ಕರ್ನಾಟಕ

karnataka

ETV Bharat / international

'ನಮಗೆ ಬೆಂಬಲ ನೀಡಿ, ನೀಡದಿರಿ ನಾವು ಯುದ್ಧ ಗೆದ್ದು ನಾಗರಿಕತೆಯನ್ನು ರಕ್ಷಿಸುತ್ತೇವೆ': ಇಸ್ರೇಲ್ ಪ್ರಧಾನಿ ನೆತನ್ಯಾಹು - Israel PM Netanyahu

ಹಮಾಸ್, ಹಿಜ್ಬುಲ್ಲಾ, ಹೌತಿ ಉಗ್ರರು ಹಾಗು ಇರಾನ್ ವಿರುದ್ಧ ಇಸ್ರೇಲ್ ಸಂಘರ್ಷ ಮುಂದುವರೆದಿದೆ. ಈ ನಡುವೆ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಬೇಕು ಎಂದು ಫ್ರಾನ್ಸ್‌ ಅಧ್ಯಕ್ಷ ಕರೆ ನೀಡಿದ್ದು ಇಸ್ರೇಲ್ ಅನ್ನು ಕೆರಳಿಸಿದೆ.

By ANI

Published : 4 hours ago

ಇಸ್ರೇಲ್ ಪ್ರಧಾನಿ ನೆತನ್ಯಾಹು
ಇಸ್ರೇಲ್ ಪ್ರಧಾನಿ ನೆತನ್ಯಾಹು (ANI)

ಟೆಲ್ ಅವಿವ್(ಇಸ್ರೇಲ್):ಇರಾನ್ ನೇತೃತ್ವದಲ್ಲಿ ನಮ್ಮ ವಿರುದ್ಧ ನಡೆಯುತ್ತಿರುವ ಅನಾಗರಿಕ ಮತ್ತು ಪೈಶಾಚಿಕ ಕೃತ್ಯಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಹೀಗಾಗಿ, ಜಗತ್ತಿನ ಎಲ್ಲ ನಾಗರಿಕ ದೇಶಗಳು ನಮ್ಮ ಪರ ನಿಲ್ಲಬೇಕು ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ಹೇರಬೇಕೆಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್ ಕರೆ ನೀಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, "ನಿಮಗೆ ನಾಚಿಕೆಯಾಗಬೇಕು" ಎಂದು ಗುಡುಗಿದರು.

ಶನಿವಾರ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ನೆತನ್ಯಾಹು, ಉಗ್ರರು ಒಂದಾಗಿದ್ದಾರೆ. ಆದರೆ, ಈ ಉಗ್ರರ ಜಾಲವನ್ನು ಮಟ್ಟ ಹಾಕಬೇಕಿರುವ ದೇಶಗಳೇ ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸಲು ಕರೆ ನೀಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಸ್ರೇಲ್‌- ಹಿಜ್ಬುಲ್ಲಾ ಸಂಘರ್ಷ (AP)

ಹಿಜ್ಬುಲ್ಲಾ, ಹೌತಿ, ಹಮಾಸ್ ಹಾಗು ತನ್ನ ಇತರೆ ನಕಲಿ ಉಗ್ರವಾದಿ ಗುಂಪುಗಳ ಮೇಲೆ ಇರಾನ್ ಶಸ್ತ್ರಾಸ್ತ್ರ ಹೇರುವುದೇ? ಖಂಡಿತವಾಗಿಯೂ ಇಲ್ಲ. ಇಂಥವರನ್ನು ಮಟ್ಟ ಹಾಕುವ ಬದಲು ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕರೆ ನೀಡುವುದು ನಮಗೆ ಮಾಡುತ್ತಿರುವ ಅಗೌರವ ಎಂದು ಅವರು ಬಣ್ಣಿಸಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್ (AP)

"ನಾವು 7 ಕಡೆಗಳಲ್ಲಿ ನಾಗರಿಕ ವಿರೋಧಿ ದುಷ್ಟಶಕ್ತಿಗಳ ವಿರುದ್ಧ ಹೋರಾಡುತ್ತಿದ್ದೇವೆ. ಗಾಜಾದಲ್ಲಿ ಹಮಾಸ್ ಉಗ್ರರನ್ನು ಮಟ್ಟ ಹಾಕುತ್ತಿದ್ದೇವೆ. ಇವರು ಕಳೆದ ವರ್ಷದ ಅಕ್ಟೋಬರ್ 7ರಂದು ನಮ್ಮ ಜನರ ಸಾಮೂಹಿಕ ಹತ್ಯೆ, ಅತ್ಯಾಚಾರ, ಶಿರಚ್ಚೇದನ ಮತ್ತು ಅನೇಕರನ್ನು ಸುಟ್ಟು ಹಾಕಿದ್ದಾರೆ. ಇನ್ನೊಂದೆಡೆ, ಲೆಬನಾನ್‌ನಲ್ಲಿ ಹಿಜ್ಬುಲ್ಲಾ. ಇದು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಶಸ್ತ್ರಾಸ್ತ್ರ ಹೊಂದಿರುವ ಭಯೋತ್ಪಾದಕ ಸಂಘಟನೆ. ನಮ್ಮ ದೇಶದ ಉತ್ತರದ ಮೇಲೆ ಅಕ್ಟೋಬರ್ 7ಕ್ಕಿಂತಲೂ ಭೀಕರ ಪ್ರಮಾಣದಲ್ಲಿ ದಾಳಿ ನಡೆಸಲು ಇದು ಹವಣಿಸುತ್ತಿದೆ. ನಮ್ಮ ನಮ್ಮ ಪಟ್ಟಣ, ನಗರಗಳ ಮೇಲೆ ಒಂದು ವರ್ಷ ರಾಕೆಟ್ ದಾಳಿ ನಡೆಸಿದವರು ಇವರು. ಇನ್ನು, ಯೆಮೆನ್‌ನಲ್ಲಿ ಹೌತಿಗಳ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ಇರಾಕ್ ಮತ್ತು ಸಿರಿಯಾದಲ್ಲಿ ಶಿಯಾ ಉಗ್ರರು ನಮ್ಮ ವಿರುದ್ಧ ಜಂಟಿಯಾಗಿ ನೂರಾರು ಡ್ರೋನ್‌ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ನಮ್ಮ ನಾಗರಿಕರನ್ನು ನಗರದ ಕೇಂದ್ರ ಭಾಗಗಳಲ್ಲೇ ಕೊಲ್ಲಲು ಹವಣಿಸುತ್ತಿರುವ ಜುಡಿಯಾ ಮತ್ತು ಸಮರಿಯಾ ಮೇಲೂ ಹೋರಾಡುತ್ತಿದ್ದೇವೆ. ಇದರ ನಡುವೆ ಈ ಎಲ್ಲ ದಾಳಿಗಳ ಹಿಂದಿನ ಕಾರಣೀಕರ್ತ ಇರಾನ್ ನಮ್ಮ ಮೇಲೆ ಇತ್ತೀಚಿಗೆ ನೇರವಾಗಿ 200ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ. ಇದನ್ನು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಗಮನಿಸಬೇಕು" ಎಂದು ನೆತನ್ಯಾಹು ಹೇಳಿದ್ದಾರೆ.

ಇಸ್ರೇಲ್‌- ಹಿಜ್ಬುಲ್ಲಾ ಸಂಘರ್ಷ (AP)

ಬೆಂಬಲ ನೀಡಿ ಅಥವಾ ನೀಡದಿರಿ ನಾವು ಯುದ್ಧ ಗೆಲ್ಲುತ್ತೇವೆ: "ಹೀಗಾಗಿ, ನೀವು ನಮಗೆ ಬೆಂಬಲ ನೀಡಿ ಅಥವಾ ನೀಡದಿರಿ. ಈ ಯುದ್ಧದಲ್ಲಿ ಇಸ್ರೇಲ್ ಜಯ ಸಾಧಿಸುತ್ತದೆ. ಅಮಾನವೀಯತೆ ಮತ್ತು ಅನಾಗರಿಕತೆಯ ವಿರುದ್ಧ ಹೋರಾಡುತ್ತಾ ನಾವು ಇಡೀ ನಾಗರಿಕತೆಯನ್ನು ರಕ್ಷಿಸುತ್ತೇವೆ. ಜಾಗತಿಕ ಶಾಂತಿ ಮತ್ತು ಭದ್ರತೆಗಾಗಿ ಯುದ್ಧ ಗೆಲ್ಲುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತವೆ" ಎಂದು ಬೆಂಜಮಿನ್ ನೆತನ್ಯಾಹು ಶಪಥ ಮಾಡಿದ್ದಾರೆ.

ಇದನ್ನೂ ಓದಿ:ಬೈರುತ್​ನಲ್ಲಿ ಇಸ್ರೇಲ್​ ದಾಳಿಗೆ 30ಕ್ಕೂ ಅಧಿಕ ಜನರು ಸಾವು - Israel attack on Beirut

ABOUT THE AUTHOR

...view details