ಇಸ್ಲಾಮಾಬಾದ್: ವಿಶ್ವದ ಎಲ್ಲಾ ದೇಶಗಳು ಪೋಲಿಯೋ ರೋಗದಿಂದ ಮುಕ್ತವಾಗಿದ್ದರೂ ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನ ಇನ್ನೂ ಹೊರಬಂದಿಲ್ಲ. ಈ ಕುರಿತು ಮಾತನಾಡಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, "ದೇಶದಲ್ಲಿ ಪೋಲಿಯೋ ನಿರ್ಮೂಲನೆಗೆ ಅವಿರಹಿತ ಶ್ರಮ ವಹಿಸಲಾಗುತ್ತಿದೆ. ಈ ಗುರಿ ಸಾಧನೆಗೆ ಎಲ್ಲಾ ಭಾಗಿದಾರರ ನಿರಂತರ ಸಹಕಾರ ಅಗತ್ಯ" ಎಂದು ಹೇಳಿದ್ದಾರೆ.
ಸೌದಿ ಅರೇಬಿಯಾದ ರಿಯಾದ್ನಲ್ಲಿ ನಡೆಯುತ್ತಿರುವ ಎರಡು ದಿನಗಳ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅವರು ಮಾತನಾಡಿದರು. ಬಿಲ್ ಆ್ಯಂಡ್ ಮಿಲಿಂದಾ ಗೇಟ್ಸ್ ಸಂಸ್ಥಾಪಕ ಬಿಲ್ ಗೇಟ್ಸ್ ಜೊತೆಗಿನ ಚರ್ಚೆಯ ವೇಳೆ ಈ ವಿಚಾರವನ್ನು ಅವರು ಪ್ರಸ್ತಾಪಿಸಿದರು.
ವಿಶ್ವ ಆರ್ಥಿಕ ವೇದಿಕೆಯ ವಿಶೇಷ ಸಭೆಯಲ್ಲಿ ಪಾಕ್ ಪ್ರಧಾನಿ ಜೊತೆಗೆ ಚರ್ಚಿಸಿದ ಗೇಟ್ಸ್, ಶರೀಫ್ ನಾಯಕತ್ವದಲ್ಲಿ ಪಂಜಾಬ್ ಪ್ರಾಂತ್ಯದಲ್ಲಿರುವ ಪೋಲಿಯೋ ಲಸಿಕೀಕರಣದ ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ, ದೇಶದೆಲ್ಲೆಡೆ ಈ ಕ್ರಮವನ್ನು ಜಾರಿಗೆ ತರುವಂತೆಯೂ ತಿಳಿಸಿದರು ಎಂದು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.