ಹೈದರಾಬಾದ್: ತಮ್ಮ ಎರಡು ದಿನಗಳ ಪೋಲೆಂಡ್ ಭೇಟಿ ವಿಶೇಷವಾಗಿದ್ದು, ಎರಡು ದೇಶಗಳ ನಡುವಿನ ಸಂಬಂಧಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪೋಲೆಂಡ್ ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪೋಲೆಂಡ್ ಭೇಟಿ ವಿಶೇಷವಾಗಿದೆ. ದಶಕಗಳ ಬಳಿಕ ಭಾರತದ ಪ್ರಧಾನಿ ಪೋಲಿಶ್ಗೆ ಭೇಟಿ ಮಾಡಿದ್ದಾರೆ. ಈ ಭೇಟಿಯು ಮೌಲ್ಯಯುತ ಸ್ನೇಹ ಮತ್ತು ಸಹಕಾರದ ಅವಕಾಶವನ್ನು ನೀಡಿದೆ. ಪೋಲೆಂಡ್ ಜೊತೆ ಸಾಂಸ್ಕೃತಿಕ ಸಂಪರ್ಕ ಮತ್ತು ಆತ್ಮೀಯ ಉದ್ಯಮವನ್ನು ಎದುರು ನೋಡುತ್ತಿದ್ದೇವೆ. ನಮ್ಮ ಸ್ನೇಹ ಖಂಡಿತವಾಗಿಯು ಈ ಜಗತ್ತಿಗೆ ಹೊಸ ಕೊಡುಗೆ ನೀಡುತ್ತದೆ. ಆತ್ಮೀಯ ಸತ್ಕಾರಕ್ಕೆ ಪೋಲಿಶ್ ಸರ್ಕಾರ ಮತ್ತು ಜನರಿಗೆ ಧನ್ಯಾದವನ್ನು ತಿಳಿಸುತ್ತೇನೆ ಎಂದರು.
ಈ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಪೋಲಂಡ್ನಲ್ಲಿನ ಪ್ರಮುಖ ಕಬ್ಬಡಿ ಆಟಗಾರರನ್ನು ಭೇಟಿಯಾಗಿದ್ದಾರೆ. ಎರಡು ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಬೆಳೆಸುವಲ್ಲಿ ಕ್ರೀಡೆಗಳ ಪಾತ್ರ ಕುರಿತು ಅವರು ಮಾತನಾಡಿದರು. ವಾರ್ಸಾದಲ್ಲಿ, ಕಬಡ್ಡಿ ಆಟಗಾರರಾದ ಮೈಕಲ್ ಸ್ಪಿಕ್ಜ್ಕೊ ಮತ್ತು ಅನ್ನಾ ಕಲ್ಬಾರ್ಸಿಕ್ ಅವರನ್ನು ಭೇಟಿಯಾದೆ. ಈ ಆಟವನ್ನು ಸಕ್ರಿಯವಾಗಿ ಪೋಲೆಂಡ್ ಅನುಸರಿಸುತ್ತಿದೆ. ಈ ಕ್ರೀಡೆಯನ್ನು ಪೋಲೆಂಡ್ನಲ್ಲಿ ಮುಂದೆ ಹೇಗೆ ಖ್ಯಾತಿಗೊಳಿಸಬಹುದು ಎಂಬ ಕುರಿತು ಚರ್ಚಿಸಿದೆವು. ಜೊತೆಗೆ ಭಾರತ ಮತ್ತ ಪೋಲಿಶ್ ಆಟಗಾರರ ನಡುವಿನ ಟೂರ್ನಮೆಂಟ್ ಕುರಿತು ಮಾತನಾಡಲಾಯಿತು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ದುಡಾ ಅವರೊಂದಿಗಿನ ಮಾತುಕತೆ ದ್ವಿಪಕ್ಷಿಯ ನಡುವಿನ ಸಂಬಂಧವನ್ನು ಬಲಪಡಿಸಿದೆ.