How to make Brinjal chutney: ಬದನೆಕಾಯಿಯಿಂದ ಒಂದೇ ಬಗೆಯ ಪಲ್ಯ ತಿಂದು ಬೇಸರವಾಗಿದೆಯೇ? ಹೀಗಾಗಿ ನಾವು ನಿಮಗಾಗಿ ಹೊಸ ರೆಸಿಪಿಯೊಂದನ್ನು ತಂದಿದ್ದೇವೆ. ಭರ್ಜರಿ ರುಚಿಯ ಬದನೆಕಾಯಿ ಚಟ್ನಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.
How to make Brinjal chutney at Home:ಬದನೆಕಾಯಿ ಪಲ್ಯ ಅಂದ್ರೆ ಬಹುತೇಕರು ಇಷ್ಟಪಟ್ಟು ಸೇವಿಸುತ್ತಾರೆ. ಈಗಾಗಲೇ ನೀವು ವಿವಿಧ ಬಗೆಯ ಚಟ್ನಿಗಳನ್ನು ಸಿದ್ಧಪಡಿಸಿರಬಹುದು. ಇದೀಗ ನಾವು ನಿಮಗಾಗಿ 'ಬದನೆಕಾಯಿ ಚಟ್ನಿ' ರೆಸಿಪಿಯನ್ನು ತಂದ್ದಿದ್ದೇವೆ. ನೀವು ಒಮ್ಮೆಯಾದರೂ ಈ ರೆಸಿಪಿಯನ್ನು ಪ್ರಯತ್ನಿಸಿ. ಇದರ ರುಚಿಯು ಕೂಡ ತುಂಬಾ ಚೆನ್ನಾಗಿರುತ್ತದೆ.
ಒಮ್ಮೆ ರುಚಿ ನೋಡಿದರೆ ಸಾಕು ಪದೇ ಪದೆ ತಿನ್ನಬೇಕು ಅನಿಸುತ್ತದೆ. ಈ ಚಟ್ನಿಯು ಹುಳಿ ಹಾಗೂ ಖಾರವನ್ನು ಒಳಗೊಂಡಿದೆ. ಈ ರೆಸಿಪಿಯು ಗ್ರಾಮೀಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಬಿಸಿ ಅನ್ನದೊಂದಿದೆ ಬದನೆಕಾಯಿ ಚಟ್ನಿ ಸೇವಿಸಿದರೆ ರುಚಿ ಅದ್ಭುತವಾಗಿರುತ್ತದೆ. ಸೂಪರ್ ರುಚಿಯ ರೆಸಿಪಿಗೆ ಬೇಕಾಗುವ ಪದಾರ್ಥಗಳೇನು ಹಾಗೂ ಸಿದ್ಧಪಡಿಸುವುದು ಹೇಗೆ ಎಂಬುದನ್ನು ನೋಡೋಣ.
ಬದನೆಕಾಯಿ ಚಟ್ನಿಗೆ ಬೇಕಾಗಿರುವ ಪದಾರ್ಥಗಳೇನು?:
ಬಿಳಿ ಬದನೆಕಾಯಿ - 4
ಈರುಳ್ಳಿ - 1
ಹಸಿಮೆಣಸಿನಕಾಯಿ - 2
ಕೊತ್ತಂಬರಿ ಸೊಪ್ಪು - ಸ್ವಲ್ವ
ಶುಂಠಿ - ಅರ್ಧ ಇಂಚಿನ ಪೀಸ್
ಉಪ್ಪು - ರುಚಿಗೆ ಬೇಕಾಗುವಷ್ಟು
ಅರಿಶಿನ - ಅರ್ಧ ಟೀಸ್ಪೂನ್
ಹುಣಸೆ ಹಣ್ಣು - ನಿಂಬೆ ರಸ
ಪಡಿ ಮಾಡಿದ ಬೆಲ್ಲ - 2 ಟೀಸ್ಪೂನ್
ಒಗ್ಗರಣೆಗೆ ಬೇಕಾದ ಸಾಮಗ್ರಿಗಳು:
ಎಣ್ಣೆ - 2 ಟೀಸ್ಪೂನ್
ಸಾಸಿವೆ - ಅರ್ಧ ಟೀಸ್ಪೂನ್
ಮೆಂತ್ಯ - ಅರ್ಧ ಟೀಸ್ಪೂನ್
ಕಡಲೆಕಾಯಿ - 1 ಟೀಸ್ಪೂನ್
ಒಣಮೆಣಸಿನಕಾಯಿ - 2
ಬೆಳ್ಳುಳ್ಳಿ ಎಸಳು - 6
ಕರಿಬೇವು - 2 ಎಲೆಗಳು
ಇಂಗು - ಒಂದು ಚಿಟಿಕೆ
ಬದನೆಕಾಯಿ ಚಟ್ನಿ ಸಿದ್ಧಪಡಿಸುವ ವಿಧಾನ:
ಮೊದಲು ಹುಣಸೆಹಣ್ಣನ್ನು ತೊಳೆದು ಸಣ್ಣ ಬಟ್ಟಲಿನಲ್ಲಿ ನೆನೆಸಿ ಇಡಬೇಕು. ನೀವು ಮಧ್ಯಮ ಗಾತ್ರದ ಬಿಳಿ ಬದನೆಕಾಯಿ ತೆಗೆದುಕೊಳ್ಳಿ. ಅವುಗಳಿಗೆ ಸ್ವಲ್ಪ ಎಣ್ಣೆ ಹಚ್ಚಬೇಕಾಗುತ್ತದೆ.
ಬಳಿಕ, ಒಲೆಯ ಮೇಲೆ ಗ್ರಿಲ್ ಇಡಬೇಕು. ಅದರ ಮೇಲೆ ಎಣ್ಣೆ ಸವರಿದ ಬದನೆಕಾಯಿಗಳನ್ನು ಇಡಿ. ಅವುಗಳನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಇವು ತೊಗಟೆ ಕಪ್ಪಾಗುವವರೆಗೆ ತಿರುಗಿಸುತ್ತಾ ಫ್ರೈ ಮಾಡಬೇಕು.
ಹುರಿದ ಬಳಿಕ ಇವೆಲ್ಲವುಗಳನ್ನು ಒಂದು ಪ್ಲೇಟ್ಯಲ್ಲಿ ತೆಗೆದುಕೊಂಡು ಸ್ವಲ್ಪ ನೀರು ಸಿಂಪಡಿಸಿ. ಬದನೆಕಾಯಿಗಳ ಮೇಲಿನ ಕಪ್ಪಾದ, ಸುಟ್ಟ ತೊಗಟೆಯನ್ನು ತೆಗೆದುಹಾಕಬೇಕು.
ಅವುಗಳನ್ನು ಫೋರ್ಕ್ ಇಲ್ಲವೇ ಚಮಚದಿಂದ ನಿಧಾನವಾಗಿ ಮ್ಯಾಶ್ ಮಾಡಿಕೊಂಡು ಪಕ್ಕಕ್ಕೆ ಇಡಿ. ಅಡುಗೆಗೆ ಬೇಕಾದ ಈರುಳ್ಳಿ ಹಾಗೂ ಹಸಿ ಮೆಣಸಿನಕಾಯಿಗಳನ್ನು ಸಣ್ಣಗೆ ಕಟ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ.
ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರೊಳಗೆ ಅವೆಲ್ಲವನ್ನೂ ಹುರಿದ ಬದನೆಕಾಯಿ, ಸಣ್ಣಗೆ ಕಟ್ ಮಾಡಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿ ಪೀಸ್ಗಳು, ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
ಈ ಹಿಂದೆ ನೆನೆಸಿ ಇಟ್ಟಿರುವ ಹುಣಸೆಹಣ್ಣಿನಿಂದ ರಸ ಹೊರತೆಗೆದು ಸಿದ್ಧವಾಗಿ ಇಟ್ಟುಕೊಳ್ಳಿ.
ಇದೀಗ ಚಟ್ನಿಗಾಗಿ ಒಗ್ಗರಣೆಗೆ ನೀಡಬೇಕಾಗುತ್ತದೆ. ಈಗ ಒಲೆಯ ಮೇಲೆ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ಬಳಿಕ ಸಾಸಿವೆ, ಮೆಂತ್ಯ, ಕಡಲೆ, ಒಣ ಮೆಣಸಿನಕಾಯಿ ಹಾಕಿ ಕೆಂಪಗಾಗುವವರೆಗೆ ಫ್ರೈ ಮಾಡಿ.
ಬೆಂದ ನಂತರ ಜಜ್ಜಿರುವ ಬೆಳ್ಳುಳ್ಳಿ ಎಸಳು, ಕರಿಬೇವು ಮತ್ತು ಇಂಗು ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿ. ಬಳಿಕ ಒಲೆಯಿಂದ ಹೊರಗೆ ತೆಗೆಯಿರಿ.
ಈಗ ಒಂದು ಪ್ಯಾನ್‌ನಲ್ಲಿ ಹುಣಸೆ ರಸ, ಬದನೆಕಾಯಿ ಮಿಶ್ರಣ ಮತ್ತು ತುರಿದ ಬೆಲ್ಲವನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ. ಇದೀಗ ರುಚಿಕರವಾದ ಬದನೆಕಾಯಿ ಚಟ್ನಿ ಸಿದ್ಧ!