ಗಾಜಾ ನಗರ:ಗಾಜಾ ನಗರದಲ್ಲಿ ಗುರುವಾರ ಮಾನವೀಯ ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆಯೇ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ಮತ್ತು ಗುಂಡಿನ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಮೊದಲು ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಸೇನೆಯು, ನಂತರ ಆಹಾರ ಪೂರೈಕೆಗಾಗಿ ಬಂದಿದ್ದ ಟ್ರಕ್‌ಗಳ ಬಳಿ ತೆರಳಿದ್ದ ಸಂತಸ್ತರ ಮೇಲೆ ಗುಂಡಿನ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಮಲ್ ಅಡ್ವಾನ್ ಆಸ್ಪತ್ರೆಯ ಆಂಬ್ಯುಲೆನ್ಸ್ ಸೇವೆಗಳ ಮುಖ್ಯಸ್ಥ ಅಫಾನಾ ಅವರು, ದಾಳಿಯ ಸ್ಥಳಕ್ಕೆ ತಲುಪಿದ ಸಮಯದಲ್ಲಿ ನೂರಾರು ಮೃತದೇಹಗಳು ಬಿದ್ದಿದ್ದರು. ಜೊತೆಗೆ ಗಾಯಗೊಂಡವರು ನೆಲದ ಮೇಲೆ ಒದ್ದಾಡುತ್ತಿದ್ದರು. ಮೃತದೇಹಗಳು ಮತ್ತು ಗಾಯಾಳುಗಳನ್ನು ಸಾಗಿಸಲು ಆಂಬ್ಯುಲೆನ್ಸ್‌ಗಳು ಸಾಕಾಗದ ಕಾರಣ, ಕತ್ತೆ ಮತ್ತು ಕುದುರೆ ಗಾಡಿಗಳಲ್ಲಿ ರವಾನೆ ಮಾಡಲಾಯಿತು ಎಂದು ತಿಳಿಸಿದರು.
ನೆರವಿಗಾಗಿ ಕಾಯುತ್ತಿರುವವರ ಮೇಲೆ ಗುಂಡಿನ ದಾಳಿ:ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯನ್ನು ಇಸ್ರೇಲ್ ಖಚಿತಪಡಿಸಿದೆ. ಆದರೆ, ಯೋಧರ ಮೇಲೆ ದಾಳಿ ನಡೆಸಲು ಮುಂದಾದಾಗ ಗುಂಡಿನ ದಾಳಿ ನಡೆಸಬೇಕಾಯಿತು ಎಂದು ತಿಳಿದುಬಂದಿದೆ. ಈ ವೇಳೆ ಟ್ರಕ್‌ಗಳು ಸಂತ್ರಸ್ತರಿದ್ದ ಗುಂಪಿನ ಬಂದಿವು. ಟ್ರಕ್‌ಗಳಲ್ಲಿನ ಆಹಾರ ತೆಗೆದುಕೊಳ್ಳಲು ಮುತ್ತಿಗೆ ಹಾಕಿದ ನೂರಾರು ಜನರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.