Dasara special Chakli Recipe: ದಸರಾ ಮತ್ತು ದೀಪಾವಳಿಯ ಹಬ್ಬದಲ್ಲಿ ವಿವಿಧ ಬಗೆಯ ಕುರುಕಲು ತಿಂಡಿಗಳನ್ನು ರೆಡಿ ಮಾಡಿ ಇಡುತ್ತಾರೆ. ಹಬ್ಬದ ಸಮಯದಲ್ಲಿ ಮಾಡುವ ಪ್ರಮುಖ ತಿಂಡಿಗಳಲ್ಲಿ ಅಕ್ಕಿಯಿಂದ ಮಾಡಿದ ಬಟರ್ ಚಕ್ಲಿ ಒಂದು. ಹಬ್ಬ ಹರಿದಿನಗಳಲ್ಲದೆ, ಶುಭ ಸಮಾರಂಭಗಳಲ್ಲಿ ಮತ್ತು ಮನೆಯಲ್ಲಿ ತಿನ್ನಲು ಏನೂ ಇಲ್ಲದಿದ್ದಾಗ ಈ ಚಕ್ಲಿ ತಯಾರಿಸುತ್ತಾರೆ. ಅಕ್ಕಿ ಹಿಟ್ಟಿನಿಂದ ಚಕ್ಲಿಗಳನ್ನು ತಯಾರಿಸಿದಾಗ ಅವು ಗಟ್ಟಿಯಾಗಿರುತ್ತವೆ ಎಂದು ಕೆಲವರು ದೂರುತ್ತಾರೆ. ಅಂತಹ ಜನರು ಈ ಟಿಪ್ಸ್ಗಳನ್ನು ಅನುಸರಿಸಿ ಚಕ್ಲಿ ತಯಾರು ಮಾಡಿದರೆ, ಇವುಗಳು ಗರಿಗರಿಯಾಗಿರುತ್ತವೆ. ಮತ್ತೇಕೆ ತಡ ಈಗಲೇ ಸೂಪರ್ ಟೇಸ್ಟಿಯಾದ ಅಕ್ಕಿ ಹಿಟ್ಟಿನ ಚಕ್ಲಿಗಳನ್ನು ಹೇಗೆ ಮಾಡಬೇಕೆಂದು ಕಲಿಯೋಣ.
ಚಕ್ಲಿ ತಯಾರಿಸಲು ಬೇಕಾಗುವ ಪದಾರ್ಥಗಳೇನು?:
- ಕಾಲು (1/4 ಪ್ರಮಾಣ) ಕಪ್ ಕಡಲೆ
- ಕಾಲು ಕಪ್ ಉದ್ದಿನ ಬೇಳೆ
- ಕಾಲು ಕಪ್ ಹೆಸರು ಬೇಳೆ
- ನಾಲ್ಕು ಕಪ್ ಅಕ್ಕಿ ಹಿಟ್ಟು
- ಒಂದು ಚಮಚ ಅಜವಾನ್
- ಎಳ್ಳು 3 ಟೀಸ್ಪೂನ್
- ರುಚಿಗೆ ತಕ್ಕಷ್ಟು ಖಾರದ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಕಾಲು ಕಪ್ ಬೆಣ್ಣೆ