ಬೀಜಿಂಗ್(ಚೀನಾ:):ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಯೋಜನೆಗೆ ಮರು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಈ ಯೋಜನೆಯಿಂದ ಇಟಲಿ ಹೊರಬಂದಿತ್ತು. ಮತ್ತೆ ಅಧಿಕಾರಕ್ಕೆ ಬಂದ ಜಾರ್ಜಿಯಾ ಅವರು ಮತ್ತೆ ಚೀನಾದ ಜೊತೆಗೆ ಕೈಜೋಡಿಸುವುದಾಗಿ ಘೋಷಿಸಿದ್ದಾರೆ.
ಬೆಲ್ಟ್ ಅಂಡ್ ರೋಡ್‌ನ ಯೋಜನೆಯು ಇಟಲಿಗೆ ಸಹಕಾರಿಯಲ್ಲ ಎಂದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಟೀಕಿಸಿ, ಅದರಿಂದ ಹೊರಬರುವುದಾಗಿ ಇಟಲಿ ಪಧಾನಿ ಜಾರ್ಜಿಯಾ ಮೆಲೋನಿ ಘೋಷಿಸಿದ್ದರು. ಚುನಾವಣೆ ನಡೆದು ಮತ್ತೆ ಭರ್ಜರಿಯಾಗಿ ಅಧಿಕಾರಕ್ಕೆ ಬಂದಿರುವ ಜಾರ್ಜಿಯ ಅವರು ಎಂಟೇ ತಿಂಗಳಲ್ಲಿ ಮನಸ್ಸು ಬದಲಿಸಿ ಮತ್ತೆ ಚೀನಾದ ಯೋಜನೆಗೆ ಸೈ ಎಂದಿದ್ದಾರೆ. ಅವರ ಈ ನಿರ್ಧಾರ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಚೀನಾ ಪ್ರಮುಖ ಸಂವಹನಕಾರ:ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಇಟಲಿ ಪ್ರಧಾನಿ ಮೆಲೋನಿ ಅವರು ಚೀನಾಕ್ಕೆ ಮೊದಲ ಭೇಟಿ ನೀಡಿದ್ದಾರೆ. ಈ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಮಾತುಕತೆಯಲ್ಲಿ, ಜಾಗತಿಕ ಸಮಸ್ಯೆಗಳಿಗೆ ಚೀನಾ ಪ್ರಮುಖ ಸಂವಹನಕಾರ ದೇಶವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭದ್ರತೆ ಹೆಚ್ಚುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಚೀನಾ ಪ್ರಮುಖ ಮಧ್ಯವರ್ತಿಯಾಗುವುದು ಅನಿವಾರ್ಯ ಎಂಬುದು ನನ್ನ ಭಾವನೆ ಎಂದು ಮೆಲೋನಿ ಹೇಳಿದ್ದಾರೆ.