಂತಹ ಹಸಿಮೆಣಸಿನಕಾಯಿ - 8
  • ಚಿಕ್ಕ ಮೆಣಸಿನಕಾಯಿ - 50 ಗ್ರಾಂ (ಮಧ್ಯಮ ಖಾರವಿರುವ)
  • ಜೀರಿಗೆ - 1 ಟೀಸ್ಪೂನ್
  • ಬೆಳ್ಳುಳ್ಳಿ ಎಸಳು - 25 (ಸಿಪ್ಪೆ ಸುಲಿದ)
  • ಉಪ್ಪು - ರುಚಿಗೆ ತಕ್ಕಷ್ಟು
  • ಅಡುಗೆ ಎಣ್ಣೆ- ಸ್ವಲ್ಪ
  • ಶೇಂಗಾ - ಕಾಲು ಕಪ್
  • ಕೊತ್ತಂಬರಿ ಸೊಪ್ಪು ಪುಡಿ - ಸ್ವಲ್ಪ

ಚಟ್ನಿ ಮಾಡುವುದು ಹೇಗೆ?:

  • ಇದಕ್ಕಾಗಿ ಮೊದಲು ಬಜ್ಜಿ ತಯಾರಿಸುವಂತಹ ಹಸಿಮೆಣಸಿನಕಾಯಿ ತುಂಬನ್ನು ತೆಗೆದು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ನಂತರ ಒಂದು ಇಂಚು ಗಾತ್ರದ ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.
  • ಚಿಕ್ಕ ಮೆಣಸಿನಕಾಯಿ ತುಂಬನ್ನು ತೆಗೆದು ಸ್ವಚ್ಛವಾಗಿ ತೊಳೆದುಕೊಳ್ಳಿ. ಇವುಗಳನ್ನೂ ಎರಡು ಎರಡು ಪೀಸ್​​ ಆಗಿ ಕತ್ತರಿಸಿ.
  • ಈಗ ಒಲೆಯ ಆನ್​ ಮಾಡಿ, ಬಜ್ಜಿ ತಯಾರಿಸುವಂತಹ ಹಸಿಮೆಣಸಿನಕಾಯಿ ಹಾಗೂ ಸಣ್ಣ ಮೆಣಸಿನಕಾಯಿ ತುಂಡುಗಳನ್ನು ಹಾಕಿ ಹುರಿದುಕೊಳ್ಳಬೇಕಾಗುತ್ತದೆ.
  • ಹೀಗೆ ಮೆಣಸಿನಕಾಯಿಯಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವವರೆಗೆ ಫ್ರೈ ಮಾಡಿಕೊಳ್ಳಿ.
  • ಮೆಣಸಿನಕಾಯಿ ಬಣ್ಣ ಬದಲಾದಾಗ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ.
  • ಅದಾ ನಂತರ ಜೀರಿಗೆ, ಬೆಳ್ಳುಳ್ಳಿ ಎಸಳು ಹಾಗೂ ಶೇಂಗಾ ಹಾಕಿ ಹುರಿಯಿರಿ. ಒಲೆಯ ಮೇಲೆ ಮಧ್ಯಮದ ಉರಿಯಲ್ಲಿ ಫ್ರೈ ಮಾಡಿ.
  • ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
  • ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿಕೊಳ್ಳಿ.
  • ಈಗ ಇಡೀ ಮಿಶ್ರಣವನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಪುಡಿಮಾಡಿದ ನಂತರ ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
  • ರುಬ್ಬುವಾಗ ನೀರು ಸುರಿಯಬೇಡಿ. ನೀವು ಮಿಕ್ಸಿ ಜಾರ್‌ನಲ್ಲಿ ರುಬ್ಬುತ್ತಿದ್ದರೆ, ಅದನ್ನು ಒರಟಾಗಿ ರುಬ್ಬಿಕೊಳ್ಳಿ.
  • ಈ ರೀತಿ ಸರಳವಾಗಿ ಮಾಡಿದರೆ ಸಾಕು, ಮಹಾರಾಷ್ಟ್ರ ಶೈಲಿಯ ಹಸಿ ಮೆಣಸಿನಕಾಯಿ ತುಂಬಾ ರುಚಿಕರವಾಗಿ ಮಾಡಬಹುದು.
  • ನಿಮಗೆ ಇಷ್ಟವಾದಲ್ಲಿ ಒಮ್ಮೆ ಈ ರೆಸಿಪಿಯನ್ನು ಟ್ರೈ ಮಾಡಿ.

ಇವುಗಳನ್ನೂ ಓದಿ :

ABOUT THE AUTHOR

...view details