ETV Bharat / bharat

ತ.ನಾಡು ವಿಧಾನಸಭೆಯಲ್ಲಿ ಅಣ್ಣಾ ವಿವಿ ಅತ್ಯಾಚಾರ ಘಟನೆ ಪ್ರತಿಧ್ವನಿ: ಎಐಎಡಿಎಂಕೆ ಸದಸ್ಯರ ತೆರವು - TN ASSEMBLY

ತಮಿಳುನಾಡು ವಿಧಾನಸಭೆ ಕಲಾಪದ ಮೊದಲ ದಿನ ಭಾರಿ ಗದ್ದಲ ಉಂಟಾಗಿದೆ.

ತಮಿಳುನಾಡು ವಿಧಾನಸಭೆಯಲ್ಲಿನ ದೃಶ್ಯ
ತಮಿಳುನಾಡು ವಿಧಾನಸಭೆಯ ದೃಶ್ಯ (IANS)
author img

By ETV Bharat Karnataka Team

Published : Jan 6, 2025, 2:07 PM IST

ಚೆನ್ನೈ(ತಮಿಳುನಾಡು): ಅಣ್ಣಾ ವಿಶ್ವವಿದ್ಯಾಲಯದಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಇಂದು ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಅಧಿವೇಶನದ ಮೊದಲ ದಿನ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಎಐಎಡಿಎಂಕೆ ಸದಸ್ಯರು ಘಟನೆಯನ್ನು ಪ್ರಸ್ತಾಪಿಸಿದಾಗ ಸದನದಲ್ಲಿ ಭಾರಿ ಗದ್ದಲದ ವಾತಾವರಣ ಉಂಟಾಯಿತು. ಈ ಸಂದರ್ಭದಲ್ಲಿ ಎಐಎಡಿಎಂಕೆ ಸದಸ್ಯರನ್ನು ಸದನದಿಂದ ಹೊರಹಾಕಲಾಯಿತು.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ತಮ್ಮ ನೇತೃತ್ವದಲ್ಲಿ ಪಕ್ಷದ ಶಾಸಕರನ್ನು ಸದನದೊಳಗೆ ಕರೆದುಕೊಂಡು ಬಂದರು. ಸದನದೊಳಗೆ ಬರುವಾಗ ಎಐಎಡಿಎಂಕೆ ಯ ಎಲ್ಲಾ ಸದಸ್ಯರು "ಅವರು ಯಾರು ಹೇಳಿ ಸರ್?" ಎಂದು ಬರೆಯಲಾದ ಬ್ಯಾಡ್ಜ್ ಧರಿಸಿದ್ದರು. ಇತ್ತೀಚೆಗೆ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಭಾಗಿಯಾಗಿರುವ ಬಗ್ಗೆ ಸಾರ್ಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಆ ವ್ಯಕ್ತಿ ಯಾರೆಂದು ಸರ್ಕಾರಕ್ಕೆ ಪ್ರಶ್ನಿಸುವುದು ಬ್ಯಾಡ್ಜ್​ನ ಉದ್ದೇಶವಾಗಿದೆ.

ಪಳನಿಸ್ವಾಮಿ ಮತ್ತು ಇತರ ಎಐಎಡಿಎಂಕೆ ಶಾಸಕರು "ಅವರು ಯಾರು ಹೇಳಿ ಸರ್?" ಎಂದು ಘೋಷಣೆಗಳನ್ನು ಕೂಗಿ ಈ ಬಗ್ಗೆ ಡಿಎಂಕೆ ಸರ್ಕಾರ ವಿವರಣೆ ನೀಡಬೇಕೆಂದು ಒತ್ತಾಯಿಸಿದರು. ಇದರಿಂದ ಸದನದಲ್ಲಿ ಗೊಂದಲ ಮೂಡಿದ ನಂತರ ಎಐಎಡಿಎಂಕೆ ಶಾಸಕರನ್ನು ಸದನದಿಂದ ಬಲವಂತವಾಗಿ ಹೊರಹಾಕಲಾಯಿತು.

ಏತನ್ಮಧ್ಯೆ, ಅಧಿವೇಶನವನ್ನು ಆರಂಭಿಸುವ ಮುನ್ನ ರಾಷ್ಟ್ರಗೀತೆ ಹಾಡಲು ನಿರಾಕರಿಸುವ ಮೂಲಕ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ಆರ್.ಎನ್.ರವಿ ಸದನದ ಉದ್ಘಾಟನಾ ಕಾರ್ಯಕ್ರಮದಿಂದ ಹೊರನಡೆದರು.

ತಮಿಳುನಾಡು ವಿಧಾನಸಭೆಯಲ್ಲಿ ಇಂದು "ಭಾರತದ ಸಂವಿಧಾನ" ಮತ್ತು ರಾಷ್ಟ್ರಗೀತೆಯನ್ನು ಮತ್ತೊಮ್ಮೆ ಅವಮಾನಿಸಲಾಗಿದೆ ಎಂದು ರಾಜಭವನ ಆರೋಪಿಸಿದೆ. ಅಧಿವೇಶನದ ಆರಂಭದಲ್ಲಿ ತಮಿಳು ಥಾಯ್ ವಾಝ್ತುವನ್ನು ಮಾತ್ರ ಹಾಡಲಾಯಿತು ಮತ್ತು ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ರಾಜಭವನ ಹೇಳಿದೆ.

"ರಾಜ್ಯಪಾಲರು ಸದನಕ್ಕೆ ಅದರ ಸಾಂವಿಧಾನಿಕ ಕರ್ತವ್ಯವನ್ನು ಗೌರವಯುತವಾಗಿಯೇ ನೆನಪಿಸಿದರು ಮತ್ತು ರಾಷ್ಟ್ರಗೀತೆಯನ್ನು ಹಾಡುವಂತೆ ಸದನದ ನಾಯಕರಾಗಿರುವ ಮುಖ್ಯಮಂತ್ರಿ ಮತ್ತು ಸ್ಪೀಕರ್​ಗೆ ಮನವಿ ಮಾಡಿದರು. ಆದಾಗ್ಯೂ ಅವರು ರಾಷ್ಟ್ರಗೀತೆ ಹಾಡಲು ನಿರಾಕರಿಸಿದರು. ಇದು ತೀವ್ರ ಕಳವಳದ ವಿಷಯವಾಗಿದೆ. ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಗೌರವ ತೋರುವ ಇಂತಹ ನಾಚಿಕೆಗೇಡಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರಾಕರಿಸಿ ರಾಜ್ಯಪಾಲರು ನೋವಿನಿಂದ ಸದನದಿಂದ ಹೊರನಡೆದರು" ಎಂದು ಅದು ಹೇಳಿದೆ.

ಇದನ್ನೂ ಓದಿ: 'ರಾಷ್ಟ್ರಗೀತೆಗೆ ಅವಮಾನ': ಸರ್ಕಾರದ ಭಾಷಣ ಓದದೇ ಸದನದಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ - TAMIL NADU GOVERNOR R N RAVI

ETV Bharat Logo

Copyright © 2025 Ushodaya Enterprises Pvt. Ltd., All Rights Reserved.