ಕರ್ನಾಟಕ

karnataka

ETV Bharat / international

ಹೊಸ ವರ್ಷ ಬರಮಾಡಿಕೊಳ್ಳಲು ನ್ಯೂಯಾರ್ಕ್​ ಸನ್ನದ್ಧ: ರಜೆ ಹಿನ್ನೆಲೆ ಭಾರಿ ಬಿಗಿ ಬಂದೋಬಸ್ತ್​ - NEW YEAR HOLIDAY

ಕ್ರಿಸ್​​ಮಸ್​​ ವೇಳೆ, ಜರ್ಮನಿ ಮಾರುಕಟ್ಟೆಯಲ್ಲಿ ನಡೆದ ದಾಳಿ ಹಿನ್ನೆಲೆಯಲ್ಲಿ ನ್ಯೂಯಾರ್ಕ್​ನಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

New York beefs up security measures for New Year holiday
ಹೊಸ ವರ್ಷ ಬರಮಾಡಿಕೊಳ್ಳಲು ನ್ಯೂಯಾರ್ಕ್​ ಸನ್ನದ್ಧ: ರಜೆ ಹಿನ್ನೆಲೆ ಭಾರಿ ಬಿಗಿ ಬಂದೋಬಸ್ತ್​ (IANS)

By ETV Bharat Karnataka Team

Published : Dec 31, 2024, 7:30 AM IST

ನ್ಯೂಯಾರ್ಕ್, ಅಮೆರಿಕ:ಹೊಸ ವರ್ಷದ ರಜಾದಿನ ಹಾಗೂ ಹೊಸ ವರ್ಷದ ಆಚರಣೆ ಸಮಯದಲ್ಲಿ ಸಾರ್ವಜನಿಕರಿಗೆ ಸೂಕ್ತ ಭದ್ರತೆ ನೀಡಲು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್, ರಾಜ್ಯಾದ್ಯಂತ ಕಟ್ಟೆಚ್ಚರ ಘೋಷಿಸಿದ್ದಾರೆ. ಹೆಚ್ಚಿನ ಸುರಕ್ಷತೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ರಾಜ್ಯ ಪೊಲೀಸ್, ನ್ಯೂಯಾರ್ಕ್ ನ್ಯಾಷನಲ್ ಗಾರ್ಡ್ ಮತ್ತು ಇತರ ಏಜೆನ್ಸಿಗಳ ಸಹಯೋಗದೊಂದಿಗೆ ಭದ್ರತಾ ಸಿಬ್ಬಂದಿ ಹೆಚ್ಚಿಸಲಾಗಿದೆ. ವಿಮಾನ ನಿಲ್ದಾಣಗಳು, ಸೇತುವೆಗಳು, ಸುರಂಗಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಎಲ್ಲರ ಸುರಕ್ಷತೆ ನಮ್ಮ ಮೊದಲ ಆದ್ಯತೆ:ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ನ್ಯೂಯಾರ್ಕ್​ ನಗರ ಸನ್ನದ್ಧವಾಗಿದ್ದು, ಮಹಾನಗರದ ನಿವಾಸಿಗಳು ಮತ್ತು ಸಂದರ್ಶಕರು ಸುರಕ್ಷಿತವಾಗಿ ಮತ್ತು ಶಾಂತಿಯುತವಾಗಿ ಆಚರಿಸಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ ಎಂದು ಗವರ್ನರ್​ ಹೊಚುಲ್ ಸೋಮವಾರದ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಭಾವ್ಯ ದಾಳಿ ತಡೆಗಟ್ಟಲು ಎಲ್ಲ ಕ್ರಮ:ಸಾರ್ವಜನಿಕ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಿಮ್ಮನ್ನು ಸುರಕ್ಷಿತವಾಗಿರಿಸಲು ನಾವು ಬದ್ಧವಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಸಂಭಾವ್ಯ ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟಲು, ನ್ಯೂಯಾರ್ಕ್ ಸ್ಟೇಟ್ ಆಫೀಸ್ ಆಫ್ ಕೌಂಟರ್- ಟೆರರಿಸಂ (OCT), ಮಾಲ್‌ಗಳು, ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿಟ್ಟಿದೆ.

ಎಲ್ಲ ಬಸ್​ , ರೈಲು ನಿಲ್ದಾಣಗಳಲ್ಲಿ ಭಾರಿ ಬಿಗಿ ಬಂದೋಬಸ್ತ್​;ನ್ಯೂಯಾರ್ಕ್ ನಗರದಲ್ಲಿ ಸಾರ್ವಜನಿಕ ಸಾರಿಗೆಯ ಜವಾಬ್ದಾರಿಯನ್ನು ಹೊಂದಿರುವ ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರ (MTA), ಭದ್ರತೆ ಹೆಚ್ಚಿಸಲು ಗಸ್ತು ಮತ್ತು ಕಣ್ಗಾವಲುಗಳನ್ನು ಹೆಚ್ಚಿಸಿದೆ ಎಂದು ಪ್ರಕಟಣೆಯು ವಿಶೇಷವಾಗಿ ಒತ್ತಿ ಹೇಳಿದೆ.

ಸ್ವಯಂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ: ಸಾರ್ವಜನಿಕರಿಗೆ ನ್ಯೂಯಾರ್ಕ್​ ಗವರ್ನರ್​​​​​​​​​​ ಕಿವಿಮಾತು:ರಜೆ ಸಮಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುವಾಗ ಜನರು ಜಾಗ್ರತೆ ವಹಿಸುವಂತೆ ಹಾಗೂ ಸ್ವಯಂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೋಚುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜರ್ಮನಿಯಲ್ಲಿ ಇತ್ತೀಚೆಗೆ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ನ್ಯೂಯಾರ್ಕ್​​ ನಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಆಡಳಿತ ಸ್ಪಷ್ಟಪಡಿಸಿದೆ.

ಅಮೆರಿಕದಲ್ಲಿ ಆಗಾಗ ಗುಂಡಿನ ದಾಳಿಗಳು ಸದ್ದು ಮಾಡುತ್ತವೆ. ಹೀಗಾಗಿ ಅಲ್ಲಿನ ಸರ್ಕಾರ ಜನರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿದೆ. ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ.

ಇದನ್ನು ಓದಿ:ಸಿರಿಯಾದಲ್ಲಿ ಚುನಾವಣೆ ನಡೆಸಲು 4 ವರ್ಷ ಬೇಕಾಗಬಹುದು: ಆಡಳಿತದ ಮುಖ್ಯಸ್ಥ ಅಹ್ಮದ್ ಅಲ್ - ಶರಾ ಹೇಳಿಕೆ

ABOUT THE AUTHOR

...view details