ಶಿವಮೊಗ್ಗ: ರಾಜ್ಯ ಸರ್ಕಾರದೆದುರು ಇತ್ತೀಚಿಗೆ ಶರಣಾಗಿದ್ದ ಇಬ್ಬರು ನಕ್ಸಲರಾದ ಮುಂಡಗಾರು ಲತಾ ಹಾಗೂ ವನಜಾಕ್ಷಿ ಅವರನ್ನು ಇಂದು ತೀರ್ಥಹಳ್ಳಿ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದರು.
ಇಬ್ಬರ ವಿರುದ್ಧ ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಇದರಿಂದ ಜಿಲ್ಲಾ ಪೊಲೀಸರು ಬಾಡಿ ವಾರೆಂಟ್ ಮೇಲೆ ಬೆಂಗಳೂರಿನಿಂದ ಕರೆತಂದು ಕೋರ್ಟ್‌ಗೆ ಹಾಜರುಪಡಿಸಿದ್ದರು. ಇಬ್ಬರಿಗೂ ನ್ಯಾಯಾಲಯ ಎರಡು ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಈ ಮೂಲಕ 25 ವರ್ಷಗಳ ಹಿಂದೆ ದಾಖಲಿಸಿದ್ದ ಪ್ರಕರಣಗಳ ವಿಚಾರಣೆಗೆ ಹಾಜರುಪಡಿಸಿದಂತಾಗಿದೆ.
![Two surrendered Naxalites appear in court: Remanded in judicial custody for two days](https://etvbharatimages.akamaized.net/etvbharat/prod-images/10-02-2025/kn-smg-02-naxal-court-7204213_10022025171631_1002f_1739187991_707.jpg)
ಎರಡು ದಿನಗಳ ನಂತರ ಆಗುಂಬೆ ಪೊಲೀಸರು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಈ ವೇಳೆ ಹಿಂದಿನ ಪ್ರಕರಣಗಳ ಕುರಿತು ಪೊಲೀಸರು ಅವರಿಂದ ಮಾಹಿತಿ ಪಡೆಯುವರು ಎಂದು ಇಲಾಖಾ ಮೂಲಗಳು ತಿಳಿಸಿವೆ.
ಮುಂಡಗಾರು ಲತಾ ಹಾಗೂ ವನಜಾಕ್ಷಿ ವಿರುದ್ಧ ಹೊಸನಗರದ ನಗರ ಪೊಲೀಸ್ ಠಾಣೆಯಲ್ಲೂ ಸಹ ಪ್ರಕರಣವಿದೆ. ಇದರಿಂದ ನಾಳೆ ಇಬ್ಬರನ್ನು ಹೊಸನಗರ ಪೊಲೀಸ್ ಠಾಣೆಗೆ ಹಾಜರುಪಡಿಸಲಿದ್ದಾರೆ.
ಮುಂಡಗಾರು ಲತಾ ವಿರುದ್ಧದ ಪ್ರಕರಣ: ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಮುಂಡಗಾರು ಲತಾ ವಿರುದ್ಧ ಆಗುಂಬೆ ಠಾಣೆಯಲ್ಲಿ ಮೂರು ಕೇಸ್ ದಾಖಲಾಗಿವೆ. ಆಗುಂಬೆ ಠಾಣೆಯಲ್ಲಿ 12/9, 51/09 ಹಾಗೂ 03/12 ಕೇಸ್‌ನಲ್ಲಿ ಕ್ರಮವಾಗಿ A-3, A-7 ಹಾಗೂ A-4 ಆರೋಪಿಯಾಗಿರುವ ಇವರನ್ನು ಹಾಜರುಪಡಿಸಲಾಗಿದೆ. ಅದೇ ರೀತಿ ಹೊಸನಗರ ಠಾಣೆ 212/08 ಕೇಸ್‌ನಲ್ಲಿ ನಕ್ಸಲರನ್ನು ಶಿವಮೊಗ್ಗ ಪೊಲೀಸರು, ಹಾಜರುಪಡಿಸಲಿದ್ದಾರೆ. ವನಜಾಕ್ಷಿ ವಿರು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಮತ್ತೋರ್ವ ನಕ್ಸಲ್ ಶರಣಾಗತಿ: ಕೋಟೆಹೊಂಡ ರವಿ ಇಂದೇ ಮುಖ್ಯವಾಹಿನಿಗೆ - NAXAL SURRENDER