ETV Bharat / bharat

ಉತ್ತರಾಖಂಡ್​ದಿಂದ ಕಾಶ್ಮೀರದವರೆಗೆ ಸಂಚರಿಸಿದ ಹುಲಿರಾಯ; ಎರಡು ನದಿ ದಾಟಿ ಪ್ರಯಾಣ ಮಾಡಿ ಅಚ್ಚರಿ ಮೂಡಿಸಿದ ಟೈಗರ್​ - SEARCH OPERATION FOR TIGER

ಎರಡು ನದಿ ದಾಟಿ, ನಾಲ್ಕು ರಾಜ್ಯಗಳಲ್ಲಿ ಸಂಚಾರ ಮಾಡಿದ ಹುಲಿರಾಯ. ಈ ಟೈಗರ್​​ ಸುಳಿವು ಮಾತ್ರ ಇದುವರೆಗೂ ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

one-tiger-of-rajaji-tiger-reserve-is-suspected-to-be-in-jammu-kashmir
ಉತ್ತರಾಖಂಡ್​ದಿಂದ ಕಾಶ್ಮೀರದವರೆಗೆ ಸಂಚರಿಸಿದ ಹುಲಿರಾಯ; ಎರಡು ನದಿ ದಾಟಿ ಪ್ರಯಾಣ ಮಾಡಿ ಅಚ್ಚರಿ ಮೂಡಿಸಿದ ಟೈಗರ್​ (ETV Bharat)
author img

By ETV Bharat Karnataka Team

Published : Jan 4, 2025, 4:14 PM IST

ಡೆಹ್ರಾಡೂನ್, ಉತ್ತರಾಖಂಡ​: ಗಡಿ ಎಂಬುದು ಮಾನವನನ್ನು ಮಾತ್ರ ಕಟ್ಟಿ ಹಾಕುವ ರೇಖೆಯಾಗಿದೆ. ಆದರೆ, ಪ್ರಾಣಿಗಳಿಗೆ ಇದರ ಕಟ್ಟುಪಾಡು ಇಲ್ಲ ಬಿಡಿ. ಇದೇ ರೀತಿಯಲ್ಲಿ ಸ್ವಚ್ಛಂದವಾಗಿ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಹುಲಿಯೊಂದು ನಾಲ್ಕು ರಾಜ್ಯದಲ್ಲಿ ಸಂಚಾರ ಮಾಡಿದೆ. ಈ ರೀತಿ ಎರಡು ನದಿ ದಾಟಿ, ನಾಲ್ಕು ರಾಜ್ಯಗಳಲ್ಲಿ ಸಂಚಾರ ಮಾಡಿದ ಹುಲಿ ಇದಾಗಿದೆ. ಆದಾಗ್ಯೂ ಈ ಹುಲಿರಾಯನ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಇದೇ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ಚುರುಕುಗೊಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಹುಟುಕಾಟ: ಉತ್ತರಾಖಂಡ್​ನ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶ ಅರಣ್ಯದಿಂದ ಹೊರಟಿರುವ ಈ ಹುಲಿ ನೂರಾರು ಕಿ.ಮೀ ಸಾಗಿದ್ದು, ಇದರ ಪತ್ತೆಗೆ ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತಮ್ಮ ಆವಾಸಸ್ಥಾನದ ಹೊರತಾಗಿ ಎಲ್ಲೆಡೆ ಈ ಹುಲಿ ಮುಕ್ತವಾಗಿ ಸಂಚಾರ ಮಾಡುತ್ತಿರುವುದು ಕೂಡ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಇದೇ ಕಾರಣಕ್ಕೆ ಇದೀಗ ಅನೇಕ ರಾಜ್ಯಗಳಲ್ಲಿ ಈ ಹುಲಿರಾಯನನ್ನು ಪತ್ತೆ ಹಚ್ಚಲು ಇಲಾಖೆ ಮುಂದಾಗಿದೆ. ರಾಜ್ಯದ ಗಡಿದಾಟಿ ಪ್ರಯಾಣಿಸಿರುವ ಈ ಹುಲಿಯು ಇದೀಗ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ಈ ಹುಲಿ ಉತ್ತರಾಖಂಡ್​ದಿಂದ ಕಾಶ್ಮೀರದವರೆಗೆ ಪ್ರಯಾಣ ಬೆಳೆಸಿದೆ ಎಂಬುದೇ ಎಲ್ಲರನ್ನೂ ಅಚ್ಚರಿಗೆ ದೂಡುವಂತೆ ಮಾಡಿದೆ.

ಗಂಗಾ ಮತ್ತು ಯಮನಾ ನದಿ ದಾಟಿದ ಹುಲಿ: ಕಳೆದ 24 ವರ್ಷದಲ್ಲಿ ಗಂಗಾ ಮತ್ತು ಯಮುನಾ ನದಿ ದಾಟಿ ಸಂಚಾರ ಮಾಡಿದ ಹುಲಿ ಇದಾಗಿದೆ. ಈ ಹುಲಿಯು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಗೌಹರಿ ಶ್ರೇಣಿಯಿಂದ ಗಂಗಾ ನದಿಯನ್ನು ದಾಟಿ ರಾಜಾಜಿಯ ಮೋತಿಚೂರ್ ಶ್ರೇಣಿಯನ್ನು ಪ್ರವೇಶಿಸಿದೆ. ಹಿಮಾಚಲದಲ್ಲಿದ್ದಾಗ, ಅದು ಪೊಂಟಾದಿಂದ ಯಮುನಾ ನದಿಯನ್ನು ದಾಟಿ ಹರಿಯಾಣಕ್ಕೆ ಪ್ರಯಾಣಿಸಿದೆ.

ನಾಲ್ಕು ರಾಜ್ಯಗಳಲ್ಲಿ ರಾಜನಂತೆ ಹೆಜ್ಜೆ ಹಾಕಿದ ರಾಜಾ ಟೈಗರ್​: ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಹುಲಿಗಳಿವೆ. ಅದರಲ್ಲಿ ಗಂಗಾ ನದಿ ದಾಳಿ ರಾಜಾಜಿ ಪಶ್ಚಿಮ ಭಾಗ ತಲುಪಿದ ಮೊದಲ ಹುಲಿ ಇದಾಗಿದೆ. ಈ ಹುಲಿ 2022ರಲ್ಲೂ ಕೂಡ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ದಿಢೀರ್​ ಕಣ್ಮರೆಯಾಗಿತ್ತು. ಇದಾದ ಬಳಿಕ ಫೆಬ್ರವರಿಯಲ್ಲಿ 2023ರಲ್ಲಿ ಹಿಮಾಚಲದ ಸಿಬಲ್ವರ ವನ್ಯಜೀವಿ ಧಾಮದಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಮೇ 2023ರಲ್ಲಿ ಹರಿಯಾಣದ ಕಲೆಸರ್​ ವನ್ಯಜೀವಿ ಧಾಮದಲ್ಲಿ ದಾಖಲಾಗಿತ್ತು. ಆದಾದ ಮೂರು ತಿಂಗಳ ಬಳಿಕ ಆಗಸ್ಟ್​ನಲ್ಲಿ ಇದು ಹಿಮಾಚಲದ ಅರಣ್ಯದಲ್ಲಿ ಮತ್ತೆ ಕಾಣಿಸಿಕೊಂಡಿತ್ತು.

ತೀವ್ರಗೊಂಡ ಹುಡುಕಾಟ : ಇದೀಗ ಈ ಹುಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಪತ್ತೆಯಾಗಿರುವ ಸುದ್ದಿ ಬಂದಿದೆ. ಇದು ಹಿಮಾಚಲ ಮತ್ತು ಹರಿಯಾಣ ದಾಟಿ ಜಮ್ಮು ಮತ್ತು ಕಾಶ್ಮೀರ ತಲುಪಿರುವ ಸಾಧ್ಯತೆ ಇದೆ. ಅಲ್ಲಿದೆ 700 ರಿಂದ 800 ಕಿ.ಮೀ ದೂರ ಈ ಹುಲಿ ಗಡಿಗಳ ಎಲ್ಲೆ ಮೀರಿ ಪ್ರಯಾಣ ಮಾಡಿ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಇದು ರಜೌರಿಯಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆ ಇದೇ ಅದರ ಆವಾಸಸ್ಥಾನವೇ ಎಂಬ ಪ್ರಶ್ನೆಯೂ ಮೂಡಿದೆ. ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಸದ್ಯ, ಉತ್ತರಾಖಂಡ ಅರಣ್ಯ ಇಲಾಖೆ ಈ ಎಲ್ಲದರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ.

10 ತಿಂಗಳಿಂದ ಆತಂಕ: ಫೆಬ್ರವರಿಯಲ್ಲಿ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಿಂದ ಹೊರ ಬಂದಿದೆ ಎಂಬ ಕುರಿತು ಮಾಹಿತಿ ಇಲ್ಲ. ಫೆಬ್ರವರಿಯಲ್ಲಿ ಹಿಮಾಚಲದಲ್ಲಿ ಕಂಡಿತ್ತು. ಇದಾದ ಬಳಿಕ ಅದು ಆ ಭಾಗದಲ್ಲಿ ಕಂಡುಬರದೇ ಇರುವುದು ಅರಣ್ಯ ಇಲಾಖೆಗೆ ಚಿಂತೆ ಮೂಡಿಸಿದೆ.

ಇದನ್ನೂ ಓದಿ: 32 ವರ್ಷದಿಂದ ಸ್ನಾನ ಮಾಡದ ಚೋಟು ಬಾಬಾ; ತಲೆ ಮೇಲೆ ಧನವಾಲೆ ಬಾಬಾರಿಂದ ಬಾರ್ಲಿ ಕೊಯ್ಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.