ಕರ್ನಾಟಕ

karnataka

ETV Bharat / lifestyle

ಫಟ್ ಅಂತ ಬೆಂಡೆಕಾಯಿ ಚಟ್ನಿ ಮಾಡೋದು ಹೇಗೆ? ಅಬ್ಬಾ! ಅನ್ನಿಸುವಂಥ ರುಚಿ - HOW TO MAKE LADIES FINGER CHUTNEY

Ladies Finger Chutney: ಫಟಾಫಟ್ ಅಂತ ಕೇವಲ ಹತ್ತೇ ನಿಮಿಷದಲ್ಲಿ ಬೆಂಡೆಕಾಯಿ ಚಟ್ನಿ ಮಾಡಬಹುದು. ರುಚಿಯಂತೂ ಮನೆ ಮಂದಿಯೆಲ್ಲರಿಗೂ ಹಿಡಿಸುತ್ತದೆ.

Ladies Finger chutney  Ladies Finger chutney Recipe  ಬೆಂಡೆಕಾಯಿ ಚಟ್ನಿ
ಬೆಂಡೆಕಾಯಿ ಚಟ್ನಿ (ETV Bharat)

By ETV Bharat Lifestyle Team

Published : Feb 24, 2025, 5:46 PM IST

How To Make Ladies Finger Chutney:ಸಾಮಾನ್ಯವಾಗಿ, ಮನೆಯಲ್ಲಿ ವಾರಕ್ಕೆ ಒಂದೋ, ಎರಡೋ ಸಲವೋ ಬೆಂಡೆಕಾಯಿಯಿಂದ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ. ಕೆಲವರು ಹುರಿದ ಮತ್ತು ಬೇಯಿಸಿದ ಬೆಂಡೆಕಾಯಿಯನ್ನು ಊಟದೊಂದಿಗೆ ಚಪ್ಪರಿಸಿ ತಿನ್ನುತ್ತಾರೆ.

ಮಕ್ಕಳಿಗಂತೂ ಬೆಂಡೆಕಾಯಿ ಫ್ರೈಸ್ ತುಂಬಾ ಇಷ್ಟ. ಆದ್ರೆ, ನೀವು ಎಂದಾದರೂ ಬೆಂಡೆಕಾಯಿ ಚಟ್ನಿ ತಿಂದಿದ್ದೀರಾ? ಇದನ್ನು ಪ್ರಯತ್ನಿಸಿದ್ದೀರಾ? ಇಲ್ಲ ಎಂದಾದರೆ, ಒಮ್ಮೆ ಟ್ರೈ ಮಾಡಿ ನೋಡಿ. ಇದು ಅನ್ನ ಮತ್ತು ಚಪಾತಿಯೊಂದಿಗೆ ಸಖತ್​ ಕಾಂಬಿನೇಷನ್. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬನ್ನಿ ಚಟ್ನಿಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ಅರಿತುಕೊಳ್ಳೋಣ.

ಬೆಂಡೆಕಾಯಿ ಚಟ್ನಿಗೆ ಅಗತ್ಯವಿರುವ ಪದಾರ್ಥಗಳು:

  • ಎಣ್ಣೆ - 2 ಚಮಚ
  • ಬೆಂಡೆಕಾಯಿ - 10
  • ಅರಿಶಿನ - ಕಾಲು ಟೀಸ್ಪೂನ್​
  • ಟೊಮೆಟೊ - 3
  • ಹಸಿ ಮೆಣಸಿನಕಾಯಿ - 12
  • ನೀರು - 1/3 ಕಪ್
  • ಹುಣಸೆಹಣ್ಣು - ಒಂದು ಚಿಕ್ಕ ನಿಂಬೆಹಣ್ಣಿನ ಗಾತ್ರ
  • ಉಪ್ಪು - ರುಚಿಗೆ ತಕ್ಕಷ್ಟು
  • ಬೆಳ್ಳುಳ್ಳಿ ಎಸಳು - 4
  • ಈರುಳ್ಳಿ - 1
  • ಕೊತ್ತಂಬರಿ ಸೊಪ್ಪು - ಸ್ವಲ್ಪ

ಬೆಂಡೆಕಾಯಿ ಚಟ್ನಿ ಸಿದ್ಧಪಡಿಸುವ ವಿಧಾನ:

  • ಎಲ್ಲಾ ಬೆಂಡೆಕಾಯಿಯನ್ನು ಸ್ವಚ್ಛವಾಗಿ ತೊಳೆದುಕೊಂಡು ಒರೆಸಿಕೊಳ್ಳಬೇಕು. ತುದಿಗಳನ್ನು ಕತ್ತರಿಸಿ. ನಂತರ ಅರ್ಧದಷ್ಟು ಕತ್ತರಿಸಿಕೊಳ್ಳಿ. ಟೊಮೆಟೊಗಳನ್ನು ಸಹ ನಾಲ್ಕು ಪೀಸ್​ಗಳಾಗಿ ಕತ್ತರಿಸಬೇಕು. ಹಸಿಮೆಣಸಿನಕಾಯಿ ತೆಗೆದುಕೊಂಡು ಕತ್ತರಿಸಿ.
  • ಒಲೆ ಆನ್​ ಮಾಡಿ ಮೇಲೆ ಪ್ಯಾನ್ ಇಡಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಬಳಿಕ ಬೆಂಡೆಕಾಯಿ ಪೀಸ್​ಗಳು ಮತ್ತು ಅರಿಶಿನ ಸೇರಿಸಿ ಫ್ರೈ ಮಾಡಿ. ಬೆಂಡೆಕಾಯಿಯಲ್ಲಿರುವ ಅಂಟು ಕರಗುವವರೆಗೆ ಚೆನ್ನಾಗಿ ಫ್ರೈ ಮಾಡಿ. ನಂತರ, ಅವುಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.
  • ಇದೀಗ ಅದೇ ಪ್ಯಾನ್‌ಗೆ ಟೊಮೆಟೊ, ಹಸಿಮೆಣಸಿನಕಾಯಿ, ನೀರು ಮತ್ತು ಹುಣಸೆಹಣ್ಣು ಸೇರಿಸಿ, ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
  • ಟೊಮೆಟೊ ಹಾಗೂ ಹಸಿಮೆಣಸಿನಕಾಯಿಗಳು ಬೆಂದ ಬಳಿಕ ಹಾಗೂ ನೀರು ಆವಿಯಾದ ನಂತರ ಒಲೆ ಆಫ್ ಮಾಡಿ ಪಕ್ಕಕ್ಕಿಡಿ.
  • ಹುರಿದ ಎಲ್ಲ ಬೆಂಡೆಕಾಯಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ನಾಲ್ಕು ಹೋಳುಗಳಾಗಿ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಇಲ್ಲಿ ಈರುಳ್ಳಿಯನ್ನು ನುಣ್ಣಗೆ ರುಬ್ಬುವ ಅಗತ್ಯವಿಲ್ಲ. ತಿನ್ನುವಾಗ, ಈರುಳ್ಳಿ ಹೋಳುಗಳು ನಿಮ್ಮ ಬಾಯಿಗೆ ತಾಗಬೇಕು. ಆ ರೀತಿಯಾಗಿ ರುಬ್ಬಿಕೊಳ್ಳಬೇಕಾಗುತ್ತದೆ.
  • ಈರುಳ್ಳಿ ರುಬ್ಬಿದ ನಂತರ, ಬೇಯಿಸಿದ ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಮಿಶ್ರಣವನ್ನು ಸೇರಿಸಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೆರೆಸಿದ ಬಳಿಕ ಅದನ್ನು ಒಂದು ತಟ್ಟೆಯಲ್ಲಿ ತೆಗೆದುಕೊಳ್ಳಿ.
  • ಅದಕ್ಕೆ ಉಪ್ಪು ಸಾಕಾಗಿದ್ದರೆ ಅದನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ. ಇದೀಗ ರುಚಿಕರವಾದ ಬೆಂಡೆಕಾಯಿ ಚಟ್ನಿ ಸವಿಯಲು ಸಿದ್ಧವಾಗಿದೆ.
  • ಆದರೆ, ನಿಮ್ಮ ಬಳಿ ಗ್ರೈಂಡರ್ ಇಲ್ಲದಿದ್ದರೆ, ನೀವು ಈ ಚಟ್ನಿಯನ್ನು ಮಿಕ್ಸರ್‌ನಲ್ಲಿಯೂ ರುಬ್ಬಬಹುದು. ಇದಕ್ಕಾಗಿ, ಉಪ್ಪು, ಬೆಳ್ಳುಳ್ಳಿ, ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಮಿಶ್ರಣವನ್ನು ಮಿಕ್ಸರ್ ಜಾರ್‌ಗೆ ಸೇರಿಸಿ ಒಮ್ಮೆ ರುಬ್ಬಿಕೊಳ್ಳಿ.
  • ಆದರೆ, ನಿಮ್ಮ ಬಳಿ ಗ್ರೈಂಡರ್ ಇಲ್ಲದಿದ್ದರೆ ನೀವು ಈ ಚಟ್ನಿಯನ್ನು ಮಿಕ್ಸರ್​ನಲ್ಲಿಯೂ ರುಬ್ಬಬಹುದು. ಇದಕ್ಕಾಗಿ ಉಪ್ಪು, ಬೆಳ್ಳುಳ್ಳಿ, ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಮಿಶ್ರಣವನ್ನು ಮಿಕ್ಸರ್ ಜಾರ್‌ಗೆ ಸೇರಿಸಿ ಒಮ್ಮೆ ರುಬ್ಬಿಕೊಳ್ಳಿ.
  • ನಂತರ ಬೆಂಡೆಕಾಯಿಯನ್ನು ಸೇರಿಸಿ ಮತ್ತೆ ರುಬ್ಬಿಕೊಳ್ಳಿ. ಕೊನೆಯಲ್ಲಿ ಈರುಳ್ಳಿ ಸೇರಿಸಿ ಮತ್ತು ಒಂದೆರಡು ಬಾರಿ ಹುರಿಯಿರಿ. ಈ ಚಟ್ನಿಗೆ ಪ್ರತ್ಯೇಕ ಒಗ್ಗರಣೆ ನೀಡುವ ಅಗತ್ಯವಿಲ್ಲ. ಇದನ್ನು ಬಿಸಿ ಅನ್ನದೊಂದಿಗೆ ಸೇವಿಸಿದರೆ ಸೂಪರ್​ ಆಗಿರುತ್ತದೆ.

ಇವುಗಳನ್ನೂ ಓದಿ:

ABOUT THE AUTHOR

...view details