ETV Bharat / health

ನಿಮ್ಮ ವಯಸ್ಸಿಗೆ ತಕ್ಕಂತೆ ಶುಗರ್​ ಲೆವಲ್ ಎಷ್ಟಿರಬೇಕು ಗೊತ್ತೇ? ಯಾವಾಗ ಶುರುವಾಗುತ್ತೆ ಡಯಾಬಿಟಿಸ್ ಸಮಸ್ಯೆ? ತಜ್ಞರು ತಿಳಿಸೋದು ಹೀಗೆ - BLOOD SUGAR LEVEL ACCORDING TO AGE

ರಕ್ತದಲ್ಲಿನ ಶುಗರ್​ ಲೆವಲ್​ ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ದೈಹಿಕ ಚಟುವಟಿಕೆಗಳು ವಿಭಿನ್ನವಾಗಿರುತ್ತವೆ. ಚಯಾಪಚಯ ಹಾಗೂ ಸಾಮಾನ್ಯ ಆರೋಗ್ಯದ ಅಂಶಗಳನ್ನು ಅವಲಂಬಿತವಾಗಿರುತ್ತದೆ. ಈ ಬಗ್ಗೆ ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

BLOOD SUGAR LEVEL ACCORDING TO AGE  MANAGING YOUR BLOOD SUGAR  NORMAL BLOOD SUGAR RANGE FOR ADULTS  NORMAL SUGAR LEVEL FOR EGED PERSON
ಸಾಂದರ್ಭಿಕ ಚಿತ್ರ (Freepik)
author img

By ETV Bharat Health Team

Published : 5 hours ago

Blood sugar level according to age: ಡಯಾಬಿಟಿಸ್ ಸಮಸ್ಯೆಯ ಲಕ್ಷಣಗಳನ್ನು ಗುರುತಿಸಲು ಹಾಗೂ ನಿರ್ವಹಿಸಲು ರಕ್ತದಲ್ಲಿನ ಶುಗರ್​ ಲೆವಲ್​ ತುಂಬಾ ಮುಖ್ಯವಾಗಿವೆ. ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ರಕ್ತದಲ್ಲಿನ ಶುಗರ್​ ಅತ್ಯಗತ್ಯವಾಗಿದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಹೆಚ್ಚಿದ್ದರೆ (ಹೈಪರ್ಗ್ಲೈಸೀಮಿಯಾ) ಹಾಗೂ ತುಂಬಾ ಕಡಿಮೆಯಿದ್ದರೆ (ಹೈಪೊಗ್ಲಿಸಿಮಿಯಾ), ಅನಿಯಂತ್ರಿತವಾಗಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಸಮಯದಲ್ಲಿ ಗ್ಲೂಕೋಸ್ ಸಂಬಂಧಿತ ಪರಿಸ್ಥಿತಿಗಳ ನಿಖರವಾದ ಆರಂಭಿಕ ಹಂತದಲ್ಲಿ ಪತ್ತೆ ಮಾಡಿ, ತಡೆಗಟ್ಟುವುದು, ನಿರ್ವಹಣೆಯು ವಯಸ್ಸು ಹಾಗೂ ಜೀವನಶೈಲಿಯ ಆಧಾರದ ಮೇಲೆ ಸಾಮಾನ್ಯ ರಕ್ತದಲ್ಲಿನ ಶುಗರ್​ ಲೆವಲ್​ ಅನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದೀಗ ವಯಸ್ಸಿನ ಪ್ರಕಾರ ರಕ್ತದಲ್ಲಿನ ಸಾಮಾನ್ಯ ಸಕ್ಕರೆ ಮಟ್ಟ ಎಷ್ಟು ಇರಬೇಕು? ಅದು ವಿವಿಧ ವಯಸ್ಸಿನವರಲ್ಲಿ ಹೇಗೆ ಏರಿಳಿತಗೊಳ್ಳುತ್ತದೆ? ಯಾವ ಪರಿಣಾಮಗಳನ್ನು ಉಂಟುಮಾಡುತ್ತದೆ? ಆರೋಗ್ಯಕರವಾದ ಶುಗರ್​ ಲೆವಲ್​ ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ತಿಳಿಯೋಣ.

ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ ಶುಗರ್​ ಲೆವಲ್​ ಎಷ್ಟಿರಬೇಕು?: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಎರಡು ಮುಖ್ಯ ಪರೀಕ್ಷೆಗಳ ಮೂಲಕ ಅಳೆಯಲಾಗುತ್ತದೆ. ಮೊದಲನೆಯದು, ಉಪವಾಸವಿದ್ದು ಅಥವಾ ಆಹಾರ ಸೇವಿಸುವುದಕ್ಕೂ ಮೊದಲು ರಕ್ತದಲ್ಲಿನ ಸಕ್ಕರೆ (Fasting blood sugar- FBS)- ಈ ಪರೀಕ್ಷೆಗೆ ಕನಿಷ್ಠ 8 ಗಂಟೆಗಳವರೆಗೆ ಆಹಾರದಿಂದ ದೂರವಿಬೇಕಾಗುತ್ತದೆ. ನಂತರ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಳೆಯಲಾಗುತ್ತದೆ. ಈ ಪರೀಕ್ಷೆಯು ನಿಮ್ಮ ದೇಹವು ಉಪವಾಸದ ಸ್ಥಿತಿಯಲ್ಲಿ ಗ್ಲೂಕೋಸ್ ಹೇಗೆ ಬಳಕೆಯಾಗುತ್ತದೆ ಎನ್ನುವುದು ತಿಳಿಯುತ್ತದೆ. ಈ ಪರೀಕ್ಷೆಯು ಮೂಲ ನಿಯಮಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ದೊರೆಯುತ್ತದೆ.

ಎರಡನೆಯದು, ರಾಂಡಮ್ ಬ್ಲಡ್ ಶುಗರ್ (RBS)- ನೀವು ಕೊನೆಯದಾಗಿ ಯಾವಾಗ ಆಹಾರ ಸೇವಿಸಿದ್ದೀರಿ ಎಂಬುದನ್ನು ಲೆಕ್ಕಿಸದೆ, ಯಾವುದೇ ಸಮಯದಲ್ಲಿ ಗ್ಲೂಕೋಸ್ ಮಟ್ಟವನ್ನು ಅಳೆಯಲಾಗುತ್ತದೆ. ಹೈಪರ್ಗ್ಲೈಸೀಮಿಯಾ ಅಥವಾ ಹೈಪೊಗ್ಲಿಸಿಮಿಯಾದ ಲಕ್ಷಣಗಳನ್ನು ಗುರುತಿಸಲು ಈ ಪರೀಕ್ಷೆ ಮಾಡಲಾಗುತ್ತದೆ. ಏಕೆಂದರೆ ಇದು ಯಾವುದೇ ಸಮಯದಲ್ಲಿ ನಿಮ್ಮ ದೇಹವು ಗ್ಲೂಕೋಸ್‌ನೊಂದಿಗೆ ಹೇಗೆ ವ್ಯವಹರಿಸುತ್ತದೆ ಎಂಬುದನ್ನು ತಿಳಿಯಲಾಗುತ್ತದೆ. ನಿಮ್ಮ ದೇಹವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಈ ಎರಡೂ ಪರೀಕ್ಷೆಗಳು ಅತ್ಯಂತ ಅಮೂಲ್ಯವಾದ ಮಾಹಿತಿ ನೀಡುತ್ತವೆ. ಮಧುಮೇಹ ಅಥವಾ ಇತರ ಚಯಾಪಚಯ ಅಸ್ವಸ್ಥತೆಗಳ ಲಕ್ಷಣಗಳನ್ನು ಗುರುತಿಸಲು ಈ ಪರೀಕ್ಷೆಯು ತುಂಬಾ ಮುಖ್ಯವಾಗಿದೆ.

medlineplus.gov ವೆಬ್​ಸೈಟ್​ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ, ವಯಸ್ಸಿಗೆ ಅನುಗುಣವಾಗಿ ರಕ್ತದಲ್ಲಿನ ಸಾಮಾನ್ಯ ಸಕ್ಕರೆ ಮಟ್ಟವನ್ನು ಈ ಚಾರ್ಟ್​ನ ಮೂಲಕ ತಿಳಿದುಕೊಳ್ಳಬಹುದು. ರಾಂಡಮ್ ಬ್ಲಡ್ ಶುಗರ್ ಲೆವಲ್​ ಮತ್ತು ಫಾಸ್ಟಿಂಗ್​ ಬ್ಲಡ್ ಶುಗರ್ ಪರೀಕ್ಷೆಗೆ ತಕ್ಕಂತೆ ನಾರ್ಮಲ್​ ಶುಗರ್​ ಲೆವಲ್​ ಎಷ್ಟು ಇರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಯಸ್ಸಿನ ಗುಂಪುಫಾಸ್ಟಿಂಗ್​ ಬ್ಲಡ್ ಶುಗರ್ ಲೆವಲ್ (mg/dL)ರಾಂಡಮ್ ಬ್ಲಡ್ ಶುಗರ್ ಲೆವಲ್​ (mg/dL)ಆರೋಗ್ಯ ತಜ್ಞರ ಪ್ರಮುಖ ಮಾಹಿತಿ
ಚಿಕ್ಕ ಮಕ್ಕಳು (0 ರಿಂದ 3 ವರ್ಷಗಳು)60- 11060- 180ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರು ಆಗುವ ಸಾಧ್ಯತೆಯಿದೆ. ಉಪವಾಸವಿದ್ದಾಗ ಶುಗರ್ ಲೆವಲ್​ ಸಾಮಾನ್ಯವಾಗಿ 60 ರಿಂದ 110 ಎಂಜಿ/ಡಿಎಲ್ ನಡುವೆ ಇಳಿಕೆಯಾಗುತ್ತದೆ. ಆಹಾರ ಸೇವನೆ ಮಾಡಿದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ವಲ್ಪ ಹೆಚ್ಚಾಗುತ್ತದೆ.
ಮಕ್ಕಳು (3 ರಿಂದ 12 ವರ್ಷಗಳು)70- 14070- 180ಈ ಶುಗರ್​ ಲೆವಲ್​ ಮಕ್ಕಳಲ್ಲಿ ಸ್ವಲ್ಪ ಹೆಚ್ಚಾಗಿರುತ್ತದೆ. ಮುಖ್ಯವಾಗಿ ಕುಟುಂಬದವರಲ್ಲಿ ಯಾರಿಗಾದರೂ ಮಧುಮೇಹವಿದ್ದರೆ ಮೇಲ್ವಿಚಾರಣೆ ಮಾಡುವುದು ಮುಖ್ಯ.
ಹದಿಹರೆಯದವರು (13 ರಿಂದ 18 ವರ್ಷಗಳು)70- 14070- 180ಹದಿಹರೆಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಗ್ಲೂಕೋಸ್ ಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಬೆಳವಣಿಗೆಯ ಸಮಯದಲ್ಲಿ ತಾತ್ಕಾಲಿಕ ಇನ್ಸುಲಿನ್ ಪ್ರತಿರೋಧವಾಗಿ ಬೆಳೆಯಬಹುದು ಎನ್ನುತ್ತಾರೆ ತಜ್ಞರು.
ವಯಸ್ಕರು (19+ ವರ್ಷಗಳು)70- 13070- 180ಈ ವಯಸ್ಸಿನವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚು ಸ್ಥಿರವಾಗಿರುತ್ತದೆ. ಪ್ರಿಡಿಯಾಬಿಟಿಸ್ ಅಥವಾ ಟೈಪ್ 2 ಮಧುಮೇಹವನ್ನು ತಡೆಗಟ್ಟಲು, ಉಪವಾಸವಿದ್ದ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು 130 ಎಂಜಿ/ಡಿಎಲ್ ಮೀರಬಾರದು.

ರಕ್ತದಲ್ಲಿನ ಶುಗರ್​ ಲೆವಲ್​ನಿಂದ ಪರಿಣಾಮ ಬೀರುವ ಅಂಶಗಳೇನು?: ಆಹಾರ ಸೇವಿಸುವುದರ ಜೊತೆಗೆ ಇತರ ಹಲವು ಕಾರಣಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಏರಿಳಿತಗಳು ಆಗುತ್ತದೆ.

  • ವಯಸ್ಸು
  • ಆಹಾರ ಪದ್ಧತಿ
  • ದೈಹಿಕ ಚಟುವಟಿಕೆಗಳು
  • ಔಷಧಿಗಳು
  • ವೈದ್ಯಕೀಯ ಸ್ಥಿತಿ ಸೇರಿದಂತೆ ಇತರೆ ಅಂಶಗಳು

ಗಮನಿಸಬೇಕಾದ ವಿಷಯವೇನು?:

ನಿಮಗೆ ಅಧಿಕ ರಕ್ತದ ಶುಗರ್​ ಲೆವಲ್​ (ಹೈಪರ್ಗ್ಲೈಸೀಮಿಯಾ) ಇದ್ದರೆ, ಉಪವಾಸವಿದ್ದ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು 130 ಎಂಜಿ/ಡಿಎಲ್​ಗಿಂತ ಹೆಚ್ಚಿರುತ್ತದೆ. ರಾಂಡಮ್ ಬ್ಲಡ್ ಶುಗರ್ ಲೆವಲ್​ 180 ಎಂಜಿ/ಡಿಎಲ್​ಗಿಂತ ಹೆಚ್ಚಿರುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ನಿರಂತರವಾಗಿ ಈ ಮಿತಿಗಳಿಗಿಂತ ಹೆಚ್ಚಿದ್ದರೆ, ನಿಮಗೆ ಪ್ರೀ ಡಯಾಬಿಟಿಕ್ ಇಲ್ಲವೇ, ಡಯಾಬಿಟಿಕ್ ಇರಬಹುದು. ನಿಯಂತ್ರಿಸದಿದ್ದರೆ ಇದು ಹೃದಯ ಕಾಯಿಲೆ, ನರಗಳ ತೊಂದರೆ ಹಾಗೂ ಮೂತ್ರಪಿಂಡದ ಕಾಯಿಲೆಗಳಂತಹ ಗಂಭೀರ ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ನಿಮಗೆ ಕಡಿಮೆ ರಕ್ತದ ಶುಗರ್​ ಲೆವಲ್​ (ಹೈಪೊಗ್ಲಿಸಿಮಿಯಾ) ಇದ್ದರೆ, ಉಪವಾಸವಿದ್ದ ಸಮಯದಲ್ಲಿ ರಕ್ತದ ಸಕ್ಕರೆ ಮಟ್ಟವು 70 ಎಂಜಿ/ಡಿಎಲ್​ಗಿಂತ ಕಡಿಮೆಯಿರುತ್ತದೆ ಮತ್ತು ರಾಂಡಮ್ ಬ್ಲಡ್ ಶುಗರ್ ಲೆವಲ್​ 60 ಎಂಜಿ/ಡಿಎಲ್​ಗಿಂತ ಕಡಿಮೆಯಿರುತ್ತದೆ. ನೀವು ತಲೆತಿರುಗುವಿಕೆ, ಗೊಂದಲ, ಮೂರ್ಛೆ ಹೋಗುವುದು, ಅಪರೂಪದ ಸಮಯದಲ್ಲಿ ಆರೋಗ್ಯದ ಸಮಸ್ಯೆಗಳು ಕಾಡುತ್ತವೆ. ಇದು ಸಾಮಾನ್ಯವಾಗಿ ಇನ್ಸುಲಿನ್ ಅಥವಾ ಮಧುಮೇಹ ವಿರೋಧಿ ಔಷಧಿಗಳನ್ನು ತೆಗೆದುಕೊಳ್ಳುವ ರೋಗಿಗಳಲ್ಲಿ, ದೀರ್ಘಕಾಲದವರೆಗೆ ಉಪವಾಸ ಮಾಡುವವರಲ್ಲಿ ಹಾಗೂ ದೀರ್ಘಕಾಲದವರೆಗೆ ವ್ಯಾಯಾಮ ಮಾಡುವವರಲ್ಲಿ ಕಂಡುಬರುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://medlineplus.gov/ency/patientinstructions/000086.htm

ಓದುಗರಿಗೆ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.