ಬಾಗ್ದಾದ್(ಇರಾಕ್):ಇರಾಕ್ನಲ್ಲಿ ಮತ್ತೊಬ್ಬ ಸೋಷಿಯಲ್ ಮೀಡಿಯಾ ಸ್ಟಾರ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೈನವಿರೇಳಿಸುವ ಪಾಪ್ ಸಂಗೀತಕ್ಕೆ ನೃತ್ಯ ಮಾಡಿದ ಕಿರು ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡು ಪ್ರಸಿದ್ಧಿ ಪಡೆದಿದ್ದ ಟಿಕ್ಟಾಕ್ ಸ್ಟಾರ್ ಓಂ ಫಹಾದ್ ಕೊಲೆಯಾದವರು. ಈ ಬಗ್ಗೆ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ಬಾಗ್ದಾದ್‌ನಲ್ಲಿರುವ ಆಕೆಯ ಮನೆಯ ಮುಂದೆಯೇ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಬೈಕ್ನಲ್ಲಿ ಬಂದು ಕಾರಿನಲ್ಲಿ ಕುಳಿತಿದ್ದ ಓಂ ಫಹಾದ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಘಟನಾವಳಿಯ ಎಲ್ಲ ದೃಶ್ಯಗಳು ಪಕ್ಕದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಧಾರ್ಮಿಕ, ಸಾಮಾಜಿಕ ಕಟ್ಟಳೆಗೆ ಕೊಲೆ:ಇರಾಕ್ನಲ್ಲಿ ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯವಿಲ್ಲ. ಸಾಮಾಜಿಕ ಕಟ್ಟಳೆಗಳೆಲ್ಲವನ್ನೂ ಮೀರಿ ಬದುಕುತ್ತಿದ್ದ ಓಂ ಫಹಾದ್ರನ್ನು ಹಲವು ಬಾರಿ ಟಾರ್ಗೆಟ್ ಮಾಡಲಾಗಿತ್ತು. ಖ್ಯಾತ ಪಾಪ್ ಸಂಗೀತಕ್ಕೆ ಕುಣಿಯುತ್ತಿದ್ದ ಅವರು ಆ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಮಿಲಿಯನ್ಗಟ್ಟಲೆ ಹಿಂಬಾಲಕರನ್ನು ಹೊಂದಿದ್ದು, ಸೋಷಿಯಲ್ ಮೀಡಿಯಾದ ಸ್ಟಾರ್ ಆಗಿದ್ದರು.