ಲಾಹೋರ್(ಪಾಕಿಸ್ತಾನ):ಪಿಟಿಐ -ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಲಾಹೋರ್ನ ಐಕಾನಿಕ್ ಮಿನಾರ್-ಎ-ಪಾಕಿಸ್ತಾನದಲ್ಲಿ ಮುಂದಿನ ಸೆಪ್ಟೆಂಬರ್ 15 ರಂದು ಸಾರ್ವಜನಿಕ ರ‍್ಯಾಲಿ ಆಯೋಜಿಸುವುದಾಗಿ ಘೋಷಿಸಿದೆ ಎಂದು ಪಾಕಿಸ್ತಾನದ ಎಆರ್ಐ ನ್ಯೂಸ್ ವರದಿ ಮಾಡಿದೆ.
ಎಆರ್ಐ ಮಾಧ್ಯಮ ಸಂಸ್ಥೆ ಪ್ರಕಾರ, ಸೆಪ್ಟೆಂಬರ್ 15 ರಂದು ಮಿನಾರ್-ಎ-ಪಾಕಿಸ್ತಾನದಲ್ಲಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ಕೋರಿ ಪಿಟಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಒಮರ್ ಅಯೂಬ್ ಲಾಹೋರ್ ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಪಿಟಿಐ ಪಕ್ಷ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದೆ. ಒಮರ್ ಅಯೂಬ್ ಅವರು ರ‍್ಯಾಲಿ ಅನುಮತಿಗಳಿಗೆ ಸಂಬಂಧಿತ ಆರ್ಟಿಕಲ್ ಮತ್ತು ಸುಪ್ರೀಂ ಕೋರ್ಟ್ ನಿರ್ಧಾರಗಳನ್ನು ಉಲ್ಲೇಖಿಸಿ ವಿನಂತಿ ಕಳುಹಿಸಿದ್ದಾರೆ.