ETV Bharat / state

ಹೆಚ್​​​ಡಿಕೆ ಮಗನ ಸೋಲಿನ ಹತಾಶೆಯಲ್ಲಿದ್ದಾರೆ, ಹಿಟ್ ಆ್ಯಂಡ್ ರನ್ ಬೇಡ: ಸಚಿವ ಎಂ.ಬಿ. ಪಾಟೀಲ್ - MINISTER M B PATIL

ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಡಿರುವ 60% ಕಮಿಷನ್ ಆರೋಪ ವಿಚಾರದ ಕುರಿತಂತೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಹತಾಶೆಯಲ್ಲಿದ್ದಾರೆ ಎಂದು ಟೀಕಿಸಿದರು.

Minister M B Patil reacts to commission allegations made by H D Kumaraswamy
ಹೆಚ್​.ಡಿ.ಕುಮಾರಸ್ವಾಮಿ, ಎಂ.ಬಿ.ಪಾಟೀಲ್ (ETV Bharat)
author img

By ETV Bharat Karnataka Team

Published : Jan 6, 2025, 1:54 PM IST

ಬೆಂಗಳೂರು: ''ಕುಮಾರಸ್ವಾಮಿ ತಮ್ಮ ಮಗನ ಸೋಲಿನ ಹತಾಶೆಯಲ್ಲಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಇದ್ದರೆ ಕೊಡಲಿ'' ಎಂದು ಸಚಿವ ಎಂ. ಬಿ. ಪಾಟೀಲ್ ಎಂದು ಹೇಳಿದರು.‌

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ 60% ಕಮಿಷನ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಕುಮಾರಸ್ವಾಮಿಯವರಿಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಅವರಿಗೆ, ಅವರ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದು, ಹತಾಶೆ ಶುರುವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಇದ್ದರೆ ಕೊಡಲಿ. ಸಂಕ್ರಾಂತಿ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಶಾಸಕರು ಉಳಿಯುತ್ತಾರೆ, ನೋಡೋಣ. ಆರೋಪದ ಬಗ್ಗೆ ಸಾಕ್ಷಿಗಳಿದ್ದರೆ ಕೊಡಲಿ. ಹಿಂದೆ ಕೆಂಪಣ್ಣ ದೂರು ನೀಡಿದ್ದರು. ಅದಕ್ಕೆ ನಾವು ಆರೋಪ ಮಾಡಿದ್ದೇವೆ. ಇವರ ಆರೋಪಕ್ಕೆ ಸಾಕ್ಷಿ ಕೊಡಲಿ. ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯ ಸೋಲಿನ ಹತಾಶೆಯಲ್ಲಿದ್ದಾರೆ. ನಿಖಿಲ್ ಬಗ್ಗೆ ನನಗೆ ಸಹಾನುಭೂತಿ ಇದೆ'' ಎಂದರು.

ಸಚಿವ ಎಂ.ಬಿ. ಪಾಟೀಲ್ (ETV Bharat)

ಉಕ್ಕು ಕಾರ್ಖಾನೆ ಸಂಬಂಧ ರಾಜ್ಯ ಸರ್ಕಾರದಿಂದ ಬೇಡಿಕೆ ಬಂದಿಲ್ಲ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ಕೇಂದ್ರಕ್ಕೆ ನಾವು ಪತ್ರ ಬರೆದಿದ್ದೇವೆ. ಸೆಮಿಕಂಡೆಕ್ಟರ್​​ಗೆ ಅವಕಾಶ ಕೊಡಿ ಅಂತ. ಎಲ್ಲಾ ಕಂಪನಿಗಳನ್ನು ಗುಜರಾತ್​​ಗೆ ಕರೆದುಕೊಳ್ಳುತ್ತಿದ್ದಾರೆ. ಎಲ್ಲವೂ ಗುಜರಾತ್​​ಗೆ ಹೋಗುತ್ತಿವೆ. ಅವರು ಇನ್ಸೆಂಟೀವ್ ಜಾಸ್ತಿ ಕೊಡುತ್ತಾರೆ ಅಂತ ಹೀಗಾಗುತ್ತಿದೆ.‌ ನಮ್ಮಲ್ಲಿ ಜಿಂದಾಲ್ ಸೇರಿ ಹಲವು ಕಂಪನಿಗಳಿವೆ'' ಎಂದರು.

ಹಿಟ್ ಆ್ಯಂಡ್ ರನ್ ಸರಿಯಲ್ಲ: ಸರ್ಕಾರದ ನಡೆಯ ಬಗ್ಗೆ ಗುತ್ತಿಗೆದಾರರ ಅಸಮಾಧಾನ ವಿಚಾರವಾಗಿ ಮಾತನಾಡಿ, ''ಯಾವ ಗುತ್ತಿಗೆದಾರರು ಅಸಮಾಧಾನರಾಗಿದ್ದಾರೆ. ಅಂತವರ ಲೀಸ್ಟ್ ಕೊಡಲಿ. ನಾವು ಕ್ರಮ ಜರುಗಿಸುತ್ತೇವೆ. ಸುಮ್ಮನೆ ಹಿಟ್ ಆ್ಯಂಡ್ ರನ್ ಸರಿಯಲ್ಲ. ಸಚಿವ ಪ್ರಿಯಾಂಕ್ ಖರ್ಗೆ ವಿಚಾರದಲ್ಲೂ ಏನು ಮಾಡಿದ್ರು?. ಅವರು ಕಾಂಟ್ರಾಕ್ಟರ್ ಅಲ್ವೋ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ಅಂತದ್ದೇನಿಲ್ಲ'' ಎಂದು ಹೇಳಿದರು.

ಮುಂದಿನ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಚರ್ಚೆ ಬಂದಾಗ ನೋಡೋಣ. ಕ್ಯಾಬಿನೆಟ್​​​ನಲ್ಲಿ ವಿಷಯ ಬರಲಿ. ವಿಷಯ ನೋಡದೇ ಮಾತನಾಡುವುದು ಮೂರ್ಖತನ ಆಗುತ್ತದೆ. ವರದಿ ನೋಡಿದ ಮೇಲೆ ನಾನು ಮಾತಾಡುತ್ತೇನೆ'' ಎಂದು ತಿಳಿಸಿದರು.

ಹಣಕಾಸು ವಿಚಾರದಲ್ಲಿ ನಮ್ಮ ಸಿಎಂ ಪರ್ಫೆಕ್ಟ್: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ ಎಂಬ ಶಾಸಕರ ಆರೋಪವಾಗಿ ಪ್ರತಿಕ್ರಿಯಿಸಿ, ''ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ಅಭಿವೃದ್ಧಿಗೂ ಇದೆ, ಗ್ಯಾರಂಟಿಗೂ ಇದೆ. ನೀರಾವರಿಗೆ ಹಣ ಕೇಳುತ್ತಾರೆ. ಹಿಂದಿನ ಸರ್ಕಾರ ಬೇಕಾಬಿಟ್ಟಿ ಸಾಲ ಮಾಡಿದೆ. ಆ ಸರ್ಕಾರ ಆರ್ಥಿಕ ಶಿಸ್ತನ್ನು ಮೀರಿ‌ ಹೋಗಿತ್ತು. 70 ಸಾವಿರ ಕೋಟಿ ರೂ. ಸಾಲ ಮಾಡಿತ್ತು. ಅವರು ಮಾಡಿರುವುದು ಎಕ್ಸಸ್ ಬಿಲ್ ಉಳಿದಿದೆ. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬಾಕಿ ಬಿಲ್​​ಗಳಿವೆ. ಅವರು ಹಣ ಪೆಂಡಿಂಗ್ ಇಟ್ಟು ಹೋದರು. ನಮ್ಮ ಸಿಎಂ ಹಣಕಾಸು ವಿಚಾರದಲ್ಲಿ ಪರ್ಫೆಕ್ಟ್. ಹಣ ಹೊಂದಿಸುವುದು ಗೊತ್ತಿದೆ. ಎಲ್ಲ ಸರಿಪಡಿಸಿಕೊಂಡು ಹೋಗುತ್ತೇನೆ ಅಂದಿದ್ದಾರೆ‌. ಈಗ ಅದನ್ನು ಮಾಡುತ್ತಿದ್ದಾರೆ'' ಎಂದು ಸಚಿವ ಎಂ ಬಿ ಪಾಟೀಲ್​ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಲ್ಲಿ ಲಂಚದ ಪ್ರಮಾಣ ಶೇ. 60ಕ್ಕೆ ತಲುಪಿದೆ; ಹೆಚ್​ ಡಿ ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.