ನವದೆಹಲಿ: 45 ಕ್ಷೇತ್ರಗಳಲ್ಲಿ ಬಹುಮತಗಳಿಸುತ್ತಾ ಬಿಜೆಪಿಯು ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಮೇಲುಗೈ ಸಾಧಿಸುತ್ತಿದೆ. ಅಂತಿಮ ಫಲಿತಾಂಶ ಹೊರ ಬೀಳಬೇಕಿದೆ. ಬಿಜೆಪಿಗೆ ರಾಜಧಾನಿಯ ಅಧಿಕಾರದ ವಾಸನೆ ಬಲವಾಗಿಯೇ ಬೀರಿದೆ. ಈಗಲೇ ಬಿಜೆಪಿಯ ಕೆಲ ನಾಯಕರು ಗೆಲುವಿನ ಭಾಷಣ ನೀಡುತ್ತಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರೆ, ಇತ್ತ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಕೇಂದ್ರ ನಾಯಕತ್ವ ಸಿಎಂ ಮುಖ ನಿರ್ಧರಿಸುತ್ತದೆ: ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಮಾತನಾಡಿ, "ಕೇಂದ್ರ ನಾಯಕತ್ವವು ಸಿಎಂ ಮುಖವನ್ನು ನಿರ್ಧರಿಸುತ್ತದೆ. ನೀವು ಸಾರ್ವಜನಿಕರೊಂದಿಗೆ ಅಪ್ರಾಮಾಣಿಕರಾಗಿದ್ದರೆ, ಸಾರ್ವಜನಿಕರು ಇದೇ ರೀತಿಯ ಫಲಿತಾಂಶವನ್ನು ನೀಡುತ್ತಾರೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ದೆಹಲಿಯಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾಗುತ್ತದೆ" ಎನ್ನುವ ಮೂಲಕ ಆಪ್ ನಾಯಕರನ್ನು ಟೀಕಿಸಿದ್ದಾರೆ.
#WATCH | Delhi | Celebration continues at BJP office as official trends of #DelhiElectionResults indicating BJP's comeback in the National Capital
— ANI (@ANI) February 8, 2025
BJP is leading in 45 seats; AAP in 25; as per Election Commission trends pic.twitter.com/OAYyWEZU6l
ದೆಹಲಿ ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್: ದೆಹಲಿ ಚುನಾವಣೆ ಫಲಿತಾಂಶ: ಮತ ಎಣಿಕೆ ನಡುವೆಯೇ ವೀರೇಂದ್ರ ಸಚ್‌ದೇವ ಅವರು ಕನ್ನಾಟ್ ಪ್ಲೇಸ್‌ನ ಹನುಮಾನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಎಎಪಿ ಮುನ್ನಡೆಯೊಂದಿಗೆ ಪಕ್ಷವು ಮುನ್ನಡೆಯುತ್ತಿದ್ದಂತೆ ಬಿಜೆಪಿ ಬೆಂಬಲಿಗರು ಸಂಭ್ರಮಿಸಿದ್ದಾರೆ. ಬಿಜೆಪಿ ಬೆಂಬಲಿಗರು ಪಕ್ಷದ ಕಚೇರಿಯ ಹೊರಗೆ ಜಮಾಯಿಸಿ ಹರ್ಷಾಚರಣೆಯಲ್ಲಿದ್ದಾರೆ.
#WATCH | BJP workers celebrate with firecrackers as the party takes the lead on 45 seats in Delhi assembly elections pic.twitter.com/OmHaikge6b
— ANI (@ANI) February 8, 2025
ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿಖಾ ರೈ ಕೂಡ ಕಲ್ಕಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಹಾಗೇ, ಬಿಜೆಪಿ ಸಂಸದ ಮನೋಜ್ ತಿವಾರಿ, "ಬಿಜೆಪಿ ಫಲಿತಾಂಶದಲ್ಲಿ ಬಹಳ ಮುಂದಿದೆ. ಆದರೆ, ನಾವು ಫಲಿತಾಂಶಕ್ಕಾಗಿ ಕಾಯುತ್ತೇವೆ. ಇದಕ್ಕಿಂತ ಉತ್ತಮವಾದ ಫಲಿತಾಂಶವನ್ನು ನಾವು ಕಾಣಲಿದ್ದೇವೆ ಎಂದು ನಾನು ನಂಬುತ್ತೇನೆ. ದೆಹಲಿಯ ಪ್ರತಿಯೊಂದು ವಿಭಾಗವೂ ಆಪ್‌ನಿಂದ ದೂರ ಸರಿದಿದೆ. ಎಎಪಿ ತೋರಿದ ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರವೇ ಅವರು ಜನರ ಬೆಂಬಲವನ್ನು ಕಳೆದುಕೊಳ್ಳಲು ಕಾರಣವಾಗಿದೆ" ಎಂದು ವಾಗ್ದಾಳಿ ನಡೆಸಿದರು.
#WATCH | Delhi | BJP supporters gather outside the party's office as official trends of #DelhiElectionResults indicating BJP's comeback in the National Capital
— ANI (@ANI) February 8, 2025
BJP is leading in 41 seats; AAP in 29; as per Election Commission trends pic.twitter.com/16GsvmqR5p
ಇದನ್ನೂ ಓದಿ: ಹಾಟ್ಸೀಟ್ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ; ಮುನ್ನಡೆ -ಹಿನ್ನೆಡೆಯಲ್ಲಿರುವ ಪ್ರಮುಖರು ಇವರೇ ನೋಡಿ!
ಇದನ್ನೂ ಓದಿ:ಈರುಳ್ಳಿಯಿಂದ ಹೋದ ಅಧಿಕಾರ ಗ್ಯಾರಂಟಿಯಿಂದ ಮರಳಿ ಬರುತ್ತಿದೆಯಾ?: 1998ರಲ್ಲಿ ಅಸಲಿಗೆ ನಡೆದಿದ್ದೇನು?