ಕರ್ನಾಟಕ

karnataka

ETV Bharat / international

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಭೀತಿಯಿಲ್ಲ - 7 EARTHQUAKE STRIKES CALIFORNIA

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿಲ್ಲ.

Magnitude 7  earthquake strikes California
ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಭೂಕಂಪ: ಸುನಾಮಿ ಭೀತಿಯಿಲ್ಲ (ANI)

By ANI

Published : Dec 6, 2024, 6:26 AM IST

ಕ್ಯಾಲಿಫೋರ್ನಿಯಾ, ಅಮೆರಿಕ: ಫೆರ್ನ್‌ಡೇಲ್‌ನಿಂದ ಸುಮಾರು 100 ಕಿಲೋಮೀಟರ್ ನೈಋತ್ಯಕ್ಕೆ ಕ್ಯಾಲಿಫೋರ್ನಿಯಾದ ಕೇಪ್ ಮೆಂಡೋಸಿನೊದ ಕಡಲಾಚೆಯಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಡಿಸೆಂಬರ್ 6 ರಂದು ಈ ಬಗ್ಗೆ ಎಕ್ಸ್ ಹ್ಯಾಂಡಲ್​​ನಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದಿಂದ ಈ ಮಾಹಿತಿ ನೀಡಲಾಗಿದೆ.

ಮೆಂಡೋಸಿನೊ ಟ್ರಿಪಲ್ ಜಂಕ್ಷನ್‌ನಲ್ಲಿ ಈ ಭೂಕಂಪ ಸಂಭವಿಸಿದೆ. ಪೆಸಿಫಿಕ್, ಉತ್ತರ ಅಮೇರಿಕಾ ಮತ್ತು ಜುವಾನ್ ಡಿ ಫುಕಾ/ಗೋರ್ಡಾ ಪ್ಲೇಟ್‌ಗಳು ಒಮ್ಮುಖವಾಗುತ್ತವೆ ಮತ್ತು ಮೆಂಡೋಸಿನೊ ಫ್ರಾಕ್ಚರ್ ಝೋನ್‌ನಲ್ಲಿ ಸ್ಟ್ರೈಕ್-ಸ್ಲಿಪ್ ದೋಷದಿಂದ ಈ ಭೂಕಂಪ ಸಂಭವಿಸಿದೆ ಎಂದು ನಂಬಲಾಗಿದೆ. ಡಿಸೆಂಬರ್ 5, 2024, ರಂದು 7ರಷ್ಟು ತೀವ್ರತೆಯ ಭೂಕಂಪ, ಕಡಲಾಚೆಯ ಕೇಪ್ ಮೆಂಡೋಸಿನೊದಿಂದ ಸುಮಾರು 100 ಕಿಮೀ ನೈಋತ್ಯಕ್ಕೆ ಸಂಭವಿಸಿದೆ ಎಂದು ಅಮೆರಿಕದ ಭೂಕಂಪನ ಕೇಂದ್ರ ಹೇಳಿದೆ. ಫೆರ್ನ್‌ಡೇಲ್, ಕ್ಯಾಲಿಫೋರ್ನಿಯಾ, ಮೆಂಡೋಸಿನೊ ಫ್ರಾಕ್ಚರ್ ವಲಯದ ಸಮೀಪದಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಈ ಘಟನೆ ನಡೆದಿದೆ ಎಂದು ಜಿಯೋಲಾಜಿಕಲ್ ಸರ್ವೇ ಹೇಳಿದೆ.

ಪೆಸಿಫಿಕ್, ಉತ್ತರ ಅಮೆರಿಕಾ ಮತ್ತು ಜುವಾನ್ ಡಿ ಫುಕಾ / ಗೋರ್ಡಾ ಫಲಕಗಳು ಸಂಧಿಸುವ ಪ್ರದೇಶ ಇದಾಗಿದೆ. USGA ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. ಫೋಕಲ್ ಮೆಕ್ಯಾನಿಸಂ ಭಾಗವಾಗಿ ಈ ಘರ್ಷಣೆ ಸಂಭವಿಸಿದೆ, ಕ್ಯಾಲಿಫೋರ್ನಿಯಾ ಮತ್ತು ಒರೆಗಾನ್ ಮೇಲೆ ಯಾವುದೇ ಸುನಾಮಿ ಉಂಟಾಗುವ ಸಾಧ್ಯತೆಗಳಿಲ್ಲದಿರುವುದರಿಂದ ಸುನಾಮಿ ಎಚ್ಚರಿಕೆಯನ್ನು ಯುಎಸ್​​ಜಿಎ ರದ್ದು ಪಡಿಸಿದೆ. ಅಮೆರಿಕದ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು X ನಲ್ಲಿ ಪೋಸ್ಟ್ ಹಾಕಲಾಗಿದೆ.

ಇದನ್ನು ಓದಿ:ತೆಲಂಗಾಣ, ಆಂಧ್ರದಲ್ಲಿ ಲಘು ಭೂಕಂಪ: ರಿಕ್ಟರ್​​​​ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲು, ಹೆದರಿ ಮನೆಯಿಂದ ಹೊರ ಬಂದ ಜನ

ABOUT THE AUTHOR

...view details